ಕಿಚ್ಚ ಸುದೀಪ್ ಕೋಟಿ ಕೋಟಿ ಹಣವನ್ನ ಯಾರಿಗೆ ಕೊಡ್ತಾರೆ ಗೊತ್ತಾ..? ಈಗ ಬಯಲಿಗೆ ನೋಡಿ

By Infoflick Correspondent

Updated:Tuesday, August 2, 2022, 15:00[IST]

ಕಿಚ್ಚ ಸುದೀಪ್ ಕೋಟಿ ಕೋಟಿ ಹಣವನ್ನ ಯಾರಿಗೆ ಕೊಡ್ತಾರೆ ಗೊತ್ತಾ..? ಈಗ ಬಯಲಿಗೆ ನೋಡಿ

ಅಭಿನಯ ಚಕ್ರವರ್ತಿ ಎಂದೇ ಕನ್ನಡ ಸಿನಿಮಾರಂಗದಲ್ಲಿ ಅವರದ್ದೇ ಆದ ಅಪಾರ ಅಭಿಮಾನಿ ಹೆಚ್ಚು ಬಳಗವನ್ನು ಗಿಟ್ಟಿಸಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ಕಿಚ್ಚ ಸುದೀಪ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದಲೇ ಇಷ್ಟಪಡುತ್ತಾರೆ. ಸುದೀಪ್ ಅವರಿಗೂ ಅಭಿಮಾನಿಗಳು ಎಂದರೆ ಎಲ್ಲಿಲ್ಲದ ಸಂತಸ ಮಮತೆ ಎನ್ನಬಹುದು. ಅವರಿಗೆ ಪ್ರೀತಿ ನೀಡುವ ವಿಷಯದಲ್ಲಿ ಕಿಚ್ಚ ಯಾವಾಗಲೂ ಮುಂದೆ ಇರುತ್ತಾರೆ. ಕಿಚ್ಚ ಸುದೀಪ್ ಅವರು ಕೇವಲ ಒಬ್ಬ ನಟ ಮಾತ್ರ ಅಲ್ಲ, ಜೊತೆಗೆ ಹಾಡುಗಾರರು ಸಹ ಹೌದು. ಯಶಸ್ವಿ ಬಹುಭಾಷ ನಟ ಎನ್ನಬಹುದು ಸುದೀಪ್ ಅವರಿಗೆ. ತೆಲುಗು, ತಮಿಳು, ಹಿಂದಿ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ನಮ್ಮ ಕನ್ನಡತನದಿಂದ ಮೆರೆದಿದ್ದಾರೆ. ಕನ್ನಡ ಇಂಡಸ್ಟ್ರಿ ಶಕ್ತಿಯನ್ನು ಬೇರೆ ಬೇರೆ ಚಿತ್ರರಂಗಕ್ಕೂ ತೋರಿಸಿದ್ದಾರೆ. 

ಕನ್ನಡ ಸಿನಿಮಾರಂಗದಲ್ಲಿ ಎಂತೆಂತಹ ಪ್ರತಿಭೆಗಳು ಇರುತ್ತವೆ ಎಂಬುದಾಗಿ ಅವರ ಅಭಿನಯದ ಮೂಲಕವೇ ಸುದೀಪ ಅವರು ಹೆಚ್ಚು ಜನರಿಗೆ ಪ್ರಸ್ತುತಪಡಿಸಿದ್ದಾರೆ. ಅಂತಹ ಕಿಚ್ಚ ಸುದೀಪ್ ಅವರು ಸಿನಿಮಾ ವಿಚಾರವಾಗಿ, ಹಾಗೆ ಕನ್ನಡದ ಭಾಷೆ ವಿಚಾರವಾಗಿ ಹಿಂದೆ ಸರಿದವರೆ ಅಲ್ಲ. ಅವುಗಳ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದಾರೆ ಎನ್ನಬಹುದು. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಬೇರೆ ಬೇರೆ ದೇಶದಲ್ಲೂ ಕೂಡ ಬಿಡುಗಡೆಯಾಗಿದೆ. ಹಾಗೆ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆಎನ್ನಲಾಗಿದೆ. ಈ ಸಿನಿಮಾ ಅದ್ಬುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ಎಲ್ಲೆಡೆ ಶಿಳ್ಳೆ ಕೇಕೆ ಹಾಕುತ್ತಿರುವುದು ನೀವು ನೋಡಿದ್ದಿರಿ. ನಮ್ಮ ಕನ್ನಡದ ಮತ್ತೊಂದು ಸಿನಿಮಾ ಈ ರೀತಿ ಸದ್ದು ಮಾಡುತ್ತಿರುವುದು ಖುಷಿಯ ವಿಚಾರವೆ ಸರಿ ಅಲ್ಲವೇ.

