Sudeep : ನಟ ಸುದೀಪ್ ಅವರನ್ನ ನಿಂದಿಸಿದ ಯುವಕ..! ಗರಂ ಆದ ನಂದ ಕಿಶೋರ್ ಹೇಳಿದ್ದೆ ಬೇರೆ ನೋಡಿ
Updated:Monday, July 4, 2022, 14:24[IST]

ಕನ್ನಡದ ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾ ವಿಕ್ರಾಂತ್ ರೋಣ ಇದೇ ತಿಂಗಳು 28ಕ್ಕೆ ಭರ್ಜರಿಯಾಗಿ ತೆರೆಗೆ ಬರಲು ರೆಡಿಯಾಗಿದೆ. ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬಿಜಿಯಾಗಿದ್ದಾರೆ. ಹಾಗೆ ಕಳೆದ ತಿಂಗಳು ಕನ್ನಡ ಚಿತ್ರರಂಗದ ಸ್ಟಾರ್ ನಟರ ನಡುವೆ ಸಿನಿಮಾದ ಟ್ರೈಲರ್ ಇವೆಂಟ್ ಕೂಡ ನಡೆದಿತ್ತು. ಇದೀಗ ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ಬಿಜಿ ಇರುವ ನಟ ಕಿಚ್ಚ ಸುದೀಪ್ ಅವರಿಗೆ ಒಬ್ಬ ಯುವಕನು ಈ ಹಿಂದೆ ಆನ್ಲೈನ್ ಗೇಮ್ ಪ್ರಮೋಟ್ ಮಾಡಿದಕ್ಕೆ ನಿಂದಿಸಿದ್ದಾನೆ ಹಾಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಹಾಗೆ ಕೆಲ ವಿಚಾರಗಳ ಮೂಲಕ ಹೇಳಿಕೆ ಕೊಟ್ಟಿದ್ದು ಕಿಚ್ಚ ಸುದೀಪ್ ಅವರ ವಿರುದ್ಧ ಮಾತನಾಡಿದ್ದಾನೆ ಎಂದು ತಿಳಿದುಬಂದಿದೆ.
ಇದೆಲ್ಲವನ್ನು ಗಮನಿಸಿದ ಕಿಚ್ಚ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಆ ಯುವಕನ ಹುಡುಕಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹೌದು ಇದೇ ವಿಚಾರವಾಗಿ ಕನ್ನಡದ ಖ್ಯಾತ ನಿರ್ದೇಶಕ ನಂದ ಕಿಶೋರ್ ಅವರು ಕೂಡ ಮಾತನಾಡಿದ್ದು ಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ಯುವಕನ ವಿರುದ್ಧ ಗರಂ ಆಗಿದ್ದಾರೆ. ಕನ್ನಡ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ಕನ್ನಡ ಧೀಮಂತ ನಾಯಕರ ಬಗ್ಗೆ ನಾವು ಏನು ಮಾತನಾಡುತ್ತಿದ್ದೇವೆ ಎನ್ನುವ ಅರಿವು ಇರಲಿ. ನೀನು ಮಾಡಿದ್ದು ತಪ್ಪು ಆ ಹುಡುಗ ಸಾವನ್ನಪ್ಪುವುದಕ್ಕೆ ಸುದೀಪ್ ಸರ್ ಕಾರಣ ಎಂದು ನಿನ್ನ ಕೈಯಲ್ಲಿ ಸಾಬೀತು ಮಾಡಕ್ಕಾಗುತ್ತಾ, ಮೊದಲು ಫ್ಯಾಕ್ಟ್ ಎಲ್ಲವನ್ನು ಇಟ್ಟುಕೊಂಡು ಮಾತನಾಡು, ಅಷ್ಟಾಗಿ ಕನ್ನಡದ ಕಲಾವಿದರು ತಪ್ಪು ಮಾಡಿದರೆ ಸಿನಿಮಾ ಚೇಂಬರಿಗೆ ಹೋಗಿ ಕಂಪ್ಲೇಂಟ್ ಕೊಡು, ಅದನ್ನು ಬಿಟ್ಟು ನಪುಂಸಕರಂತೆ ಏನೋ ಒಂದು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಹೇಳಿಕೆ ಕೊಟ್ಟು ಓಡಿ ಹೋಗುವುದಲ್ಲ ಎಂದಿದ್ದಾರೆ.
ನೀನು ತಪ್ಪು ಮಾಡಿದ್ದೀಯ ಕ್ಷಮೆ ಕೇಳು, ಇಲ್ಲವಾದಲ್ಲಿ ನಡು ರೋಡಿನಲ್ಲಿ ನಿಲ್ಲಿಸಿಕೊಂಡು ಚಪ್ಪಲಿಲಿ ಹೊಡೆಯುತ್ತಾರೆ. ಕನ್ನಡದಭಿಮಾನಿಗಳೇ ನಮಗೆ ದೇವರು, ಕಲೆಗಾರರು ನಿಮ್ಮ ಮಕ್ಕಳಿದ್ದಂತೆ, ನಾವು ನಟನೆಯನ್ನು ಮಾಡುತ್ತಿರುವುದು, ಈ ಜೀವನ ಮಾಡುತ್ತಿರುವುದು ನಿಮ್ಮ ಆಶೀರ್ವಾದದಿಂದಲೆ ನೀವೇ ನಮ್ಮನ್ನ ಕಾಯಲಿಲ್ಲ ಎಂದರೆ ಯಾರು ಕಾಯುತ್ತಾರೆ, ದಯವಿಟ್ಟು ಈ ರೀತಿ ಮಾಡಬೇಡಿ ಎಂದಿದ್ದಾರೆ ನಿರ್ದೇಶಕ ನಂದ ಕಿಶೋರ್. ಕಿಚ್ಚ ಸುದೀಪ್ ಅವರ ಬಗ್ಗೆ ಇನ್ನು ಏನೆಲ್ಲ ಹೇಳಿದರು ಗೊತ್ತಾ.? ಅಸಲಿಗೆ ನಡೆದ್ದಿದ್ದೇನೆಂದು ತಿಳಿಯಲು ಹಾಗೆ ಅಭಿಮಾನಿ ಬಳಗದವರಿಗೆ ಏನೆಲ್ಲ ಹೇಳಿದರೆಂದು ತಿಳಿಯಲು ಈ ವಿಡಿಯೋ ನೋಡಿ. ಪೂರ್ತಿಯಾಗಿ ನೋಡಿ ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಯಾರು ಈ ರೀತಿ ಮಾತನಾಡಬೇಡಿ ಎಂದು ಯುವಕರಿಗೆ ತಿಳಿಹೇಳಿ ಧನ್ಯವಾದಗಳು.... ( videoccredit ; all india news