ಅಜಯ್ ದೇವಗನ್ ಮಾತಿಗೆ ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್..!
Updated:Wednesday, April 27, 2022, 19:31[IST]

ಹೌದು ಇದೀಗ ಟ್ವಿಟರ್ನಲ್ಲಿ ಸದ್ಯ ಒಂದು ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಇತ್ತೀಚಿಗಷ್ಟೇ ನಟ ಕಿಚ್ಚ ಸುದೀಪ್ ಅವರು ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಬದಲಿಗೆ ಅದು ನಮ್ಮ ರೀತಿಯೇ ಒಂದು ಭಾಷೆ ಎಂದಿದ್ದರು. ಅದಕ್ಕೆ ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ಅವರು ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚ ಸುದೀಪ್ ಅವರನ್ನುದ್ದೇಶಿಸಿ ಮಾತನಾಡಿದ ಅಜಯ್ ದೇವಗನ್ ಅವರು ರಾಷ್ಟ್ರೀಯ ಭಾಷೆ ಹಿಂದಿ ಇಲ್ಲವೆಂದಾದರೆ, ನೀವು ನಿಮ್ಮ ಚಿತ್ರಗಳನ್ನು ಏಕೆ ಹಿಂದಿಗೆ ಡಬ್ ಮಾಡಿ ಬಿಡುತ್ತೀರಾ, ನಮಗೆ ನಮ್ಮ ರಾಷ್ಟ್ರಭಾಷೆ ಹಿಂದಿಯೇ ಎಂದು ಮಾತನಾಡುವ ಮುಂಚೆ ಸಹೋದರ ಎಂದು ಕಿಚ್ಚ ಸುದೀಪ್ ಅವರ ಈ ಹೇಳಿಕೆ ವಿರುದ್ಧ ಮಾತನಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದು ನಾವು ಎಲ್ಲಾ ಭಾಷೆಗಳಿಗೂ ಗೌರವ ನೀಡುತ್ತೇವೆ. ಯಾರಿಗೂ ನೋವು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಈ ರೀತಿ ನಾವು ಹೇಳಿರುವುದಿಲ್ಲ ಸರ್. ನೀವು ಕಳುಹಿಸಿದ ಹಿಂದಿ ಟೆಕ್ಸ್ಟ್ ನಾನು ಅರ್ಥ ಮಾಡಿಕೊಂಡೆ, ನಿಮ್ಮ ಹಿಂದಿ ಭಾಷೆಯನ್ನು ನಾವು ಗೌರವಿಸುತ್ತೇವೆ ಪ್ರೀತಿಸುತ್ತೇವೆ, ನಾವು ಹಿಂದಿಯನ್ನು ಕಲಿತಿದ್ದೇವೆ, ಅರ್ಥಮಾಡಿಕೊಳ್ಳುತ್ತೆವೆ. ಆದರೆ ಒಂದು ವೇಳೆ ನನ್ನ ಪ್ರತಿಕ್ರಿಯೆಯೂ ಸಹ ಕನ್ನಡದಲ್ಲೇ ಇದ್ದಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೇನೆ ಎಂದು ಹೇಳಿ ನಾವು ಭಾರತಕ್ಕೆ ಸೇರಿದವರಲ್ವಾ ಎಂದು ಇದೀಗ ಕಿಚ್ಚ್ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೆ ಆದಷ್ಟು ಬೇಗ ಮೀಟ್ ಆಗುತ್ತೇನೆ ಸರ್ ಎಂದು ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಟ ಅಜಯ್ ದೇವಗನ್ ಮಾತಿಗೆ ಕಿಚ್ಚ ಸುದೀಪ್ ಕೊಟ್ಟಿರುವ ರಿಯಾಕ್ಷನ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಎಂತಹ ಟಕ್ಕರ್ ಕೊಟ್ಟಿದ್ದೀರಿ ಸರ್ ಎಂದು ಹೇಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೇ ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿದ್ದಲ್ಲಿ ಈ ಟ್ವಿಟರ್ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಹೇಳಿ ದನ್ಯವಾದಗಳು..
[7:24 PM, 4/27/2022] S: