Sudeep : ಕೆಜಿಎಫ್ ವಿವಾದದ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಕಿಚ್ಚ ಹೇಳಿದ್ದೇನು ?

By Infoflick Correspondent

Updated:Monday, May 2, 2022, 13:05[IST]

Sudeep : ಕೆಜಿಎಫ್ ವಿವಾದದ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಕಿಚ್ಚ ಹೇಳಿದ್ದೇನು ?

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಕೆಜಿಎಫ್ ಬಗ್ಗೆ ನಿಮ್ಮ ಪ್ರತಿಕ್ರಿಯೆ ಹೇಳಿ ಎಂದು ವರದಿಗಾರನೊಬ್ಬ ಸುದೀಪ್ ಅವರಲ್ಲಿ ಕೇಳುತ್ತಾನೆ. ಆಗ ಸುದೀಪ್ ನಾನು ಕೆಜಿಎಫ್‍ನಲ್ಲಿ ಇಲ್ಲ ಎನ್ನುತ್ತಾರೆ. ಈ ವಿಡಿಯೋ ವೈರಲ್ ಆಗಿ ಅನೇಕ ವಿವಾದಕ್ಕೆ ಕಾರಣವಾಯಿತು. 

2018ರಲ್ಲಿ ‘ಕೆಜಿಎಫ್’ ಸಿನಿಮಾ ಟ್ರೇಲರ್ ನೋಡಿದ್ದ ಸುದೀಪ್ ಇಡೀ ತಂಡಕ್ಕೆ ವಿಶ್ ಮಾಡಿದ್ದರು. ‘ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವಂತೆ ತೋರುತ್ತಿದೆ. #KGF ತಂಡಕ್ಕೆ ನನ್ನ ಶುಭಾಶಯಗಳು. ಪ್ರಶಾಂತ್ ಅವರ ವಿಷನ್​ಗೆ ನನ್ನ ಹ್ಯಾಟ್ಸ್​ ಆಫ್’ ಎಂದಿದ್ದ ಸುದೀಪ್, ಯಶ್​ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಕೆಜಿಎಫ್ 2’ ಬಗ್ಗೆ ಸುದೀಪ್ ಯಾವುದೇ ಟ್ವೀಟ್ ಮಾಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಮೂಡಿರುವಾಗಲೇ ವಿಡಿಯೋ ಒಂದು ವೈರಲ್ ಆಗಿದೆ. ‘ಕೆಜಿಎಫ್ 2 ಬಗ್ಗೆ ಸುದೀಪ್ ಅವರ ಮೊದಲ ಪ್ರತಿಕ್ರಿಯೆ’ ಎನ್ನುವ ಅಡಿಬರಹದೊಂದಿಗೆ ವಿಡಿಯೋ ವೈರಲ್ ಮಾಡಲಾಗುತ್ತಿದೆ. 

ಈ ವಿಡಿಯೋ ಇತ್ತೀಚಿನದ್ದಲ್ಲ. ಇದು ಸುಮಾರು 3 ವರ್ಷಗಳ ಹಿಂದಿನ ವಿಡಿಯೋ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುದೀಪ್ ನೀಡಿದ್ದ ಬೈಟ್ ಅದು. ಈ ಕುರಿತು ಸುದೀಪ್ ಈಗ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಸುದೀಪ್ ನೀಡಿರುವ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ವಿವಾದಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಜನಗಳನ್ನು ಸಂಪಾದಿಸಿದ್ದೇನೆ, ನಾನು ಮೌನವಾಗಿದ್ದರೂ ಅವರು ಮಾತನಾಡುತ್ತಾರೆ. ಅದು ಹಳೆಯ ವಿಡಿಯೋ ಎಂಬುದನ್ನು ನನ್ನ ಅಭಿಮಾನಿಗಳು ಹಲವು ಬಾರಿ ಹೇಳಿದ್ದಾರೆ.    

ನಾನು ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ'' ಎನ್ನುತ್ತಾ ಅಂದು ನಡೆದ ಘಟನೆಯ ಬಗ್ಗೆ ವಿವರಿಸಿದ ಸುದೀಪ್, ''ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಕನ್ನಡಿಗ ಸಿಕ್ಕ, ಆತ ಅಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ಬಳಿಕ 'ಕೆಜಿಎಫ್' ಬಗ್ಗೆ ಹೇಳಿ ಎಂದ. ನಮ್ಮ ಆವರೆಗಿನ ಮಾತುಕತೆ ತಮಾಷೆಯಾಗಿಯೇ ಇತ್ತು. ಅದೇ ಭಾವದಲ್ಲಿ ನಾನು 'ಆ ಸಿನಿಮಾದಲ್ಲಿ ನಾನು ನಟಿಸಿಲ್ಲ' ಎಂದೆ'' ಎಂದು ಅಂದು ನಡೆದ ಘಟನೆ ವಿವರಿಸಿದರು. 

ಗೋವಾದ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮೊದಲ ಬಾರಿಗೆ ಕನ್ನಡಿಗನೊಬ್ಬನನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಅಲ್ಲಿ ಅವರ ಸಿನಿಮಾ ಮಾತ್ರವಲ್ಲ, ನನ್ನ ಸಿನಿಮಾದ ಚರ್ಚೆಯೂ ಆಗಬಾರದಿತ್ತು. ಅಲ್ಲಿ ಆಗಬೇಕಾಗಿದ್ದಿದ್ದು ಸಿನಿಮೋತ್ಸವದ ಚರ್ಚೆ, ಕನ್ನಡ ಚಿತ್ರರಂಗಕ್ಕೆ ಆ ಸಿನಿಮೋತ್ಸವದಲ್ಲಿ ಸಿಕ್ಕ ಪ್ರಾತಿನಿಧ್ಯದ ಚರ್ಚೆ ಆಗಬೇಕಿತ್ತು. ಅಲ್ಲದೆ, ನಾನು ಮೊದಲ ಬಾರಿಗೆ ಅಂಥಹಾ ದೊಡ್ಡ ಕಾರ್ಯಕ್ರಮದಲ್ಲಿ ದೊಡ್ಡ ವ್ಯಕ್ತಿಗಳ ಜೊತೆ ಭಾಗವಹಿಸುತ್ತಿದ್ದೇನೆ. ಅಲ್ಲಿ ಭಾಷಣ ಸಹ ಮಾಡಲಿದ್ದೆ, ಅದರ ಬಗ್ಗೆ ನಾನು ಟೆನ್ಶನ್‌ನಲ್ಲಿದ್ದೆ, ಈ ನಡುವೆ ಆತ ಈ ಪ್ರಶ್ನೆ ಕೇಳಿದ'' ಎಂದು ವಿವರಿಸಿದ್ದಾರೆ.