Sudeep : ಇದ್ದಕ್ಕಿದ್ದಂತೆ ಲೈವ್ ನಲ್ಲಿ ಕಿಚ್ಚ ಸುದೀಪ್ ಕ್ಷಮೆಯಿರಲಿ ಎಂದಿದ್ದೇಕೆ..? ಅದು ಯಾರಿಗೆ ಗೊತ್ತಾ..?

By Infoflick Correspondent

Updated:Wednesday, July 13, 2022, 18:19[IST]

Sudeep :  ಇದ್ದಕ್ಕಿದ್ದಂತೆ ಲೈವ್ ನಲ್ಲಿ ಕಿಚ್ಚ ಸುದೀಪ್ ಕ್ಷಮೆಯಿರಲಿ ಎಂದಿದ್ದೇಕೆ..? ಅದು ಯಾರಿಗೆ ಗೊತ್ತಾ..?

ನಟ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದ ಮೋಸ್ಟ್ ನಂಬರ್ ಒನ್ ಟಾಪ್ ನಟರ ಪಟ್ಟಿಯಲ್ಲಿ ಇದ್ದಾರೆ. ಹಾಗೆ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಿಗೆ ಎಲ್ಲಾ ಸಿನಿಮಾರಂಗದಲ್ಲಿಯೂ ಕೂಡ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು ಇರುವುದು ವಿಶೇಷ. ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಹೌದು ಸದಾ ಸಿನಿಮಾ ಪ್ರೀತಿಸುವ ಕಿಚ್ಚ ಸುದೀಪ್ ಅವರು ಕನ್ನಡದ ಸಿನಿಮಾಗಳ ಜೊತೆ ಕರ್ನಾಟಕವನ್ನು ಎಲ್ಲರಿಗೂ ಮುಟ್ಟಿಸಬೇಕು ಜಗತ್ತಿಗೆ ನಮ್ಮ ಶಕ್ತಿ ತೋರಿಸಬೇಕು, ನಮ್ಮ ಕನ್ನಡವನ್ನು ಎಲ್ಲೆಡೆ ಮುಟ್ಟಿಸಬೇಕು ಎಂದು ಸಿನಿಮಾಗಳ ಮೂಲಕ ಹೆಚ್ಚು ಪರಿತಪಿಸುತ್ತಾರೆ. ಹಾಗೆ ಜಗತ್ವಿಕ್ಯಾತಿ ಮಾಡಬೇಕು  ಎಂಬುದೆ ಅವರ ಆಶಯ ಆಗಿದೆ. ಅದೇ ಕಾರಣಕ್ಕಾಗಿ ಬಹು ನಿರೀಕ್ಷಿತ ಅವರ ಚಿತ್ರ ವಿಕ್ರಾಂತ್ ರೋಣ ಸಿನಿಮಾ ಟೈಟಲ್ ಲಾಂಚ್ ಮಾಡಲು ವಿಶ್ವದ ದೊಡ್ಡ ಕಟ್ಟಡ ದುಬೈಯಲ್ಲಿರುವ ಬುರ್ಖಲಿಫ ಮೇಲೆ ಕನ್ನಡದ ಧ್ವಜದ ಜೊತೆ ವಿಕ್ರಾಂತ್ ರೋಣ ಸಿನಿಮಾ ಲೋಗೋ ಲಾಂಚ್ ಮಾಡಿದ್ದರು. 

ಹೌದು ಇದೀಗ ಯಶಸ್ವಿ ನಟರಾಗಿರುವ ಕಿಚ್ಚ ಸುದೀಪ್ ಅವರು ಸಿನಿಮಾಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹೊಸಬರ ಸಿನಿಮಾಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಕಿಚ್ಚ ಸುದೀಪ್ ಅವರು ಇದೀಗ ಇದ್ದಕ್ಕಿದ್ದಂತೆ ಲೈವ್ ನಲ್ಲಿ ಬಂದು ಒಬ್ಬರಿಗೆ ಕ್ಷಮೆ ಕೂಡ ಕೇಳಿದ್ದಾರೆ. ಹಾಗೆ ಅದಕ್ಕೆ ವಿವರಣೆ ನೀಡಿದ ಕಿಚ್ಚ ಸುದೀಪ್ ಅವರು ಯಾರಿಗೆ ಕ್ಷಮೆ ಕೇಳಿದ್ದಾರೆ ಗೊತ್ತಾ.? ಇಲ್ಲಿದೆ ನೋಡಿ ಮಾಹಿತಿ. ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್, ಹಾಗೆ ರಿಯಲ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟ ಉಪೇಂದ್ರ ಅವರ ಅಣ್ಣನ ಮಗನಾದ ನಟ ನಿರಂಜನ್ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು ನಮ್ಮ ಹುಡುಗರು ಸಿನಿಮಾ ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮಕ್ಕೆ ಸುದೀಪ್ ಅವರನ್ನು ಉಪೇಂದ್ರ ಅವರು ಪರ್ಸನಲ್ ಆಗಿ ಬರುವಂತೆ ಆಹ್ವಾನ ನೀಡಿದ್ದರಂತೆ.

ಆದರೆ ಆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಗದಿರುವ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ಉಪೇಂದ್ರ ಮತ್ತು ಅವರ ಅಣ್ಣನ ಮಗ ನಿರಂಜನ್ ಅವರ ಬಳಿ ಕ್ಷಮೆಯನ್ನ ಯಾಚಿಸಿದ್ದು ವಿಡಿಯೋ ಮೂಲಕ ಕಾರಣ ತಿಳಿಸಿದ್ದಾರೆ.. ಹೌದು ನಾನು ಬರಬೇಕು ಎಂದು ಹೆಚ್ಚು ಪ್ರಯತ್ನಪಟ್ಟೆ, ಆದರೆ ನನ್ನ ಕಾಲು ತುಂಬಾ ನೋವಿಗೆ ಒಳಗಾಗಿದೆ. ನನಗೆ ಬರಲು ಆಗಲಿಲ್ಲ.  ಐ ಹೋಪ್ ನಾನು ಯಾವ ನಿಮ್ಮ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ಮಿಸ್ ಮಾಡಿಲ್ಲ.. ಇದೊಂದು ಬಾರಿ ನನ್ನನ್ನು ಕ್ಷಮಿಸಿಬಿಡಿ ನಮ್ಮ ಹುಡುಗರ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ ಕಿಚ್ಚ ಸುದೀಪ್ ಅವರ ಈ ಸರಳತೆಯ ಮಾತು. ಕಿಚ್ಚ ಸುದೀಪ್ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆ ಹೇಳಿ. ವಿಡಿಯೋವನ್ನ ನೋಡಿ ಶೇರ್ ಮಾಡಿ ಧನ್ಯವಾದಗಳು..( video credit : lion tv kannada )