Sudeep : ಕ್ಯಾಬ್ ಅಲ್ಲಿ ಬಂದ ಅನೂಪ್ ಗೆ ಸುದೀಪ್ ಕೊಡಿಸಿದ ಕಾರು ಯಾವುದು ಗೊತ್ತಾ..? ಅಬ್ಬಾ ಇಷ್ಟೊಂದು ಬೆಲೆನಾ..!

By Infoflick Correspondent

Updated:Thursday, August 4, 2022, 16:41[IST]

Sudeep : ಕ್ಯಾಬ್ ಅಲ್ಲಿ ಬಂದ ಅನೂಪ್ ಗೆ ಸುದೀಪ್ ಕೊಡಿಸಿದ ಕಾರು ಯಾವುದು ಗೊತ್ತಾ..? ಅಬ್ಬಾ ಇಷ್ಟೊಂದು ಬೆಲೆನಾ..!

ನಟ ಕಿಚ್ಚ ಸುದೀಪ್ ಅವರ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ. ಹೌದು ಕಿಚ್ಚ ಸುದೀಪ್ ಅವರು ಅದೆಂತಹ ಮನಸ್ಥಿತಿ ಉಳ್ಳವರು, ಅಭಿಮಾನಿ ಬಳಗಕ್ಕೆ ಎಂತಹ ಪ್ರೀತಿ ನೀಡುತ್ತಾರೆ, ಅವರ ಅಭಿಮಾನಿಗಳು ಎಂದರೆ ಸುದೀಪ್ ಅವರಿಗೆ ಅದೆಷ್ಟು ಸಂತಸ ಆಗುತ್ತದೆ ಎಂದು ನೀವು ಈಗಾಗಲೇ ಅರಿತುಕೊಂಡಿದ್ದೀರಿ. ಸುದೀಪ್ ಅವರಿಗೆ ಅತಿ ದೊಡ್ಡ ಫ್ಯಾನ್ ಬೇಸ್ ಇರುವುದು ನಿಜ. ಅವರ ಸಿನಿಮಾ ವಿಕ್ರಾಂತ್ ರೋಣ ಇದೀಗ ಭರ್ಜರಿಯಾಗಿ ವಿಶ್ವದಾದ್ಯಂತ ಪ್ರದರ್ಶನ ಕಾಣುತ್ತಿರುವುದು ಖುಷಿಯ ವಿಚಾರ. ಕನ್ನಡದ ಶಕ್ತಿ ಏನೆಂದು ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಕಲೆಕ್ಷನ್ ವಿಚಾರದಲ್ಲೂ ಕೂಡ 150 ಕೋಟಿ ಸಮೀಪ ಆಗುತ್ತಿದೆ ಎಂದು ಮಾಧ್ಯಮ ವಲಯದಲ್ಲಿ ಕೇಳಿ ಬಂದಿದೆ.  

ಹೌದು ಸುದೀಪ್ ಅವರ ಆಪ್ತರಾಗಿರುವ ಅವರ ಜೊತೆಗೆ ಇರುವ ನಟ ರಾಮು ಎನ್ನುವವರು ಇದೀಗ ಅವರ ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವರು ಕೂಡ ವಿಕ್ರಾಂತ್ ರೋಣ ಸಿನಿಮಾದಲ್ಲಿ ಭರ್ಜರಿಯಾಗಿ ಅಭಿನಯ ಮಾಡಿದ್ದಾರೆ. ರಾಮು ಅವರು ಹೇಳುವ ಹಾಗೆ ಸುದೀಪ್ ಸರ್ ಯಾರನ್ನು ಕೂಡ ಅಷ್ಟು ಸುಲಭವಾಗಿ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಪ್ರೀತಿಯಿಂದ ಹಾಗೇನೇ ಹೆಚ್ಚು ಅಭಿಮಾನದಿಂದ ಮನೆಯ ಹತ್ತಿರ ಬಂದವರಿಗೆ ಎಂದು ಊಟ ಮಾಡಿಸದೆ ಹಾಗೆ ಕಳಿಸಿಲ್ಲ. ಒಬ್ಬ ಅಭಿಮಾನಿ ಇರಲಿ ಹತ್ತು ಜನ ಇರಲಿ ಫೋಟೋ ತೆಗೆಸಿಕೊಳ್ಳಬಹುದು. ಆದ್ರೆ ಲಕ್ಷ ಲಕ್ಷ ಜನ ಬಂದರೆ ಅದು ಹೇಗೆ ಆಗುತ್ತದೆ ನೀವೇ ಹೇಳಿ. ಆದರೂ ಕೂಡ ಕಿಚ್ಚ ಸುದೀಪ್ ಅವರು ಪ್ರೀತಿಯಿಂದಲೇ ಎಲ್ಲರೊಟ್ಟಿಗೆ ಇರುತ್ತಾರೆ.