ಆದರೆ ಇಂತಹ ಸಮಯದಲ್ಲಿ ಸಿನಿಮಾ ಬಗ್ಗೆ ಮತ್ತು ಕಿಚ್ಚ ಸುದೀಪ್ ಅವರ ಬಗ್ಗೆ ಸಾಕಷ್ಟು ಕಿಡಿಗೇಡಿಗಳು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನಟ ಸುದೀಪ್ ಅಭಿನಯದ ಈ ವಿಕ್ರಾಂತ್ ರೋಣ ಸಿನಿಮಾ ಸ್ವಲ್ಪವೂ ಚೆನ್ನಾಗಿಲ್ಲ ಎಂದು ಹೆಚ್ಚು ನೆಗೆಟಿವ್ ಟಾಕ್ ನಡೆಸಿದ್ದಾರೆ. ಅವರಿಗೆ ಇದೀಗ ಕಿಚ್ಚ ಸುದೀಪ್ ಅವರ ಮ್ಯಾನೇಜರ್ ಆಗಿರುವ, ಹಾಗೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿರುವ ಅವರ ಮ್ಯಾನೇಜರ್ ರಾಮ್ ಅವರು ಸುದೀಪ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ. ಮುಂದೆ ಓದಿ. ಸುಮಾರು 12 ವರ್ಷದಿಂದ ಸುದೀಪ್ ಅವರು ಏನೆಂದು ನನಗೆ ಗೊತ್ತು. ಕಿಚ್ಚ ಸುದೀಪ್ ಅವರು ಕೋವಿಡ್ ಸಂಧರ್ಭದಲ್ಲಿ ಅಡ್ವರ್ಟೈಸ್ಮೆಂಟ್ ಮಾಡುತ್ತಿದ್ದರು. ನಾವೆಲ್ಲ ಅವರ ಜೊತೆಗೆ ಇರುತ್ತಿದ್ದೆವು. ಅದರಿಂದ ಬಂದ ಹಣವನ್ನು ಚಾರಿಟಿಗೆ ನೀಡಿದ್ದಾರೆ.

