ಸೀರಿಯಲ್ ಬಿಟ್ಟು ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ ಸೃಜನ್ ಲೋಕೇಶ್

By Infoflick Correspondent

Updated:Tuesday, September 13, 2022, 09:06[IST]

ಸೀರಿಯಲ್  ಬಿಟ್ಟು ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ ಸೃಜನ್ ಲೋಕೇಶ್

ನಟ, ನಿರೂಪಕ, ನಿರ್ಮಾಪಕ ಸೃಜನ್ ಲೋಕೇಶ್ ಅವರು ಈಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಕಹುಟ್ಟಿದಾಗಿನಿಂದ ಚಿತ್ರರಂಗದ ಜೊತೆಗೆ ಸಂಪರ್ಕದಲ್ಲಿರುವ ಸೃಜನ್‌ ಲೋಕೇಶ್‌ ಅವರ ತಾತ ಸುಬ್ಬಯ್ಯ ನಾಯ್ಡು. ನಟ ಲೋಕೇಶ್ ಮತ್ತು ನಟಿ ಗಿರಿಜಾ ಲೋಕೇಶ್ ಅವರ ಮಗ ಸೃಜನ್‌ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ನಟನೆಗಷ್ಟೇ ಸೀಮಿತವಾಗಿರದೆ ನಿರೂಪಕನಾಗಿ, ನಿರ್ಮಾಪಕನಾಗಿಯೂ ಹೆಸರು ಮಾಡಿದ್ದಾರೆ. ಮಜಾ ಟಾಕೀಸ್ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. 

ಕಿರುತೆರೆಯಲ್ಲೂ ಎಕ್ಸ್‌ ಪೆರಿಮೆಂಟ್‌ ಮಾಡಿದ ಸೃಜನ್‌ ಲೋಕೇಶ್‌ ಅವರು ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕೆಲ ರಿಯಾಲಿಟಿ ಶೋಗಳನ್ನು ಹೋಸ್ಟ್‌ ಮಾಡಿದ್ದರು. ಇನ್ನು ಕೆಲ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿದ್ದರು. ಇದೀಗ ನಿರ್ದೇಶಕರಾಗಲು ಮುಂದಾಗಿದ್ದಾರೆ. ಈ ಸಿಹಿ ಸುದ್ದಿ ಬಗ್ಗೆ ಸ್ವತಃ ಸೃಜನ್‌ ಲೋಕೇಶ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಸೃಜನ್ ಲೋಕೇಶ್‌ ಅವರು ನಿರ್ದೇಶಕರಾಗಲಿದ್ದಾರೆ. ಲೋಕೇಶ್ ಪ್ರೊಡಕ್ಷನ್ಸ್ ಹಾಗೂ ಸಂದೇಸ್ ಪ್ರೊಡಕ್ಷನ್ಸ್ ಸಂಸ್ಥೆಗಳು ಜೊತೆಯಾಗಿ ಸಿನಿಮಾ ನಿರ್ಮಿಸಲಿದೆ. 

ಹಿರಿಯ ನಿರ್ಮಾಪಕರಾದ ಸಂದೇಶ ನಾಗರಾಜ್ ಅವರ ಜೊತೆಗೆ ಸೇರಿ ಸೃಜನ್‌ ಲೋಕೇಶ್‌ ಅವರು ಈ ಕೆಲಸವನ್ನು ಮಾಡುತ್ತಿದ್ದಾರೆ. ಹಾರರ್‌, ಕಾಮಿಡಿ ಸಿನಿಮಾ ನಿರ್ದೇಶಿಸಲು ಸೃಜನ್‌ ಅವರು ಮುಂದಾಗಿದ್ದಾರೆ. ಈ ಸಿನಿಮಾಗೆ ಸೃಜನ್‌ ಲೋಕೇಶ್ ಅವರೇ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ. ಕೆ.ಎಲ್. ರಾಜಶೇಖರ್ ಸಂಭಾಷಣೆ ಇರಲಿದೆ. ಈ ಚಿತ್ರಕ್ಕೆ ಸೃಜನ್‌ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್‌ ಅವರು ಕೂಡ ನಟಿಸಲಿದ್ದಾರಂತೆ. ಈ ಚಿತ್ರಕ್ಕೆ ಎಚ್.ಸಿ ವೇಣು ಅವರು ಛಾಯಾಗ್ರಹಣ ಹಾಗೂ ಬಿಗ್‌ ಬಾಸ್‌ ವಿನ್ನರ್‌ ಚಂದನ್‌ ಶೆಟ್ಟಿ ಸಂಗೀತವಿರಲಿದೆ.