Pavithra Lokesh : ಪವಿತ್ರಾ ಲೋಕೇಶ್ ಹಾಗು ತನ್ನ ಮದುವೆ ಕುರಿತು ಶಾಕಿಂಗ್ ಸಾಕ್ಷಿ ನೀಡಿದ ಸುಚೇಂದ್ರ ಪ್ರಸಾದ

By Infoflick Correspondent

Updated:Tuesday, July 5, 2022, 16:21[IST]

Pavithra Lokesh :  ಪವಿತ್ರಾ ಲೋಕೇಶ್ ಹಾಗು ತನ್ನ ಮದುವೆ ಕುರಿತು ಶಾಕಿಂಗ್ ಸಾಕ್ಷಿ ನೀಡಿದ ಸುಚೇಂದ್ರ ಪ್ರಸಾದ

ಪವಿತ್ರಾ ನರೇಶ್ ಜೊತೆಗಿನ ಸಂಬಂಧದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವಿವಿಧ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರು ಜೊತೆಗೆ ಇದ್ದಾರೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ವಿಚ್ಛೇದನ  ನೀಡದೆ  ಮತ್ತೊಬ್ಬ ಮಹಿಳೆಯೊಂದಿಗೆ ಮದುವೆ ಆಗುವುದು  ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

 ಪವಿತ್ರಾ ಲೋಕೇಶ್ ತನ್ನದು ಸುಚೇಂದ್ರ ಪ್ರಸಾದ ಅವರೊಡನೆ ಮದಿವೆಯಾಗಿಲ್ಲ ನಾವು ಜೊತೆಗೆ ಇದ್ದೇವು ಮಾತ್ರ ಎಂದು ಹೇಳಿದ್ದರು. ಸುಚೇಂದ್ರ ಪ್ರಸಾದ ನಮ್ಮದು ಪಾಣಿಗ್ರಹಣ ಮದುವೆ ಎಂದು ಹೇಳಿದ್ದರು. ಆದರೆ ಇದೀಗ ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ ಅವರ ಸಕುಟುಂಬದ ಫೋಟೊ ಎಲ್ಲೆಡೆ ಹರಿದಾಡಿದ್ದು ಸಾಕ್ಷಿ ಸಿಕ್ಕಂತಾಗಿದೆ.  

 ಬಲ್ಲ ಸುದ್ದಿ ಮೂಲಗಳಿಂದ ತಿಳಿದು ಬಂದಿರುವ ಸಂಗತಿ ಏನಂದ್ರೆ  ಪವಿತ್ರಾ ಅವರನ್ನ ಮದುವೆಯಾಗಿದ್ದೇನೆ ಎಂದು ಸುಚೇಂದ್ರ ಪ್ರಸಾದ್ ಸಾಕ್ಷಿ ಸಮೇತವಾಗಿ ಹೇಳಿದ್ದಾರೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ 16 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ ಎಂದು ಸುಚೀಂದ್ರ ಪ್ರಸಾದ್ ಹೇಳಿದ್ದಾರೆ. ದಂಪತಿಗಳು ಎಂದು ಸಾಬೀತುಪಡಿಸಲು ಪುರಾವೆಗಳಿವೆ. ತನ್ನ ಪಾಸ್ಪೋರ್ಟ್ನಲ್ಲಿ ಪವಿತ್ರಾ ಪತ್ನಿ ಎಂದು ನಮೂದಿಸಿದ್ದು, ಆಕೆಯ ಪಾಸ್ಪೋರ್ಟ್ನಲ್ಲಿ ಪತಿ ಎಂದು ನಮೂದಿಸಲಾಗಿದೆ ಎಂದು ಅವರು ಹೇಳಿದ್ದಾರಂತೆ.  ಎಂದು ತಿಳಿದು ಬಂದಿದೆ

 ಆಧಾರ್ ಕಾರ್ಡ್ನಲ್ಲಿ ಕೂಡ ಪತಿ-ಪತ್ನಿ ಎಂದು ನೋಂದಾಯಿಸಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಪವಿತ್ರಾ ತನ್ನನ್ನು ಮದುವೆಯಾಗಿಲ್ಲ, ಜೊತೆಗಿದ್ದು ಬೇರೆಯಾಗಿದ್ದೇನೆ ಎಂದು ಏಕೆ ಹೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. .  ಇದರ ವಿಷಯವಾಗಿ ಪವಿತ್ರ ಲೋಕೇಶ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