ಸಿನಿಮಾ ತಂತ್ರಜ್ಞರು ಸಣ್ಣ ಸಣ್ಣ ಕಲಾವಿದರು, ಹಾಗೇನೇ ಅವರ ಅಭಿಮಾನಿಗಳು ಸಹ ಕಷ್ಟ ಎಂದಾಗ ಆ ಚಾರಿಟಿ ಮೂಲಕವೇ ಹಣ ನೀಡಿದ್ದಾರೆ ಕಿಚ್ಚ ಸುದೀಪ್. ಕ್ಯಾನ್ಸರ್ ಪೇಶಂಟ್ ಗಳಿಗೆ ದುಡ್ಡು ನೀಡಿ, ಅವರಿಗೆ ಚಿಕಿತ್ಸೆ ಕೊಡಿಸಿ ಮನೆಮನೆಗೂ ಮೆಡಿಸನ್ ಮುಟ್ಟಿಸಿದ್ದಾರೆ ಸುದೀಪ್ ಸರ್. ಹಾಗೇನೇ ನಟ ಕಿಚ್ಚ ಅವರಿಗೆ ಬೇರೆಯವರ ಬಗ್ಗೆ ಹೆಚ್ಚು ಮಾತನಾಡುವುದು ಅಂದರೆ ಆಗುವುದಿಲ್ಲ, ಒಳ್ಳೆಯದು ಮಾಡಲಿಕ್ಕೆ ಆಗಲಿಲ್ಲ ಎಂದರು ಕೆಟ್ಟದ್ದು ಮಾತನಾಡಬೇಡಿ ಎನ್ನುತ್ತಾ ಎಲ್ಲರನ್ನೂ ಜೊತೆಗೆ ನೋಡಿಕೊಂಡು ಹೋಗುತ್ತಾರೆ. ನೀವು ಬೆಳೆಯಬೇಕು ನೀವು ಬೆಳೆಯಬೇಕು ಎಂದು ಪ್ರತಿಯೊಬ್ಬರನ್ನೂ ಕೂಡ ಕೈಹಿಡಿಸಿಕೊಂಡು ಕಿಚ್ಚ ನಡೆಯುತ್ತಾರೆ. ಬೇರೆ ಇಂಡಸ್ಟ್ರಿಗೆ ಹೋಗಿ ನನ್ನ ಹೆಸರನ್ನು ಬಳಸಿಕೊಂಡು ನೀವು ಕೂಡ ದೊಡ್ಡದಾಗಿ ಹೆಸರು ಮಾಡಿ ಎಂದು ಹೇಳುತ್ತಾರಂತೆ.

ಅಂತಹ ನಟ ಯಾರಿಗೆ ಸಿಗುತ್ತಾರೆ, ಯಾವ ಇಂಡಸ್ಟ್ರಿಯಲ್ಲಿ ಇದ್ದಾರೆ ಹೇಳಿ ನೋಡೋಣ, ಹಾಗೆ ಅವರ ಕೈಯಾರೆ ಸಾಕಷ್ಟು ಜನರಿಗೆ ಮನೆಗೆ ಬಂದ ಅತಿಥಿಗಳಿಗೆ ಊಟ ಬಡಿಸುತ್ತಾರೆ. ದೋಸೆ, ಬಿರಿಯಾನಿ ಮಾಡಿ ಅವರ ಕೈಯಾರೆ ಉಣ ಬಡಿಸುತ್ತಾರೆ. ಅಷ್ಟು ಸರಳತೆಯಿಂದಲೆ ಸಿಂಪಲ್ ಆಗಿರುವ ಇನ್ನೊಬ್ಬ ನಟನ ನಾನು ನೋಡಿಲ್ಲ ಎಂದಿದ್ದಾರೆ ಕಿಚ್ಚ ಸುದೀಪ್ ಮ್ಯಾನೇಜರ್ ಆದ ರಾಮ್ ಅವರು. ಕೋಟಿ ಕೋಟಿ ಹಣವನ್ನ ಚಾರಿಟಿಗೆ ನೀಡಿ ಸಹಾಯ ಮಾಡುತ್ತಾರೆ ಕಿಚ್ಚ. ಅಂತಹವರ ಬಗ್ಗೆ ಈ ರೀತಿ ಮಾತನಾಡುವವರಿಗೆ ನನ್ನ ಧಿಕ್ಕಾರ ಇದೆ ಎಂದು ಮ್ಯಾನೇಜರ್ ಇದೀಗ ಮಾಧ್ಯಮದ ಎದುರು ಆಕ್ರೋಶ ಹೊರ ಹಾಕಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆ ಕಿಚ್ಚ ಸುದೀಪ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದಾಗಿ ಕಮೆಂಟ್ ಮಾಡಿ, ವಿಕ್ರಾಂತ್ ರೋಣ ಚಿತ್ರ ನಿಜಕ್ಕೂ ಹೇಗಿದೆ ಎಂದು ಒಬ್ಬ ಕನ್ನಡಿಗನಾಗಿ ಕಾಮೆಂಟ್ ಮಾಡಿ ಧನ್ಯವಾದಗಳು...