ಸ್ಟಾರ್ ಸುವರ್ಣ ಇಸ್ಮಾರ್ಟ್ ಜೋಡಿಯಲ್ಲಿ ಗೆದ್ದವರು ಯಾರು ಪಡೆದ ನಗದು ಎಷ್ಟು ಇಲ್ಲಿದೆ ವಿವರ

By Infoflick Correspondent

Updated:Friday, September 16, 2022, 21:50[IST]

ಸ್ಟಾರ್ ಸುವರ್ಣ ಇಸ್ಮಾರ್ಟ್ ಜೋಡಿಯಲ್ಲಿ ಗೆದ್ದವರು ಯಾರು ಪಡೆದ ನಗದು ಎಷ್ಟು ಇಲ್ಲಿದೆ ವಿವರ

ಸ್ಟಾರ್ ಸುವರ್ಣದಲ್ಲಿ ಇಸ್ಮಾರ್ಟ್ ಜೋಡಿ ಕಾರ್ಯಕ್ರಮವು ಪ್ರಸಾರವಾಗಿ ಇಸ್ಮಾರ್ಟ್ ಜೋಡಿ ಕಾರ್ಯಕ್ರಮ ಗ್ರಾಂಡ್ ಫಿನಾಲೆ ಸೆಪ್ಟೆಂಬರ್12 ರಂದು ನಡೆದಿದೆ. ಇಸ್ಮಾರ್ಟ್ ಜೋಡಿಯ ವಿಜೇತರಾಗಿ ಯಾರು? ಅವರಿಗೆ ಸಿಕ್ಕ ಬಹುಮಾನ ನಗದು ಎಷ್ಟು ?‌ಇಲ್ಲಿದೆ ವಿವರ ಪ್ರೇಕ್ಷಕರಿಗೆ ಮನೋರಂಜನೆ ನೀಡಿದ ಇಸ್ಮಾರ್ಟ್ ಜೋಡಿ, ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಶೋವಾಗಿತ್ತು. ಸ್ಟಾರ್ ಸುವರ್ಣದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಶೋ ಪ್ರಸಾರವಾಗುವ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದು ಕೊಂಡಿತ್ತು. 

ಶೋ ಮೂಲಕ ಎಷ್ಟೋ ಜನ ತಮ್ಮನ್ನು ತಾವು ಅರಿತು ಕೊಂಡು, ಒಬ್ಬರು ಶೋ ನಲ್ಲಿ ವಿನ್ನರ್ ಆದರೆ, ಇನ್ನು ಕೆಲವರು ಒಬ್ಬರು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿನ್ನರ್ ಆಗಿದ್ದಾರೆ. ಹಲವಾರು ದಂಪತಿಗಳ ನಡುವಿನ ಸ್ಪರ್ಧೆಯಲ್ಲಿ 9 ಜೋಡಿಗಳು ಫಿನಾಲೆ ಹಂತವನ್ನು ತಲುಪಿದ್ದರು. 

ಪುನೀತ ಆಚಾರ್ಯ-ಶ್ರೀರಾಮ್ ಸುಳ್ಳ, ಜೈ ಜಗದೀಶ್-ವಿಜಯಲಕ್ಷ್ಮಿ, ಸುಮನ್ ನಗರ್ ಕರ್-ಗುರುದೇವ್ ನಾಗರಾಜ ಫಿನಾಲೆಗೆ ಬಂದಿದ್ದರು. ದಿಶಾ-ಶಶಾಂಕ್, ಅಕ್ಷತಾ ಗೌಡ-ವಿನಯ್ ಗೌಡ, ವಿದ್ಯಾಶ್ರೀ-ರಘು, ಹ್ಯಾರಿಯೆಟ್ ಲೂಯಿಸ್-ರಿಚರ್ಡ್ ಲೂಯಿಸ್, ಸಪ್ನ ದೀಕ್ಷಿತ್- ಅಶ್ವಿನ್ ದೀಕ್ಷಿತ್, ಇಂಪನಾ ಜಯರಾಜ್-ಅಜಿತ್ ಜಯರಾಜ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. 

ಇಸ್ಮಾರ್ಟ್ ಜೋಡಿಯ ವಿನ್ನರ್ ಆಗಿ ಶ್ರೀರಾಮ್ ಹಾಗೂ ಪುನೀತಾರವರು ಹೊರ ನಡೆದಿದ್ದಾರೆ. ಇಸ್ಮಾರ್ಟ್ ಜೋಡಿಯ ವಿಜೇತರಾದ ಶ್ರೀ ರಾಮ್ ಹಾಗೂ ಪುನೀತಾರವರಿಗೆ ಟ್ರೋಫಿ ಸೇರಿದಂತೆ ಏಳು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಕೊಡಲಾಗಿದೆ.

ಈ ಇಸ್ಮಾರ್ಟ್ ಜೋಡಿಯ ರನ್ನರ್ ಆಪ್ ಆಗಿ ಸಪ್ನ ದೀಕ್ಷಿತ್ ಹಾಗೂ ಅಶ್ವಿನ್ ದಂಪತಿಗೆ ಮೂರು ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ.