Sudeep : ಇಬ್ಬರೂ ಮಕ್ಕಳ ಸಹಾಯಕ್ಕೆ ನಿಂತ ನಟ ಕಿಚ್ಚ ಸುದೀಪ್..! ಮಕ್ಕಳ ತಂದೆ ಸಹಾಯ ನೆನೆದು ಭಾವುಕ..!

By Infoflick Correspondent

Updated:Thursday, July 14, 2022, 09:01[IST]

Sudeep :  ಇಬ್ಬರೂ ಮಕ್ಕಳ ಸಹಾಯಕ್ಕೆ ನಿಂತ ನಟ ಕಿಚ್ಚ ಸುದೀಪ್..! ಮಕ್ಕಳ ತಂದೆ ಸಹಾಯ ನೆನೆದು ಭಾವುಕ..!

ಅನುಪಂಡಾರಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾ ನಟ ಕಿಚ್ಚ ಸುದೀಪ್ ಅವರ ಅಭಿನಯದಲ್ಲಿ ಭರ್ಜರಿಯಾಗಿ ಇದೆ ತಿಂಗಳು 28 ನೇ ತಾರೀಖಿನಂದು ತೆರೆಗೆ ಬರುತ್ತಿದೆ. ಹೌದು ಇದರಲ್ಲಿ ಹೆಚ್ಚು ಬಿಜಿಯಾಗಿರುವ ಇಡೀ ಚಿತ್ರದಂಡ ಪ್ರಮೋಶನ್ ನಲ್ಲಿ ಸಕ್ರಿಯವಾಗಿದೆ. ನಟ ಸುದೀಪ್ ಅವರು ಸಿನಿಮಾ ಜೊತೆ ಸಾಮಾಜಿಕ ಕಾರ್ಯಗಳಿಗೂ ಕೂಡ ಒತ್ತು ನೀಡುತ್ತಾರೆ. ಇದೀಗ ಬೆಂಗಳೂರಿನ ಚಾಮರಾಜಪೇಟೆ ಶಾಲೆಯ ಇಬ್ಬರು ಮಕ್ಕಳಿಗೆ ನೆರವಿಗೆ ನಿಂತಿದ್ದು ಸುದೀಪ್ ಅವರು ಮಾಡಿದ ಈ ಕಾರ್ಯಕ್ಕೆ ಮೆಚ್ಚಲೇಬೇಕು. ಆ ಹುಡುಗುರ ಹೆಸರು ತರುಣ್ ಹಾಗೂ ಸುದೀಪ್ ಎನ್ನಲಾಗಿದೆ.   

ಅವರ ತಂದೆ ಚಾಮರಾಜನಗರದ ರಘು ಚಾರ್ಲಿ. ಇವರು ಸಹ ಒಬ್ಬ ಕಲಾವಿದ. ಇವರ ಮಕ್ಕಳು ತರುಣ್ ಹಾಗೂ ಸುದೀಪ್ ಶಾಲೆಯ ಫಿಜ್ ಕಟ್ಟಲು ಆಗದೆ ಹೆಚ್ಚು ಕಷ್ಟದ ಜೀವನ ಮಾಡುತ್ತಿದ್ದಾರೆ. ರಘು ಚಾರ್ಲಿ ದುಡಿದ ದುಡ್ಡು ಅವರ ಕುಟುಂಬಕ್ಕೆ ಆಗುತ್ತಿರಲಿಲ್ಲವಂತೆ. ಇದೆ ಕಾರಣಕ್ಕೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ತೊಂದರೆ ಆಗಿದೆ. ಇದನ್ನು ಗಮನಿಸಿದ ಕಿಚ್ಚ ಸುದೀಪ್ ಅವರ ಚಾರಿಟಿ ಸಂಸ್ಥೆ ರಘು ಅವರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಶಾಲೆಯಿಂದ ಫೀಸ್ ಕಟ್ಟಿಲ್ಲ ಎಂದು ಹೊರ ಹಾಕಿರುವ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಬೇಕು ಎನ್ನುವ ಉದ್ದೇಶದಲ್ಲಿ ಕಿಚ್ಚ ಸುದೀಪ್ ಚಾರಿಟಿ ಸಂಸ್ಥೆ ಈ ಎರಡು ಮಕ್ಕಳ ನೆರವಿಗೆ ಬಂದಿದ್ದು ಅಷ್ಟು ಫಿಜ್ ತುಂಬಿದ್ದಾರೆ ಎನ್ನಲಾಗಿದೆ.

ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಿಳಿದು ಬಂದಿದ್ದು ಕಿಚ್ಚ ಸುದೀಪ್ ಚಾರಿಟಿ ಸಂಸ್ಥೆಯ ಮೂಲಕ ಮಕ್ಕಳ ವಿದ್ಯಾಭ್ಯಾಸ ಫೀಸ್ ಕಟ್ಟಿದ ಕಿಚ್ಚ ಸುದೀಪ್ ಅವರಿಗೆ ಆ ಮಕ್ಕಳ ತಂದೆ ರಘು ಚಾರ್ಲಿಯವರು ಧನ್ಯವಾದವನ್ನು ತಿಳಿಸಿದ್ದಾರೆ. ಹಾಗೆ ಭಾವುಕರಾಗಿ ನಟ ಕಿಚ್ಚ ಸುದೀಪ್ ಅವರು ಮಾಡಿದ ಈ ಸಹಾಯವನ್ನು ನೆನೆದಿದ್ದಾರೆ. ಮಕ್ಕಳು ಕೂಡ ಇದೀಗ ಶಾಲೆಗೆ ಮತ್ತೆ ಹೋಗಿದ್ದು ಕಿಚ್ಚ ಸುದೀಪ್ ಅವರು ಮಾಡುವ ಸಾಕಷ್ಟು ಒಳ್ಳೆಯ ಸಹಾಯಗಳಲ್ಲಿ ಇದು ಸಹ ಸೇರಿದೆ ಎಂದು ಹೇಳಬಹುದು. ಕಿಚ್ಚ ಸುದೀಪ್ ಅವರು ಸಾಮಾಜಿಕ ಕಾರ್ಯದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ.. ಹಾಗೆ ಮತ್ತೊಬ್ಬದ ನೆರೆವಿಗೆ ಬರುವುದು ಅವರ ಒಳ್ಳೆಯ ಗುಣ.

ಜೊತೆಗೆ ಕಷ್ಟ ಎಂದವರಿಗೆ ಸಹಾಯ ಮಾಡುತ್ತಾರೆ ನೀವು ಕೂಡ ಕಿಚ್ಚ ಸುದೀಪ್ ಅವರು ಮಕ್ಕಳಿಗೆ ಮಾಡಿದ ಈ ಸಹಾಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ತಪ್ಪದೇ ಈ ಮಾಹಿತಿಯನ್ನು ಶೇರ್ ಮಾಡಿ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹರಸಿ ಧನ್ಯವಾದಗಳು... ( news source :  asai net suvarna news )