ಖ್ಯಾತ ನೃತ್ಯ ನಿರ್ದೇಶಕರಿಗೆ ದುಬಾರಿ ಉಡುಗೊರೆ ಕೊಟ್ಟ ಕಿಚ್ಚ;  ಸ್ನೇಹದ ಕಾಣಿಕೆ ಏನು ಗೊತ್ತೆ ?

By Infoflick Correspondent

Updated:Monday, March 28, 2022, 21:56[IST]

ಖ್ಯಾತ ನೃತ್ಯ ನಿರ್ದೇಶಕರಿಗೆ ದುಬಾರಿ ಉಡುಗೊರೆ ಕೊಟ್ಟ ಕಿಚ್ಚ;  ಸ್ನೇಹದ ಕಾಣಿಕೆ ಏನು ಗೊತ್ತೆ ?

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಅನ್ಯ ಭಾಷೆಯ ಚಿತ್ರಗಳಲ್ಲಿ ಮಿಂಚಿತ್ತಿರುವ ಕಿಚ್ಚ ಸುದೀಪ್, ಸಿನಿಮಾ ರಂಗದಲ್ಲಿ ಸಾಕಷ್ಟು ​ಸ್ನೇಹಿತರನ್ನು ಹೊಂದಿದ್ದಾರೆ. ಹೊರಗಿನವರಿಗೆ ಕಿಚ್ಚ ಧಿಮಾಕಿನ ವ್ಯಕ್ತಿ ಎನಿಸಬಹುದು ಆದರೆ ಒಮ್ಮೆ ಗೆಳೆತನ ಮಾಡಿದರೆ ಅವರ ಜೊತೆ ತುಂಬಾನೇ ಆಪ್ತವಾಗಿ ನಡೆದುಕೊಳ್ಳುತ್ತಾರೆ ಸುದೀಲ. ಅವರ ಇಷ್ಟಗಳನ್ನು ಅರಿಯುತ್ತಾರೆ, ಅವರ ಪ್ರತಿ ಕಷ್ಟದಲ್ಲೂ ಜೊತೆ ನಿಲ್ಲುತ್ತಾರೆ, ಅವರಿಗೋಸ್ಕರ ಏನೂ ಮಾಡೋಕು ರೆಡಿ ಇರುತ್ತಾರೆ. ಇದನ್ನು ಅವರು ಹಲವು ಸಲ ಸಾಬೀತು ಪಡೆಸಿದ್ದಾರೆ.    

ಕೆಲವು ತಿಂಗಳುಗಳ ಹಿಂದೆ ಸುದೀಪ್ ತಮ್ಮ ಬಾಡಿಗಾರ್ಡ್ ಕಿಚ್ಚ ಕಿರಣ್​ಗೆ ಬುಲೆಟ್ ಬೈಕ್ ಉಡುಗೊರೆಯಾಗಿ ನೀಡಿದ್ದರು. ಹಿಂದೆ ಹುಟ್ಟುಹಬ್ಬಕ್ಕೆಂದು ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಎಸ್‍ಯುವಿ ಕಾರ್ ಗಿಫ್ಟ್ ಕೊಟ್ಟು ಸುದ್ದಿ ನಿಮಗೆ ಗೊತ್ತಿರಬಹುದು ಈಗ ಡ್ಯಾನ್ಸ್ ನಿರ್ದೇಶಕರಿಗೂ ದುಬಾರಿ ಕಾರನ್ನು ಗಿಫ್ಟ್ ಕೊಡುವ ಗೆಳೆತನದ ಕೊಡುಗೆ ತೋರಿಸಿದ್ದಾರೆ.


ಸುದೀಪ್‌ ನಟನೆಯ 'ವಿಕ್ರಾಂತ್‌ ರೋಣ' ಚಿತ್ರದಲ್ಲಿ ಗಡಂಗ್‌ ರಕ್ಕಮ್ಮ ಹಾಡಿದೆ. ಈ ಗಡಂಗ್‌ ರಕ್ಕಮ್ಮ ಹಾಡಿನ ಕೊರಿಯೋಗ್ರಫಿ ಮೆಚ್ಚಿ, ಹಾಗು ಅವರ ನೆಚ್ಚಿನ ಕಾರನ್ನು ಕಿಚ್ಚ ಉಡುಗೊರೆ ನೀಡಿದ್ದಾರೆ.  ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಕನ್ನಡ ಚಿತ್ರರಂಗದ ಜೊತೆ ಉತ್ತಮವಾದ ಬಾಂಧವ್ಯ ಹೊಂದಿದ್ದು, ಪುನೀತ್​ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟಸಾರ್ವಭೌಮ,ಯುವರತ್ನ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡುವ ಮೂಲಕ‌ ಪ್ರಸಿದ್ದಿ ಪಡೆದಿದ್ದಾರೆ. ವಿಕ್ರಾಂತ್​ ರೋಣ ಸುದೀಪ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ. ಸಿನಿಮಾದಲ್ಲಿ ಸುದೀಪ್​ಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.‌


ಸುದೀಪ್‌ ಅವರಿಗೆ ಜಾನಿ ಅವರ ಕೊರಿಯೋಗ್ರಫಿ ಬಹಳ ಇಷ್ಟವಾಗಿತ್ತು.  ಈ ಹಾಡಿನ ಶೂಟಿಂಗ್‌ ವೇಳೆಗೆ ಜಾನಿ ಮಾಸ್ಟರ್‌ ಅವರು ಮಹೀಂದ್ರಾ ಥಾರ್‌ ಬಹಳ ಇಷ್ಟ ಅಂದಿದ್ದರು. ಹಾಗಾಗಿ ಕೊರಿಯಾಗ್ರಫಿ ಮೆಚ್ಚಿ  ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅವರಿಗೆ ಕಿಚ್ಚ ಸುದೀಪ್‌ ಮಹೇಂದ್ರ ಥಾರ್‌ ಉಡುಗೊರೆ ನೀಡಿದ್ದಾರೆ. 

ಈ ಕುರಿತು ಜಾನಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಟ್ವಟ್ಟರ್‌ನಲ್ಲಿ ಜಾನಿ, ಕಿಚ್ಚ ಸುದೀಪ್, ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಸಂತೋಷವಾಗುತ್ತೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿಯಾಗಿದೆ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.