Pavithra Lokesh : ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಮದುವೆ ಬಗ್ಗೆ ಸುಚೇಂದ್ರ ಪ್ರಸಾದ್‌ ಹೇಳಿದ್ದೇನು..?

By Infoflick Correspondent

Updated:Thursday, June 30, 2022, 20:08[IST]

Pavithra Lokesh : ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಮದುವೆ ಬಗ್ಗೆ ಸುಚೇಂದ್ರ ಪ್ರಸಾದ್‌ ಹೇಳಿದ್ದೇನು..?

ಈಗ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ವಿಚಾರ ಎಂದರೆ ಅದು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಅವರದ್ದು. ಪವಿತ್ರಾ ಅವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಸುಚೇಂದ್ರ ಪ್ರಸಾದ್‌ ಅವರಿಂದ ದೂರಾಗಿದ್ದು, ತೆಲುಗು ನಟ ನರೇಶ್‌ ಜೊತೆಗೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ನರೇಶ್‌ ಪತ್ನಿ ರಮ್ಯ ರಘುಪತಿ ತಮಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ನರೇಶ್‌ ಪವಿತ್ರಾ ಲೋಕೇಶ್‌ ಅವರನ್ನು ವಿವಾಹವಾಗಲು ತಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಈ ಬಗ್ಗೆ ಪವಿತ್ರಾ ಲೋಕೇಶ್‌ ಅವರು ನಿನ್ನೆ ಸ್ಪಷ್ಟನೆ ನೀಡಿದ್ದರು. ರಮ್ಯ ರಘುಪತಿ ಅವರು ಮಾಡಿದ ಆರೋಪಗಳು ಸುಳ್ಳು. ನರೇಶ್‌ ತುಂಬಾ ಒಳ್ಳೆಯ ವ್ಯಕ್ತಿ. ಇನ್ನು ತಾವು ಸುಚೇಂದ್ರ ಪ್ರಸಾದ್‌ ಅವರಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಮಾಡಿಲ್ಲ ಎಂದಿದ್ದರು. . ಅತ್ತ ನರೇಶ್‌ ಹಾಗೂ ಅವರ ಪತ್ನಿ ರಮ್ಯ ರಘುಪತಿ ಕೂಡ ವಿಚ್ಛೇಧನ ಪಡೆದಿಲ್ಲ. ವಿಚ್ಛೇಧನ ಪಡೆಯುವುದಕ್ಕೂ ಮುನ್ನ ಈ ಸುದ್ದಿ ಹರಿದಾಡುತ್ತಿರುವುದರ ಬಗ್ಗೆ ಸ್ವತಃ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಸ್ಪಷ್ಟನೆ ನೀಡಬೇಕಿದೆ.

ಈ ನಡುವೆ ಸುಚೇಂದ್ರ ಪ್ರಸಾದ್‌ ಅವರು ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ. ಈ ವಿಚಾರದ ಬಗ್ಗೆ ರಮ್ಯ ಅವರ ಜೊತೆಗೆ ಮಾತನಾಡಿದ್ದೇನೆ. ನನ್ನ ಕೈಯಲ್ಲಿ ಏನೂ ಇಲ್ಲ. ನಾನು ಅಯ್ಯೋ ಎನ್ನಬಹುದು ಅಷ್ಟೇ. ಒಬ್ಬರ ಸುಖಕ್ಕೋಸ್ಕರ ಇನ್ನೊಬ್ಬರ ಬದುಕನ್ನು ಹಾಳು ಮಾಡುವುದು ಎಷ್ಟು ಸರಿ. ನನಗೆ ಕೋಪ ಜಾಸ್ತಿ ಎಂದು ಇನ್ನೊಬ್ಬರ ಮನೆಯನ್ನು ಹಾಳು ಮಾಡುತ್ತಿರುವುದು ತಪ್ಪು. ನಾನು ಈ ವಿಚಾರದಲ್ಲಿ ಏನನ್ನೂ ಮಾತನಾಡಲು ಸಾಧ್ಯವಿಲ್ಲ. ಆ ಹೆಣ್ಣು ಮಗುವಿನ ಬಗ್ಗೆ ಕನಿಕರ ತೋರಬಹುದಷ್ಟೇ ಎಂದು ಮಾತನಾಡಿದ್ದಾರೆ.

VIDEO CREDIT : POWER TV