Sudeep : ಕಿಚ್ಚ ತನ್ನ ಹುಟ್ಟುಹಬ್ಬದಂದು ಅಕುಲ್ ಬಾಲಾಜಿಗೆ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೆ

By Infoflick Correspondent

Updated:Sunday, September 4, 2022, 20:47[IST]

Sudeep :  ಕಿಚ್ಚ ತನ್ನ ಹುಟ್ಟುಹಬ್ಬದಂದು ಅಕುಲ್ ಬಾಲಾಜಿಗೆ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೆ

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸೆಪ್ಟೆಂಬರ್ 2‌ರಂದು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚನಿಗೆ ಸ್ನೇಹಿತರು, ಆಪ್ತರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಶುಭಕೋರಿದ್ದಾರೆ.ಇಂದು ಸುದೀಪ್​ ಮಾತ್ರ ತಮ್ಮ ಹುಟ್ಟುಹಬ್ಬದಂದು ನಟ ಅಕುಲ್ ಬಾಲಾಜಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ನಟ, ನಿರೂಪಕ ಅಕುಲ್ ಬಾಲಾಜಿಗೆ ಸುದೀಪ್, ತಮ್ಮ ಹುಟ್ಟುಹಬ್ಬದ ದಿನದಂದೇ ದುಬಾರಿ ಬೈಕ್ ಒಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಕಿಚ್ಚ ಸುದೀಪ್​​ ತಮಗೆ ಉಡುಗೊರೆ ನೀಡಿದ ಬೈಕ್ ಜೊತೆ ನಿಂತು ಅಕುಲ್ ವಿಡಿಯೋ ಒಂದನ್ನು ಮಾಡಿ ಅಪ್‌ಲೋಡ್ ಮಾಡಿದ್ದಾರೆ.

ಬಿಎಂಡಬ್ಲುನ ಜಿ 310 ಆರ್ ಬೈಕ್ ಅನ್ನು ಕಿಚ್ಚ ಅಕುಲ್‌ ಬಾಲಾಜಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಿಎಂಡಬ್ಲು ಜಿ 310 ಆರ್ ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,2.70 ಲಕ್ಷವಾಗಿದೆ,

ವಿಡಿಯೋದಲ್ಲಿ ಇವತ್ತು ಕಿಚ್ಚೋತ್ಸವ, ಅಂದರೆ ನಿನ್ನೆ ಮೊನ್ನೆ ಗಣೇಶೋತ್ಸವವಾಯ್ತು. ಅದೇ ರೀತಿ ಇವತ್ತು ಕಿಚ್ಚ ಸುದೀಪ್ ಅವರ ಬರ್ತ್ ಡೇ ಅದಕ್ಕೆ ಇವತ್ತು ಕಿಚ್ಚೋತ್ಸವ. ಅವರ ಹುಟ್ಟುಹಬ್ಬದಂದು ನಾವು ಅವರಿಗೆ ಉಡುಗೊರೆ ನೀಡುತ್ತೇವೆ. ಆದರೆ ಇಂದು ಅವರೇ ನನಗೆ ಉಡುಗೊರೆ ನೀಡಿದ್ದಾರೆ. ಈ ಬೈಕ್ ಉಡುಗೊರೆ ನೀಡಿದ್ದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ, ಅನಂತರ ಸುದೀಪ್ ಅವರನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ.(video credit : first day first show kannada )