ರಾಕಿ ಹುಡುಗಿ ಜೊತೆ ಭುವನ್ ಗೌಡ ಮಾತುಕತೆ..! ಯಶ್ ರಿಯಾಕ್ಷನ್ ಹೀಗಿತ್ತು ನೋಡಿ..!

By Infoflick Correspondent

Updated:Thursday, April 21, 2022, 09:05[IST]

ರಾಕಿ ಹುಡುಗಿ ಜೊತೆ ಭುವನ್ ಗೌಡ ಮಾತುಕತೆ..! ಯಶ್ ರಿಯಾಕ್ಷನ್ ಹೀಗಿತ್ತು ನೋಡಿ..!

ಕೆಜಿಎಫ್ ಚಾಪ್ಟರ್ ಟು ಸಿನಿಮಾ ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ.. ಪ್ರಪಂಚಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಅಬ್ಬರಕ್ಕೆ ದಾಖಲೆಗಳು ಒಂದೊಂದೇ ಉಡೀಸ್ ಆಗುತ್ತಿದೆ ಎಂದರೆ ತಪ್ಪಾಗಲಾರದು. ಹೌದು ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಭಾಗ ಎರಡರ ಸಿನಿಮಾದಲ್ಲಿಯೂ ತುಂಬಾ ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ಸಿನಿಮಾದ ಮೇಕಿಂಗ್ ಇರಬಹುದು, ಸಿನಿಮಾದ ಬ್ಯಾಗ್ರೌಂಡ್ ಸ್ಕೋರ್ ಇರಬಹುದು, ಹಾಗೆ ಎಡಿಟಿಂಗ್ ಭಾಗ, ಎಲಿವೇಶನ್ ಕೂಡ ಕಣ್ಮನ ಸೆಳೆಯುವಂತೆ ಕೆಜಿಎಫ್ ಸಿನಿಮಾ ಎಲ್ಲದರಲ್ಲಿಯೂ ಪಾಸಾಗಿದೆ. ಇದೊಂದು ಮಾನ್ಸ್ಟರ್ ಹಿಟ್ ಸಿನಿಮಾ ಆಗಿದ್ದು ಇಡಿ ವರ್ಲ್ಡ್ವೈಡ್ ಅಭಿಮಾನಿಗಳು ರಾಕಿ ಭಾಯ್ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ. ಹಾಗೆ ಒನ್ ಮ್ಯಾನ್ ಶೋ ಎನ್ನುತ್ತಿದ್ದಾರೆ.

ಹೌದು ಅಧೀರನ ಪಾತ್ರದಲ್ಲಿ ಕಾಣಿಸಿರುವ ನಟ ಸಂಜಯ್ ದತ್ ಅವರ ಅಭಿನಯ ಟಾಪ್ ನಾಚ್. ಹಾಗೂ ರಮಿಕಾ ಸೇನ್ ನ ರವಿನಾ ಟಂಡನ್ ಪಾತ್ರ ಕೂಡ ಮೆಚ್ಚುವಂತದ್ದು. ಕೆಜಿಎಫ್ ಚಿತ್ರತಂಡವು ಚಿತ್ರ ಬಿಡುಗಡೆ ಮುನ್ನ ಟಾಲಿವುಡ್, ಬಾಲಿವುಡ್, ಹಾಗೂ ಕಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ನೀಡಿ ಸಿನಿಮಾದ ಪ್ರಮೋಶನ್ ಮಾಡಿಕೊಂಡು ಬಂದಿದ್ದರು. ಫ್ರೀ ರಿಲೀಸ್ ಇವೆಂಟ್ ಷೋ ನಡೆಸಿದ್ದರು. ಅತ್ತ ಹೈದರಾಬಾದಿಗೆ ಹೋದಾಗ ಕೆಜಿಎಫ್ ಚಿತ್ರತಂಡದ ಎಲ್ಲಾ ಸದಸ್ಯರುಗಳು ಸಹ ಆಗಮಿಸಿದ್ದು, ನಿರ್ದೇಶಕ ಪ್ರಶಾಂತ್ ನೀಲ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ ಜೊತೆಗೆ ಕೆಜಿಎಫ್ ಚಿತ್ರದ ಡಿಓಪಿ ಭುವನ್ ಗೌಡ ಅವರು ಆಗಮಿಸಿದ್ದರು.

ಹೌದು ಶ್ರಿನಿಧಿ ಶೆಟ್ಟಿ ಜೊತೆ ಭುವನ್ ಗೌಡ ಅವರು ಕುಳಿತು  ಸಂಭಾಷಣೆ ನಡೆಸಿದ ಈ ದೃಶ್ಯದ ವಿಡಿಯೋ ನೋಡಲು ತುಂಬಾ ಮುದ್ದಾಗಿ ಕಾಣುತ್ತಿದೆ. ಎಷ್ಟು ಸರಳತೆಯಿಂದ ಇಬ್ಬರು ಜೊತೆಗೆ ಕುಳಿತುಕೊಂಡು ಮಾತನಾಡುತ್ತಾರೆ, ತಾನು ಒಬ್ಬ ನಟಿ ಎಂಬ ಯಾವ ಅಹಂಕಾರ ಇಲ್ಲದೆ ಸರಳತೆಯಿಂದ ಭುವನ್ ಗೌಡ ಅವರ ಜೊತೆ ಕುಳಿತು ಮಾತನಾಡುತ್ತಿರುವ ಶ್ರೀನಿಧಿ ಶೆಟ್ಟಿ ಅವರ ನಡೆ ನೆಟ್ಟಿಗರಿಗೆ ಇಷ್ಟ ಆಗಿದೆಯಂತೆ. ಹಾಗೆ ಇಬ್ಬರ ಸ್ನೇಹ ಹೀಗೆ ಇರಲಿ ಎನ್ನುತ್ತಿದ್ದಾರೆ ನೆಟ್ಟಿಗರು. ಹೌದು ಅದರ ವಿಡಿಯೋ ತುಣುಕು ಇಲ್ಲಿದೆ. ಯಶ್ ಅವರ ರಿಯಾಕ್ಷನ್ ಕೂಡ ಇಲ್ಲಿ ನೀವೂ ನೋಡಬಹುದು. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು..