ಸಂಚಾರ ನಿಲ್ಲಿಸಿದ ವಿಜಯ್: ಸುದೀಪ್ ರಾತ್ರೋ ರಾತ್ರಿ ಅಪೋಲೋ ಸಿಇಒಗೆ ಕರೆ ಮಾಡಿ ಕೇಳಿದ್ರೆ ಶಾಕ್ ಆಗ್ತೀರಾ..

Updated: Monday, June 14, 2021, 13:34 [IST]

    

ನಾನು ಅವಳಲ್ಲ ಸಿನಿಮಾದಿಂದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಹಲೋಕ ತ್ಯೆಜಿಸಿದ್ದಾರೆ. ಶನಿವಾರ ರಾತ್ರಿ ಸ್ನೇಹಿತ ನವೀನ್ ಜೊತೆ ಬೈಕ್ ನಲ್ಲಿ ತೆರಳುವಾಗ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. 

ಅಪಘಾತದಲ್ಲಿ ಸಂಚಾರಿ ವಿಜಯ್ ಬಲ ತೊಡೆ ಹಾಗೂ ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ. ಪರಿಣಾಮ ವಿಜಯ್ ಮೆದುಳು ನಿಷ್ಕ್ರಿಯಗೊಂಡಿದ್ದು, ಕಳೆದ 36 ಗಂಟೆಗಳಿಂದ ಅಪೋಲೋ ಆಸ್ಪಯತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಇದೀಗ ಅವರು ಮೃತಪಟ್ಟಿದ್ದು, ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.  

ಇನ್ನು ಅಪಘಾತ ಸಂಭವಿಸಿದ ಕೂಡಲೇ ಮಾಹಿತಿ ತಿಳಿದ ಕಿಚ್ಚ ಸುದೀಪ್ ಸಂಚಾರಿ ವಿಜಯ್ ನೆರವಿಗೆ ಆಗಮಿಸಿದ್ದಾರೆ. ಸುದೀಪ್ ಅಪೋಲೋ ಸಿಇಒಗೆ ರಾತ್ರೋ ರಾತ್ರಿ ಕರೆ ಮಾಡಿ ಆಪರೇಷನ್ ಗೆ ವ್ಯವಸ್ಥೆ ಮಾಡಿದ್ದಾರೆ. ಸಂಚಾರಿ ವಿಜಯ್ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ. 

ಆದರೆ, ಚಿಕಿತ್ಸೆಗೆ ಸ್ಪಂದಿಸದ ಸಂಚಾರಿ ವಿಜಯ್ ಸಾವನ್ನಪ್ಪಿದ್ದು, ಸುದೀಪ್ ಸಂತಾಪ ಸೂಚಿಸಿದ್ದಾರೆ. ಸಂಚಾರಿ ವಿಜಯ್ ನಿಧನದಿಂದ ಆಘಾತವಾಗಿದೆ. ಲಾಕ್ ಡೌನ್ ಗೂ ಮೊದಲು ಎರಡು ಬಾರಿ ಭೇಟಿಯಾಗಿದ್ದೆ. ಸಂಚಾರಿ ವಿಜಯ್ ನಿಧನಕ್ಕೆ ನನ್ನ ಸಂತಾಪ. ಅವನ ಮುಂಬರುವ ಸಿನಿಮಾ ರಿಲೀಸ್ ಗಾಗಿ ಕಾತುರದಿಂದ ಕಾದಿದ್ದೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.