Pavithra lokesh : ಪವಿತ್ರಾ ಲೋಕೇಶ್ ನಿಂದ ಕಷ್ಟ ಅನುಭವಿಸಿದ ಸುಚೇಂದ್ರ ಪ್ರಸಾದ್ ಈಗ ಹೇಳಿದ್ಯೇನು ?

By Infoflick Correspondent

Updated:Sunday, July 3, 2022, 12:30[IST]

Pavithra lokesh : ಪವಿತ್ರಾ ಲೋಕೇಶ್ ನಿಂದ ಕಷ್ಟ ಅನುಭವಿಸಿದ ಸುಚೇಂದ್ರ ಪ್ರಸಾದ್ ಈಗ ಹೇಳಿದ್ಯೇನು ?

ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆಯುತ್ತಿದೆ. ಸುಚೇಂದ್ರ ಪ್ರಸಾದ್ ಹಾಗೂ ತನ್ನ ನಡುವೆ ಮದುವೆಯಾಗಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸುಚೇಂದ್ರ ಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಮದುವೆ ವಿಷಯಕ್ಕೆ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.ಪವಿತ್ರ ಅವ್ರೊಂದಿಗೆ ನನ್ನದು ಪಾಣಿಗ್ರಹಣ. ಕೈ ಹಿಡಿದು ನಡೆಯುತ್ತೇನೆ. ನಡೆಸಿಕೊಳ್ಳುತ್ತೇನೆ ಎಂದು ಒಪ್ಪಿಕೊಂಡಿದ್ದು. ಹಾಗಾಗಿ ಕೈ ಹಿಡಿದಿದ್ದನ್ನು ಪಾಲಿಸುವುದು ನನ್ನ ಧರ್ಮ ಎಂದು ಪಾಲಿಸಿದ್ದೇನೆ." ಅವರು ಎಂತಹದ್ದೇ ತೀರ್ಮಾನ. ಯಾವುದೇ ಸಂದರ್ಭದಲ್ಲಿ ಸೌಕರ್ಯ ಎಂದು ಹೇಳುತ್ತಾರೋ ಅದಕ್ಕೆ ನಾನು ಬದ್ಧನಿದ್ದೇನೆ. ಅವರೊಟ್ಟಿಗೆ ಎಂತಹದ್ದೇ ಸ್ಥಿತಿಯಲ್ಲೂ ಪಾಲಿಸಬೇಕಾದ ಧರ್ಮವಿದೆ. ಆ ಧರ್ಮವನ್ನು ನಾನು ಪಾಲಿಸುತ್ತೇನೆ." ಎಂದಿದ್ದಾರೆ.    

ಆರಂಭದ ದಿನಗಳಲ್ಲಿ ಪವಿತ್ರಾ ಲೋಕೇಶ್ ಮತ್ತು ನನ್ನ ನಡುವಿನ ಸಂಬಂಧ ಚೆನ್ನಾಗಿತ್ತು. ಆದ್ರೆ, ನಮಗೆ ಇಬ್ಬರು ಮಕ್ಕಳಾದ ನಂತ್ರ ಆಕೆ ಅವರನ್ನ ಒಂಟಿಯಾಗಿ ಬಿಟ್ಟಬಿಟ್ಟರು ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ. ಈ ವಿಚಾರದಲ್ಲಿ ಆಕೆಯನ್ನ ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಕೇಳಲಿಲ್ಲ ಎಂದು ಸುಚೇಂದ್ರ ಪ್ರಸಾದ್ ತಿಳಿಸಿದ್ದಾರೆ. 

ಮೊದಲಿನಿಂದಲೂ ಆಕೆಯಿಂದ ಅನೇಕರಿಗೆ ಅನ್ಯಾಯವಾಗಿದೆ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ. ನಾನು ನಲುಗಿದ್ದೀನಿ.. ಅವರ ಬೇಕು, ಬೇಡಗಳನ್ನ ಗಮನಿಸಿಕೊಳ್ಳುತ್ತಾ, ಚಿಂತನೆ ಆಲೋಚನಾ ಕ್ರಮಗಳನ್ನ ಓಲೈಸುತ್ತಾ, ಅವುಗಳನ್ನ ಸರಿಮಾಡುತ್ತಾ.. ಈಗಲೂ ಆ ಆರೋಪ, ಆ ಆಕ್ಷೇಪ ಇದೆ. ಈಗ ಮಹಾನುಭಾವನ ಸರದಿ ಈಗ. ಆ ಮಹಾನುಭಾವ ನಲುಗುತ್ತಾನೆ. ನಾನು ಭವಿಷ್ಯ ನುಡಿಯುತ್ತೇನೆ, ನರೇಶ್ʼರನ್ನ ಮದುವೆಯಾದ್ರೂ ಸಹ ಆರು ತಿಂಗಳಲ್ಲಿ ಅವ್ರ ಹಣ ಬಾಚಿ ಅವ್ರನ್ನ ಬಿಟ್ಟು ಹೋಗುತ್ತಾರೆ. ಕೊನೆಗೆ ದರೋಡೆ ಮಾಡುವ ಮನಸ್ಥಿತಿ ಅವರದ್ದು' ಎಂದಿದ್ದಾರೆ.