ಸೆಟ್ ನಲ್ಲಿ ಶ್ರೀನಿಧಿ ಶೆಟ್ಟಿ ಅವರು ಊಟ ಮಾಡುವಾಗ ಮಾಡಿಕೊಂಡ ಯಡವಟ್ಟು ನೋಡಿ..
Updated:Tuesday, April 26, 2022, 08:54[IST]

ಈಗಾಗಲೇ ರಾಷ್ಟ್ರಮಟ್ಟದಲ್ಲಿ ಕನ್ನಡದ ಕೆಜಿಎಫ್ ಚಿತ್ರ ಸದ್ದು ಮಾಡಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ಹೊರದೇಶದಲ್ಲೂ ಕೆಜಿಎಫ್ ಚಿತ್ರ ಸಕತ್ತಾಗಿಯೇ ಸೌಂಡ್ ಮಾಡುತ್ತಿದೆ. ಕೆಜಿಎಫ್ ಚಿತ್ರದ ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮದೇ ಆದ ವಿಭಿನ್ನ ರೀತಿಯ ಅಭಿನಯದ ಮೂಲಕ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ, ಇಡೀ ದೇಶದ ತುಂಬೆಲ್ಲಾ ಹೆಚ್ಚು ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಹೊರದೇಶದವರೂ ಗುರುತಿಸುವಂತಾಗಿದೆ.
ಕೆಜಿಎಫ್ ಚಿತ್ರದಲ್ಲಿ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ಅವರು ಕೂಡ ಸೂಪರ್ ಆ್ಇ ಅಭಿನಯ ಮಾಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಹಾಗೇನೆ ಇವರ ಅಭಿನಯಕ್ಕೂ ಸಹ ಫಿದಾ ಆಗಿ ಅಭಿಮಾನಿಗಳು ಇವರ ನಟನೆಗೆ ಸೈ ಎಂದಿದ್ದಾರೆ. ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ ಈಗ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮಿದ್ದಾರೆ. ಪರಭಾಷೆಗಳಿಂದಲೂ ಶ್ರೀನಿಧಿ ಶೆಟ್ಟಿಗೆ ಆಫರ್ ಗಳು ಬರುತ್ತಿವೆ. ಎಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀನಿಧಿ ಶೆಟ್ಟಿ, ಓದುವಾಗಲೇ ಮಾಡಲಿಂಗ್ ಮಾಡುತ್ತಿದ್ದರು.
ಯಶ್ ಅವರ ಜೊತೆ ಅಭಿನಯಿಸಲು ಈಗಾಗಲೇ ಏಳು ಸಿನಿಮಾಗಳ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು. ಕೋಬ್ರಾ ಎಂಬ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ ಅವರು, ಸಿನಿಮಾದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಈ ಫೋಟೋ ಕೆಲ ದಿನಗಳ ಕಾಲ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರ ಮಾದಕ ಫೋಟೋಗಳು ವೈರಲ್ ಆಗಿವೆ. ಇನ್ನು ಸಲಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಶ್ರೀನಿಧಿ ಶೆಟ್ಟಿ ಅಭಿನಯಿಸಲಿದ್ದಾರೆ. ಶ್ರೀನಿಧಿ ಅವರು ಕೆಜಿಎಫ್ ಸಿನಿಮಾ ಸೆಟ್ ನಲ್ಲಿ ಊಟ ಮಾಡುವಾಗ ಮಾಡಿಕೊಂಡ ಯಡವಟ್ಟುಗಳ ಫೋಟೋ ಇದೀಗ ವೈರಲ್ ಆಗಿವೆ. ಬಾಯಿ ತುಂಬಾ ಏನೋ ತುಂಬಿಕೊಂಡು ಜಗಿಯುತ್ತಿರುವ ವೀಡಿಯೋ ಸಕತ್ತಾಗಿದೆ.