ಅಭಿಮಾನಿಗಳ ತಳ್ಳಿ ನೆಟ್ಟಿಗರ ಕೆಂಗೇಣ್ಣಿಗೆ ಗುರಿ ಆದ ಸುದೀಪ್ ಬಾಡಿಗಾರ್ಡ್..! ಇಲ್ಲಿದೆ ವಿಡಿಯೋ

By Infoflick Correspondent

Updated:Sunday, March 6, 2022, 15:08[IST]

ಅಭಿಮಾನಿಗಳ ತಳ್ಳಿ ನೆಟ್ಟಿಗರ ಕೆಂಗೇಣ್ಣಿಗೆ ಗುರಿ ಆದ ಸುದೀಪ್ ಬಾಡಿಗಾರ್ಡ್..! ಇಲ್ಲಿದೆ ವಿಡಿಯೋ

ಹೌದು ಸ್ಟಾರ್ ನಟರು ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ಸಂತಸ. ಅವರನ್ನು ಮೀಟ್ ಮಾಡಬೇಕು, ಅವರ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದೆಲ್ಲಾ ಕನಸು ಹೊಂದಿರುತ್ತಾರೆ. ಆದರೆ ಅಭಿಮಾನಿಗಳೇ ಇಲ್ಲದೆ ಹೋದರೆ ಯಾವ ನಟರು ಸ್ಟಾರ್ ಆಗುವುದಕ್ಕೆ ಆಗುವುದಿಲ್ಲ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಲೆಬೇಕಾದ ವಿಷಯ. ನಿನ್ನೆ ಸ್ಯಾಂಡಲ್ ವುಡ್ ಖ್ಯಾತ ನಟ ಸುದೀಪ್ ಮಂತ್ರಾಲಯಕ್ಕೆ ಭೇಟಿ ನೀಡಿರುತ್ತಾರೆ. ಕಿಚ್ಚ ಸುದೀಪ್ ಅವರು ಈಗಾಗಲೇ ಅವರದೇ ಆದ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರ ಅಲ್ಲದೇ ತೆಲುಗು, ಮಲೆಯಾಳಂ, ಹಿಂದಿ, ತಮಿಳು, ಹೀಗೆ ಎಲ್ಲಾ ಸಿನಿ ರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

ಸುದೀಪ್ (Sudeep)  ಅವರು ನಿನ್ನೆ ಮಂತ್ರಾಲಯಕ್ಕೆ ಭೇಟಿ ನೀಡಿ ಬೃಂದಾವನ ರಾಯರ ದರ್ಶನ ಪಡೆದರು. ಪೂಜೆ ಸಲ್ಲಿಸಿದ ಬಳಿಕ ಸುದೀಪ್ ಅವರಿಗೆ ಮಂತ್ರಾಲಯದ ಗುರುಗಳಿಂದ ಸನ್ಮಾನ ಕೂಡ ಮಾಡಲಾಯಿತು. ಹೌದು ಸುದೀಪ್ ಅವರ ನೋಡಲು ಮಂತ್ರಾಲಯಕ್ಕೆ ಅವರ ಪ್ರೀತಿಯ ಅಭಿಮಾನಿ ಬಳಗವೇ ದೌಡಾಯಿಸಿದ್ದು ಹೆಚ್ಚು ನೂಕುನುಗ್ಗಲು, ಹೆಚ್ಚು ಕಿರುಚಾಟ ಎಲ್ಲವೂ ಕೇಳಿಬರುತ್ತಿತ್ತು. ಅದೇ ಸಂದರ್ಭದಲ್ಲಿ ಸುದೀಪ್ ಅವರ ಬಾಡಿಗಾರ್ಡ್ ಸುದೀಪ್ ಅವರನ್ನ ನೋಡಿ ಅಣ್ಣ ಅಣ್ಣ ಎನ್ನುತ್ತ ಪಕ್ಕದಲ್ಲಿ ನಿಂತಿದ್ದ ಅಭಿಮಾನಿಗಳನ್ನ ತಳ್ಳುತ್ತ ನಡೆದುಕೊಂಡು ಹೋಗಿದ್ದಾರೆ. 

ಅಭಿಮಾನಿಗಳು ಎಂಬುದಾಗಿ ನೋಡದೇನೆ ಅವರನ್ನು ಜೋರಾಗಿ ಆತನ ಭುಜಬಲದಿಂದ ತಳ್ಳುತ್ತಾ ಹೋದ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ.ನೆಟ್ಟಿಗರು ಈ ರೀತಿ ಅಭಿಮಾನಿಗಳ ಮೇಲೆ ದುರ್ವರ್ತನೆ ತೋರಿದ ಬಾಡಿಗಾರ್ಡ್ ಚಳಿ ಬಿಡಿಸಿದ್ದಾರೆ. ಈ ರೀತಿ ವರ್ತನೆ ಅಭಿಮಾನಿಗಳ ಮೇಲೆ ತೋರಬೇಡಿ ಎಂದು ಹೇಳಿದ್ದಾರೆ. ಅವರಿಲ್ಲದೆ ಯಾವ ನಟರು ಸ್ಟಾರ್ ಆಗುವುದಿಲ್ಲ, ಸ್ಟಾರ್ ನಟರಿಗೆ ಬಾಡಿಗಾರ್ಡ್ ಆಗಿಯೂ ಕೂಡ ಇರುವುದಿಲ್ಲ, ಇದು ತಲೆಯಲ್ಲಿ ಇರಲಿ ಎಂದು ಕಿಡಿಕಾರಿದ್ದಾರೆ. ಸುದೀಪ್ ಅವರು ಕೂಡ ಬಾಡಿಗಾರ್ಡ್ ತೋರಿದ ಈ ವರ್ತನೆಯನ್ನು ಗಮನಕ್ಕೆ ತೆಗೆದುಕೊಳ್ಳದೆ, ಪ್ರತಿಕ್ರಿಯೆ ನೀಡದಿರುವುದು ತುಂಬಾ ಬೇಸರದ ಸಂಗತಿ. ನೀವೇ ಈ ವಿಡಿಯೋ ನೋಡಿ ಸುದೀಪ್ ಅವರ ಬಾಡಿಗಾರ್ಡ್ ಯಾವ ರೀತಿ ಅಭಿಮಾನಿ ದೇವರುಗಳ ಜೊತೆ ವರ್ತಿಸಿದ್ದಾರೆ ಎಂದು. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ಧನ್ಯವಾದಗಳು..(video credit : third eye )