ಅವರು ಯಾವಾಗಲೂ ಬನ್ನಿ ತಬ್ಬಿಕೊಳ್ಳಿ ಎನ್ನುವ ಹಾಗೆ ಕೈ ಅಗಲವನ್ನೇ ಮಾಡಿಕೊಂಡು ಇರುತ್ತಾರೆ ಎನ್ನುತ್ತಾರೆ ರಾಮು. ಅಂತಹ ಒಳ್ಳೆಯ ವ್ಯಕ್ತಿತ್ವ ಸೂಪರ್ ಸ್ಟಾರ್ ಇನ್ನೊಬ್ಬರನ್ನು ನಾನು ನೋಡಿಲ್ಲ ಅವರೊಟ್ಟಿಗೆ ಇರುವವರು ಯಾವಾಗಲೂ ಚೆನ್ನಾಗಿರಬೇಕು ಎಂದು ಸದಾ ಆಲೋಚನೆ ಮಾಡುತ್ತಾರೆ. ಹೌದು ಈಗ ನೋಡಿ ವಿಕ್ರಾಂತ್ ರೋಣದ ರಾರಾ ರಕ್ಕಮ್ಮ ಹಾಡು ಭರ್ಜರಿಯಾಗಿ ವೈರಲ್ ಆಯ್ತು. ಅದರ ಕೊರಿಯ ಗ್ರಾಫಿ ಮಾಡಿದ ಜಾನಿ ಮಾಸ್ಟರ್ ಗೆ ಕಿಚ್ಚ ಸುದೀಪ್ ಒಂದು ತಾರ್ ಕಾರನ್ನು ಗಿಫ್ಟ್ ಆಗಿ ನೀಡಿದರು, ಅದು 20 ಲಕ್ಷ. ಒಮ್ಮೆ ಅನೂಪ್ ಬಂಡಾರಿಯವರು ಒಂದು ಕ್ಯಾಬ್ ನಲ್ಲಿ ಬರುತ್ತಾರೆ. ಆಗ ಕಿಚ್ಚ ಸುದೀಪ್ ಅವರು ಯಾಕೆ ನೀವು ಕ್ಯಾಬ್ ನಲ್ಲಿ ಬಂದಿದ್ದೀರಿ ಎಂದು, ಕೆಲವು ದಿನಗಳ ಬಳಿಕ ಸ್ವಲ್ಪ ನಂತರದಲ್ಲೇ ಹೈದರಾಬಾದಿನಲ್ಲಿ 25 ಲಕ್ಷದ ಕಾರನ್ನು ನಾನೇ ತೆಗೆದುಕೊಂಡು ಬಂದೆ ಅದನ್ನು ಕಿಚ್ಚ ಸುದೀಪ್ ಅವರು ಅನೂಪ್ ಅವರಿಗೆ ಗಿಫ್ಟ್ ಆಗಿ ಅವರ ಹುಟ್ಟು ಹಬ್ಬಕ್ಕೆ ನೀಡಿದರು.

ಇಂತಹ ಸರಳ ವ್ಯಕ್ತಿ, ಸಹಾಯ ಮಾಡುವ ಮನಸ್ಥಿತಿ, ಇನ್ನೊಬ್ಬರಿಗೆ ಸದಾ ಒಳ್ಳೆಯದು ಮಾಡುವ ವ್ಯಕ್ತಿ ಸೂಪರ್ ಸ್ಟಾರ್ ಯಾರು ಸಿಗುತ್ತಾರೆ ಹೇಳಿ ನೋಡೋಣ ಎಂದು ನಟ ರಾಮು ಅವರು ಎಲ್ಲವನ್ನು ಹೇಳಿಕೊಟ್ಟಿದ್ದಾರೆ. ಹಾಗೆ ಸುಮಾರು 12 ವರ್ಷದಿಂದ ಕಿಚ್ಚ ಸುದೀಪ್ ಅವರ ಜೊತೆಗೆ ನಾವು ಇದ್ದೇವೆ, ಅವರನ್ನು ನಾವು ಪ್ರೀತಿಯಿಂದ ಕ್ಯಾಪ್ಟನ್ ಎಂದು ಕರೆಯುತ್ತೇವೆ ಎಂದಿದ್ದಾರೆ. ಅವರಿಗೂ ಎಲ್ಲರನ್ನ ಪ್ರೀತಿಯಿಂದಲೇ ಮಾತನಾಡಿಸುವುದು ಇಷ್ಟ ಎಂದು ನಟ ರಾಮು ಹೇಳಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...( news in kannada )