ಕೆಜಿಎಫ್ ಸಿನಿಮಾ ಬಗ್ಗೆ ಸುದೀಪ್ ಅವರು ಹಾಗೆ ಹೇಳಿದ್ದು ನಿಜನಾ..? ಇಲ್ಲಿದೆ ಅಸಲಿ ಸತ್ಯ..!!

By Infoflick Correspondent

Updated:Wednesday, April 20, 2022, 20:36[IST]

ಕೆಜಿಎಫ್ ಸಿನಿಮಾ ಬಗ್ಗೆ ಸುದೀಪ್ ಅವರು ಹಾಗೆ ಹೇಳಿದ್ದು ನಿಜನಾ..? ಇಲ್ಲಿದೆ ಅಸಲಿ ಸತ್ಯ..!!

ಕನ್ನಡದ ಬಹುನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ 2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಆರೇ ದಿನದಲ್ಲಿ ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಸೇರಿ 650 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗುತ್ತಿದೆ. ಹೀಗಿರುವಾಗ ನಟ ಕಿಚ್ಚ ಸುದೀಪ್ ಅವರ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಅಸಲಿಗೆ ಇದು ನಿಜಾನಾ ಎನ್ನುವ ಪ್ರಶ್ನೆ ಕೂಡ ಚರ್ಚೆಯಾಗುತ್ತಿದೆ. ಹೌದು ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ ಬಗ್ಗೆ ಇದೀಗ ಮಾಧ್ಯಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಸುದ್ದಿಯಾಗಿದ್ದು ಹೆಚ್ಚು ಹೆಮ್ಮೆ ತರುವ ವಿಷಯ. 

ಹೌದು ಕೆಜಿಎಫ್ ಚಿತ್ರದ ಬಗ್ಗೆ ಸುದೀಪ್ ಅವರನ್ನು ಪ್ರಶ್ನೆ ಮಾಡಲಾಗಿತ್ತು ಎಂದು ಈ ವಿಡಿಯೋದಲ್ಲಿ ತಿಳಿದುಬಂದಿದೆ. ಆಗ ಸುದೀಪ್ ಅವರು, ನಾನು ಆ ಚಿತ್ರದಲ್ಲಿ ಇರಲಿಲ್ಲ ಸರ್ ಎಂಬುದಾಗಿ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಕನ್ನಡದ ಒಂದು ಹೆಮ್ಮೆಯ ಸಿನಿಮಾ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ವೇಳೆ ಈ ರೀತಿ ಸುದೀಪ್ ಅವರು ಮಾತನಾಡಿದ್ದು ತಪ್ಪು ಎಂದು ಕೆಲವರು ಅನಿಸಿಕೆ ಹಂಚಿಕೊಂಡರೆ, ಇನ್ನೂ ಕೆಲವರು ಇದು ತುಂಬಾ ಹಳೆಯ ವಿಡಿಯೋ, ಕೆಜಿಎಫ್ ಚಿತ್ರದಲ್ಲಿ ನೀವು ನಟಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಸುದೀಪ್ ಅವರು ಈ ರೀತಿ ಪ್ರತಿಕ್ರಿಯೆ ಮಾಡಿದ್ದರು, ಆದರೆ ಅದೇ ವಿಡಿಯೋವನ್ನ ಇದೀಗ ಕೆಜಿಎಫ್ ಚಿತ್ರ ಬಿಡುಗಡೆಯಾದ ಬಳಿಕ, ಯಾರೋ ದುಷ್ಕರ್ಮಿಗಳು ಎಡಿಟ್ ಮಾಡಿ ಮಾರ್ಪಾಡು ಮಾಡಲಾಗಿ ಈ ರೀತಿ ಹರಿಬಿಟ್ಟು ಕನ್ನಡದ ಸ್ಟಾರ್ ನಟರ ನಡುವೆ ತಂದು ಇಡುವ ಕೆಲಸ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.  

ಕಿಚ್ಚ ಸುದೀಪ್ ಅವರ ಅಭಿಮಾನಿಗಳು ತುಂಬಾ ಆಕ್ರೋಶ ಹೊರಹಾಕುತ್ತಿದ್ದಾರೆ, ನಮ್ಮ ಪ್ರೀತಿಯ ನಟ ಸುದೀಪ್ ಅವರು ಎಲ್ಲಾ ಸಿನಿಮಾಗಳಿಗೂ ಪ್ರೋತ್ಸಾಹ ನೀಡುತ್ತಾರೆ. ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿ ಆ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎನ್ನುತ್ತಾರೆ, ಹೀಗಿರುವಾಗ ಹೀಗೆ ಹೇಳಿರುವುದಕ್ಕೆ ಸಾಧ್ಯವೇ ಇಲ್ಲ, ಇದರ ಹಿಂದೆ ಯಾರಿದ್ದಾರೆ, ಈ ವಿಡಿಯೋ ವೈರಲ್ ಮಾಡುತ್ತಿರುವುದರ ಹಿಂದಿನ ಆ ಉದ್ದೇಶ ಬೇರೆಯಾಗಿದೆ. ಆದರೆ ಏನೇ ಮಾಡಿದರೂ ನಮ್ಮ ನಟ ಸುದೀಪ್ ಅವರ ಮೇಲಿನ ಗೌರವ ಹಾಗೂ ಪ್ರೀತಿ ಕಿಂಚಿತ್ತೂ ಕಡಿಮೆಯಾಗಲ್ಲ ಎಂದು ಅವರ ಫ್ಯಾನ್ಸ್ ಈಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ನೀವು ಕೂಡ ಆ ವಿಡಿಯೋ ನೋಡಿದ್ದರೆ, ಆ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿ ಬಗ್ಗೆ ಕಾಮೆಂಟ್ ಮಾಡಿ ಧನ್ಯವಾದಗಳು.

(video credit : news first live )