ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅಪ್ಪನ ಚಿತ್ರದ ಬಗ್ಗೆ ಏನ್ ಹೇಳಿದ್ದಾಳೆ ನೋಡಿ..

By Infoflick Correspondent

Updated:Friday, June 24, 2022, 19:36[IST]

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅಪ್ಪನ ಚಿತ್ರದ ಬಗ್ಗೆ ಏನ್ ಹೇಳಿದ್ದಾಳೆ ನೋಡಿ..

ಸುದೀಪ್ ಗೆ ಕನ್ನಡ ಎಂದರೆ ಪಂಚಪ್ರಾಣ. ಸುದೀಪ್ ಗೆ ಹೆಸರು ತಂದುಕೊಟ್ಟಿದ್ದು, ಗೆಲುವು ನೀಡಿದ್ದು ಎಲ್ಲವೂ ಕನ್ನಡ ಚಿತ್ರರಂಗವೇ. ಅಲ್ಲದೇ ಸುದೀಪ್ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಕರ್ನಾಟಕವೇ. ಸುದೀಪ್ ಮೂಲತಃ ಶಿವಮೊಗ್ಗದವರು. ಸುದೀಪ್ ಹಾಗೂ ಪ್ರಿಯಾ ರಂಗಭೂಮಿಯಿಂದ ಪರಿಚಿತರಾಗಿ ಪ್ರೀತಿಸಿ 2002ರಲ್ಲಿ ಮದುವೆಯಾದರು.  2004ರಲ್ಲಿ ಇವರಿಗೆ ಮುದ್ದಾದ ಹೆಣ್ಣು ಮಗು ಜನಿಸಿತು. ಆ ಮಗುವಿನ ಹೆಸರೇ ಸಾನ್ವಿ.   


ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಆಗಾಗ ಕೆಲ ಸಿನಿಮಾಗಳಿಗೆ, ಕೆಲ ನಟರನ್ನು ಸಪೋರ್ಟ್  ಮಾಡುತ್ತಿರುತ್ತಾರೆ.  ಇದೀಗ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ತಂದೆಯ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಂ ರೋಣ ಪಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ .ಮುಂದಿನ ತಿಂಗಳು ಅಂದರೆ ಜುಲೈ 28ರಂದು ಸಿನಿಮಾ ರಿಲೀಸ್ ಆಗಲಿದೆ.


ಈ ಬಗ್ಗೆ ಸಾನ್ವಿ ಅವರನ್ನು ಪ್ರಶ್ನಿಸಿದ್ದಕ್ಕೆ ಟ್ರೈಲರ್ ಸಕತ್ ಆಗಿದೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಪ್ಪ ಕೂಡ ಅದ್ಭುತವಾಗಿ ಕಾಣಿಸಿದ್ದಾರೆ. ಸಿನಿಮಾದ ಮ್ಯೂಸಿಕ್ ಸೂಪರ್ ಆಗಿದೆ. ನನಗಂತೂ ತುಂಬಾನೇ ಇಷ್ಟವಾಯ್ತು. ಸಿನಿಮಾ ನೋಡಲು ಕಾತುರರಾಗಿದ್ದೇನೆ ಎಂದು ಹೇಳಿದ್ದಾಳೆ. ಇನ್ನು ಸ್ಯಾಂಡಲ್ ವುಡ್ ಗೆ ಯಾವಾಗ ಎಂಟ್ರಿ ಕೊಡುತ್ತೀರಾ ಎಂದು ಕೇಳಿದ್ದಕ್ಕೆ ನೋಡೋಣ ಎಂದು ಉತ್ತರಿಸಿದ್ದಾರೆ. ಮುಂದೊಂದು ದಿನ ಸಾನ್ವಿ ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಕ್ವೀನ್ ಆಗುವುದರಲ್ಲಿ ಡೌಟ್ ಇಲ್ಲ. ಬಟ್ ಅಲ್ಲಿಯವರೆಗೂ ಕಾಯಬೇಕಿದೆ.

VIDEO CREDIT : Speak with Sushan