Sudeep : ದರ್ಶನ್ ಅವರ ಜೊತೆ ಹೆಂಗ್ ಕುಣಿದಿದ್ದೀರಿ, ನನ್ನ ಜೊತೆ ಕುಣಿಯೋಲ್ವ ಎಂದ ಕಿಚ್ಚ ಸುದೀಪ್..!
Updated:Wednesday, June 22, 2022, 13:20[IST]

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಸೀಸನ್-8 ಮುಗಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಕಿಚ್ಚ ಸುದೀಪ್ ಅವರೇ ಪ್ರತಿವರ್ಷ ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ನಿರೂಪಣೆ, ಮಾತನಾಡುವ ಶೈಲಿಗೆ ಫಿದಾ ಆಗದೆ ಇರದವರು ಯಾರು ಇಲ್ಲ ಎನ್ನಬಹುದು. ಜೊತೆಗೆ ಕಿಚ್ಚನ ಅಭಿನಯಕ್ಕೆ ಅವರದ್ದೆ ಆದ ಅಪಾರ ಅಭಿಮಾನಿ ಬಳಗ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೌದು ನಟ ಕಿಚ್ಚ ಸುದೀಪ್ ಅವರು ಮತ್ತು ದರ್ಶನ್ ಅವರು ಮೊದಲಿಗೆ ತುಂಬಾ ಆತ್ಮೀಯತೆ ಹೊಂದಿದ್ದರು.
ಇದರ ಜೊತೆಗೆ ಒಳ್ಳೆಯ ಸ್ನೇಹಿತರು ಕೂಡ ಹೌದು. ಆದರೆ ಕೆಲವು ವರ್ಷಗಳಿಂದ ಸುದೀಪ್ ಮತ್ತು ದರ್ಶನ್ ದೂರ ದೂರ ಆಗಿದ್ದಾರೆ. ಒಬ್ಬರಿಗೊಬ್ಬರು ಮಾತು ಬಿಟ್ಟು ಬಹಳ ದಿನಗಳೇ ಕಳೆದು ಹೋಗಿದೆ. ಹೀಗಿರುವಾಗ ಅವರಿಬ್ಬರ ಅಭಿಮಾನಿಗಳು ಯಾವಾಗ ಇವರಿಬ್ಬರು ಮತ್ತೆ ಕುಚುಕು ಗೆಳೆಯರಾಗಿ ಒಂದಾಗುತ್ತಾರೆ ಎಂದು ಇಂದಿಗೂ ಕೂಡ ಎದುರುನೋಡುತ್ತಿದ್ದಾರೆ. ಹೀಗಿರುವಾಗ ಸೋಶಿಯಲ್ ವಿಡಿಯೋದಲ್ಲಿ ನಟ ಕಿಚ್ಚ ಸುದೀಪ್ ವಿಚಾರವಾಗಿ ದರ್ಶನ್ ಅವರು ಸುದೀಪ್ ಅವರ ಬಗ್ಗೆ ಏನಾದರೂ ಹೇಳಿದ್ದರೆ, ಅಥವಾ ನಟ ಸುದೀಪ್ ಅವರು ದರ್ಶನ್ ಅವರ ಬಗ್ಗೆ ಏನಾದರೂ ಹೇಳಿದ್ದರೆ, ಇಬ್ಬರ ಅಭಿಮಾನಿಗಳು ಸಹ ತುಂಬಾ ಖುಷಿಯಾಗುತ್ತಾರೆ.
ಅಂತಹ ವಿಡಿಯೋ ಇದೀಗ ಮತ್ತೊಂದು ವೈರಲ್ ಆಗುತ್ತಿದೆ ಗೆಳೆಯರೇ. ಈ ಹಿಂದೆ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ನಟಿ ರಕ್ಷಿತಾ ಅವರೊಟ್ಟಿಗೆ ಸುಂಟರಗಾಳಿ ಸುಂಟರಗಾಳಿ ಹಾಡಿಗೆ ಸಕ್ಕತ್ ಡ್ಯಾನ್ಸ್ ಮಾಡಿದ್ದರು. ಅಂದು ರಕ್ಷಿತಾ ಅವರು ಹೆಚ್ಚು ಕುಣಿಯಲಿಲ್ಲ. ಆಗ ನಟ ಸುದೀಪ್ ಅವರು, ದರ್ಶನ್ ಅವರೊಟ್ಟಿಗೆ ಯಾವ ರೆಂಜಲ್ಲಿ ನೀವು ಡ್ಯಾನ್ಸ್ ಮಾಡಿದ್ದೀರಿ ಎಂದು ನಾವು ನೋಡಿದ್ದೇವೆ. ಆದ್ರೆ ನಮ್ಮ ಜೊತೆ ಡ್ಯಾನ್ಸ್ ಮಾಡಲು ಆಗುವುದಿಲ್ಲ, ಡ್ಯಾನ್ಸ್ ಮಾಡಿ ರಕ್ಷಿತ ಎಂದಿದ್ದರು. ಅದೇ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ಅದು ದರ್ಶನ್ ಅಭಿನಯದ ಹಾಡಿಗೆ ಡ್ಯಾನ್ಸ್ ಮಾಡಿದ ಕಿಚ್ಚ ಸುದೀಪ್ ವಿಡಿಯೋ ಇಲ್ಲಿದೆ ಒಮ್ಮೆ ನೋಡಿ. ನಿಮಗೂ ಕೂಡ ಇಷ್ಟ ಆದ್ರೆ ತಪ್ಪದೇ ಶೇರ್ ಮಾಡಿ ಧನ್ಯವಾದ...