Srinidhi Shetty : ಪ್ಯಾನ್ ಇಂಡಿಯಾ ಮೂಲಕ ಉಪೇಂದ್ರ ಸಿನಿಮಾದಲ್ಲಿ ನಟನೆ ಗಿಟ್ಟಿಸಿಕೊಂಡ ಕೆಜಿಎಫ್ ಬೆಡಗಿ..! ಯಾವುದು ಗೊತ್ತೇ

By Infoflick Correspondent

Updated:Wednesday, July 6, 2022, 13:31[IST]

Srinidhi Shetty : ಪ್ಯಾನ್ ಇಂಡಿಯಾ ಮೂಲಕ ಉಪೇಂದ್ರ ಸಿನಿಮಾದಲ್ಲಿ ನಟನೆ ಗಿಟ್ಟಿಸಿಕೊಂಡ ಕೆಜಿಎಫ್ ಬೆಡಗಿ..! ಯಾವುದು ಗೊತ್ತೇ

ಕೆಜಿಎಫ್ ಕನ್ನಡದ ಗೋಲ್ಡನ್ ಚಿತ್ರ ಆಗಿದ್ದು ಈ ಚಿತ್ರದ ಮೂಲಕ ಮಿಸ್ ಇಂಡಿಯಾ ವಿನ್ನರ್ ಆಗಿದ್ದ ನಟಿ ಶ್ರೀನಿಧಿ ಶೆಟ್ಟಿ ಅವರು ಕೂಡ ಇಡೀ ಪ್ರಪಂಚಕ್ಕೆ ಪರಿಚಯ ಆಗಿದ್ದರು. ಯಶ್ ಅವರ ಅಭಿನಯದ ಕೆಜಿಎಫ್ ಫ್ಯಾನ್ ಇಂಡಿಯಾ ಸಿನಿಮಾ ಒಂದು ಮತ್ತು ಭಾಗ ಎರಡರಲ್ಲಿ ನಟಿ ಶ್ರೀನಿಧಿ ಶೆಟ್ಟಿಯವರೇ ನಾಯಕಿಯಾಗಿದ್ದು, ಎರಡನೇ ಭಾಗದಲ್ಲಿ ಅವರ ಪಾತ್ರ ಮುಕ್ತಾಯ ಆಗಿದೆ ಎನ್ನಲಾಗಿ ಕೆಜಿಎಫ್ ಭಾಗ 2 ಸಿನಿಮಾ ವೀಕ್ಷಿಸಿದ ಬಳಿಕ ಗೊತ್ತಾಗಿದೆ. ಹೌದು ಇದೀಗ ಒಂದರ ಮೇಲೊಂದರಂತೆ ಕೆಜಿಎಫ್ ಬಳಿಕ ಸಿನಿಮಾ ಆಫರ್ ಗಳನ್ನು ಪಡೆಯುತ್ತಿದ್ದಾರೆ , ಭಾರತ ಸಿನಿಮಾರಂಗದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಇರುವ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾದಲ್ಲಿ ಒಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಹೆಚ್ಚು ನಟನೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ನಿರ್ದೇಶನವನ್ನು ಬಿಟ್ಟು ಬಹಳ ದಿನಗಳವೇ ಕಳೆದಿತ್ತು. ಇದೀಗ ಮತ್ತೆ ಯು ಐ  ಟೈಟಲ್ ಮೂಲಕ ಒಂದು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಉಪೇಂದ್ರ ಅವರು ನಿರ್ದೇಶನ ಮಾಡುವುದಾಗಿ ಹೇಳಿಕೆ ಕೊಟ್ಟು ದೊಡ್ಡ ಸುದ್ದಿ ಆದ ವಿಷಯ ನಿಮಗೂ ಗೊತ್ತು.   

ನಿರ್ದೇಶಕ ಉಪೇಂದ್ರ ಅವರ ಹೊಸ ಸಿನಿಮಾಗೆ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಅದು ಯುಐ ಎನ್ನುವ ಟೈಟಲ್ ಮೂಲಕ. ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಮೂಡುವಂತೆ ಮಾಡಿದ್ದಾರೆ. ಹಾಗೆ ಸಿನಿಮಾ ವೀಕ್ಷಕರಿಗೆ ಸರಿಯಾಗಿಯೇ ಪೋಸ್ಟರ್ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ ಎಂದು ಹೇಳಬಹುದು.

ಇದೀಗ ಯು ಐ ಸಿನಿಮಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರು ನಾಯಕಿಯಾಗಿ ಅಭಿನಯ ಮಾಡಲಿದ್ದು, ನಟ ಉಪೇಂದ್ರ ಅವರಿಗೆ ನಟಿಯಾಗಲಿದ್ದಾರಂತೆ. ಇನ್ನು ಯಾರೆಲ್ಲಾ ಸ್ಟಾರ್ಸ್ ನಟ ನಟಿಯರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಹೊಸ ಅಪ್ಡೇಟ್ಗಳಿಗಾಗಿ ನಾವು ಕಾಯಬೇಕು. ಜೊತೆಗೆ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಇನ್ನಷ್ಟು ಹೆಚ್ಚು ಅವಕಾಶಗಳು ಶ್ರೀನಿಧಿ ಶೆಟ್ಟಿಗೆ ಸಿಗಲಿ ಎಂದು ಹಾರೈಸಿ ಧನ್ಯವಾದಗಳು..