Srinidhi Shetty : ಕೋಬ್ರಾ ಚಿತ್ರಕ್ಕೆ ಕೆಜಿಎಫ್ ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ..! ಎಷ್ಟು ಕೋಟಿ ಗೊತ್ತಾ ?

By Infoflick Correspondent

Updated:Friday, July 15, 2022, 08:23[IST]

Srinidhi Shetty : ಕೋಬ್ರಾ ಚಿತ್ರಕ್ಕೆ ಕೆಜಿಎಫ್ ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ..! ಎಷ್ಟು ಕೋಟಿ ಗೊತ್ತಾ ?

ಕನ್ನಡದ ಬೆಡಗಿ ಕೆಜಿಎಫ್ ಮೂಲಕ ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡಿದ ನಟಿ ಶ್ರೀನಿಧಿ ಶೆಟ್ಟಿ (Srindhi Shetty) ಅವರು ಇದೀಗ ಅವರ ಮುಂಬರುವ ಚಿತ್ರಕ್ಕೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿ ಅತ್ತ ಕಾಲಿವುಡ್ ಅಂಗಳದಲ್ಲಿ ಗುಸು ಗುಸು ಸುದ್ದಿ ಎದ್ದಿದೆ. ತಮಿಳು ಚಿತ್ರ ಇದಾಗಿದ್ದು ನಟ ಚಿಯಾನ್ ವಿಕ್ರಂ (Chiyaan Vikram) ಅವರು ನಟಿಸಿರುವ ಕೋಬ್ರಾ ಚಿತ್ರಕ್ಕೆ ನಟಿ ಶ್ರೀನಿಧಿ ಶೆಟ್ಟಿ ಅವರು ನಾಯಕಿಯಾಗಿದ್ದಾರೆ. ಸಿನಿಮಾ ಇನ್ನೇನು ತೆರೆಗೆ ಬರಲಿದೆ. ಇದೀಗ ನಟಿ ಶ್ರೀನಿಧಿ ಸಂಭಾವನೆ ವಿಚಾರದಲ್ಲಿ ಈ ಸಿನಿಮಾ ಮೂಲಕ ಡಬಲ್ ಆಗಿದ್ದು ಕೆ ಜಿ ಎಫ್ ಚಿತ್ರಕ್ಕಿಂತಲೂ ಡಬಲ್ ಹಣ ಈ ಕೋಬ್ರಾ ಸಿನಿಮಾಗೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ..ಹೌದು ರಾಕಿ ಬಾಯ್ಗೆ ನಟಿಯಾಗಿದ್ದ ರೀನಾ ಪಾತ್ರದ ನಟಿ ಶ್ರೀನಿಧಿ ಶೆಟ್ಟಿ (Srindhi Shetty) ಅವರು ವಿಕ್ರಮ್ ಅವರ ಜೊತೆ ಇದೆ ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.      

ಹೌದು. ಅದು ಅಜಯ್ ಜ್ಞಾನಮುತ್ತು ಅವರ ನಿರ್ದೇಶನದ ಈ ಸಿನಿಮಾ ಕೋಬ್ರಾದಲ್ಲಿ ನಟ ವಿಕ್ರಂ ಕಾಣಿಸಿಕೊಳ್ಳುತ್ತಿದ್ದು ಹೆಚ್ಚು ವಿಶೇಷ. ಹಾಗೆ ಹಲವು ಗೆಟಪ್ನಲ್ಲಿ ಚಿಯಾನ್ ವಿಕ್ರಮ್ ಅವರು ಈ ಕೋಬ್ರಾ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಇದರ ನಡುವೆ ಕೆಜಿಎಫ್ ಬೆಡಗಿಗೆ ಎರಡು ಪಟ್ಟು ಕೆಜಿಎಫ್ ಸಿನಿಮಾಗಿಂತ ನಟಿಗೆ ಸಂಭಾವನೆ ನೀಡಲಾಗಿದ್ದು ಕೆಜಿಎಫ್ ಭಾಗ-2 ಸಿನಿಮಾ ಗೆ ಶ್ರೀನಿಧಿ ಶೆಟ್ಟಿ ಅವರು ಒಟ್ಟು ಮೂರು ಕೋಟಿ ಸಂಭಾವನೆ ಪಡೆದಿದ್ದರು. ಅದೇ ರೀತಿ ಈ ಸಿನಿಮಾಗೆ ಒಟ್ಟು ಆರರಿಂದ ಏಳು ಕೋಟಿ ಸಂಭಾವನೆ ಪಡೆದಿದ್ದು, ಇದು ಅತ್ತ ಕೋಬ್ರಾ ಚಿತ್ರತಂಡಕ್ಕೂ ಲಾಭ ಇದೆ. ಕಾರಣ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿದ ನಟಿ ಅಲ್ಲವೇ. ಈ ಮೂಲಕ ಮತ್ತೆ ಸದಾ ಕೇಳಿ ಬರುತ್ತಿರುವ ಹಾಗೆ ನಟಿಯರಿಗೆ ಸಂಭಾವನೆ ಕಡಿಮೆ ಎನ್ನುವ ಮಾತಿಗೆ ಇದೀಗ ಏಳು ಕೋಟಿ ಸಂಭಾವನೆ ಪಡೆದು ಆ ಮಾತನ್ನು ಸುಳ್ಳು ಮಾಡಿದ್ದಾರೆ ಎನ್ನಬಹುದು.

ಹೌದು ಕೋಬ್ರಾ (Cobra) ಸಿನಿಮಾ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಆರರಿಂದ ಏಳು ವರ್ಷ ಸಮಯ ಮೀಸಲಿಟ್ಟಿದ್ದ ಕೆಜಿಎಫ್ ಚಿತ್ರದ ನಟಿಯ ಮೂರನೇ ಸಿನಿಮಾ ಈ ಕೋಬ್ರಾ ಆಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೇ ಕೋಬ್ರಾ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹರಸಿ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...