Sudeep : ಡ್ಯಾನ್ಸರ್ಸ್ ಜೊತೆ ರಾ ರಾ ರಕ್ಕಮ್ಮ ಎಂದ ಕಿಚ್ಚ ಸುದೀಪ್...! ಡಿಕೆಡಿ ವೇದಿಕೆ ರಂಗು ನೋಡಿ

By Infoflick Correspondent

Updated:Saturday, July 2, 2022, 11:58[IST]

Sudeep :  ಡ್ಯಾನ್ಸರ್ಸ್ ಜೊತೆ ರಾ ರಾ ರಕ್ಕಮ್ಮ ಎಂದ ಕಿಚ್ಚ ಸುದೀಪ್...! ಡಿಕೆಡಿ ವೇದಿಕೆ ರಂಗು ನೋಡಿ

ಹೌದು, ಈ ರಿಯಾಲಿಟಿ ಶೋಗಳು ಅಂದರೆ ಹಾಗೇನೇ ಜನಪ್ರಿಯ ಕಾರ್ಯಕ್ರಮಗಳು ಆಗಾಗ ಹೊಸ ಹೊಸ ರೀತಿಯಲ್ಲಿ ಬರುತ್ತಲೇ ಇರುತ್ತವೆ. ವಾರಂತಕ್ಕೆ ಬಂದರೆ ಸಿನಿಪ್ರಿಯರನ್ನು ರಂಜಿಸುವ ಕೆಲಸವನ್ನು ಕೆಲ ರಿಯಾಲಿಟಿ ಶೋಗಳು ಮಾಡುತ್ತಲೇ ಇರುತ್ತವೆ. ಚಾನಲ್ ಟಿ ಆರ್ ಪಿ ವಿಚಾರದಲ್ಲೂ ಕೂಡ ಎಲ್ಲರಿಗಿಂತ ವಿಭಿನ್ನವಾಗಿ ನಾವೇ ಮುಂದಿರಬೇಕು, ವೀಕ್ಷಕರಿಗೆ ಮನರಂಜನೆ ನೀಡುವ ಕಾರ್ಯಕ್ರಮ ಕೊಡಬೇಕು ಎಂಬುದಾಗಿ ಪ್ರತಿದಿನ ಕಷ್ಟ ಪಡುತ್ತಲೇ ಇರುತ್ತಾರೆ. ಹೌದು ಅಂತಹ ಕಾರ್ಯಕ್ರಮಗಳಲ್ಲಿ ಇದೀಗ ಡಿಕೆಡಿ ಕೂಡ ಸೇರಿದೆ ಎನ್ನಬಹುದು. ಪ್ರತೀ ಸೀಸನ್ ಡಿಕೆಡಿ ಅಂತಹ ದೊಡ್ಡ ಮಟ್ಟದಲ್ಲಿ ಏನು ಸದ್ದು ಮಾಡಿಲ್ಲ, ಆದರೆ ಈ ಬಾರಿ ಶಿವಣ್ಣ ಅವರು ಎಂಟ್ರಿ ಕೊಡುತ್ತಿದ್ದಂತೆ ಡಿಕೆಡಿ ಸೀಸನ್ 6 ಹೆಚ್ಚು ಕಂಗೊಳಿಸುತ್ತಿದೆ.   

ಮೊನ್ನೆಯ ವಾರ ನಟ ಕಿಚ್ಚ ಸುದೀಪ್ ಅವರು ಡಿಕೆಡಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಶಿವಣ್ಣ ಅವರೊಂದಿಗೆ ಸ್ವಲ್ಪ ಸಮಯ ಡಿಕೆಡಿ ಸೆಟ್ ನಲ್ಲಿ ಕಳೆದರು. ನಟ ಕಿಚ್ಚ ಸುದೀಪ್ ಅವರು ಡಿಕೆಡಿ ವೇದಿಕೆ ಮೂಲಕ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕೂಡ ಮಾಡಿಕೊಂಡರು. ಹೌದು ವಿಕ್ರಾಂತ್ ರೋಣ ಸಿನಿಮಾ ಇದೇ ತಿಂಗಳು 28 ನೇ ತಾರೀಕು ತೆರೆಗೆ ಬರುತ್ತಿದೆ. ಡಿ ಕೆ ಡಿ ವೇದಿಕೆಗೆ ಬಂದ ಕಿಚ್ಚ ಸುದೀಪ್ ಅವರು ಅಲ್ಲಿಯ ಮಕ್ಕಳ ಡಾನ್ಸ್ ಪರ್ಫಾರ್ಮೆನ್ಸ್ ನೋಡಿ ಸಕ್ಕತ್ ಖುಷಿಯಾಗಿದ್ದಾರೆ. ಜೊತೆಗೆ ಬೆರಗಾದರು.. ಈ ವೇದಿಕೆ ಮೇಲೆ ಸುದೀಪ್ ಅವರು ರಾರ ರಕ್ಕಮ್ಮ ಹಾಡಿನ ವಿಡಿಯೋಗೆ ಡಾನ್ಸರ್ಸ್ ಗಳ ಜೊತೆ ಕೊನೆಯಲ್ಲಿ ಡ್ಯಾನ್ಸ್ ಸಹ ಮಾಡಿದ್ದಾರೆ. ಅದೇ ವಿಡಿಯೋ ಈಗ ಎಲ್ಲೆಡೆ ವೈರಲಾಗುತ್ತಿದೆ.

ನೀವು ಕೂಡ ಇಲ್ಲಿರುವ ವಿಡಿಯೋ ನೋಡಿ. ಹಾಗೆ ಕಿಚ್ಚನ ರಾರ ರಕ್ಕಮ್ಮ ಹಾಡಿಗೆ ಹಾಕಿದ ಸ್ಟೆಪ್ ಹೇಗಿತ್ತು ಎನ್ನಲಾಗಿ ಕಮೆಂಟ್ ಮಾಡಿ. ವಿಕ್ರಾಂತ್ ರೋಣ ಸಿನಿಮಾ ಒಂದು ದೊಡ್ಡ ಸಿನಿಮಾ. ಕನ್ನಡದ ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾ. ಈ ಸಿನಿಮಾದ ಹಾಡು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡೀಯೋ. ಒಮ್ಮೆ ನೋಡಿ ಶೇರ್ ಮಾಡಿ ಧನ್ಯವಾದಗಳು...( video credit : zee kannada )

 
 
 
 
 
 
 
 
 
 
 
 
 
 
 

A post shared by Zee Kannada (@zeekannada)