Sudeep : ದರ್ಶನ್ ಅಭಿಮಾನಿಗೆ ಸಹಾಯ ಹಸ್ತ ನೀಡಿದ ಸುದೀಪ್..! ವಿಡಿಯೋ ನೋಡಿ ವಾವ್ ಎಂದ ಅಭಿಮಾನಿಗಳು

By Infoflick Correspondent

Updated:Monday, July 18, 2022, 11:41[IST]

Sudeep :  ದರ್ಶನ್ ಅಭಿಮಾನಿಗೆ ಸಹಾಯ ಹಸ್ತ ನೀಡಿದ ಸುದೀಪ್..! ವಿಡಿಯೋ ನೋಡಿ ವಾವ್ ಎಂದ ಅಭಿಮಾನಿಗಳು

ಈ ಜೀವನ ಅಂದ್ರೆ ಹಾಗೇನೆ, ಯಾವಾಗ ಯಾವ ರೀತಿ ಸಮಸ್ಯೆಗಳು ಯಾರಿಗೆ ಎದುರಾಗುತ್ತವೆ, ಯಾವ ರೀತಿ ಕಷ್ಟಗಳು ಹೆಚ್ಚಾಗುತ್ತವೆ ಎಂದು ಎಂದಿಗೂ ಹೇಳಲಿಕ್ಕಾಗದು. ಈ ಜೀವನದಲ್ಲಿ ಕಷ್ಟ ನೋವು ಸುಖ ಎಲ್ಲವನ್ನು ಒಟ್ಟಿಗೆ ಅನುಭವಿಸಬೇಕಾಗಿದ್ದು ಮನುಜನ ಕುಲದ ನಿಯಮ ಆಗಿದೆ. ಎಲ್ಲರೂ ಕೂಡ ಅದಕ್ಕೆ ಶರಣಾಗಲೇಬೇಕು ಅಲ್ವಾ. ಹೌದು ಇಲ್ಲೊಬ್ಬ ಪುಟ್ಟ ಬಾಲಕ ಇದ್ದಾನೆ. ಈತನ ಹೆಸರು ವೃತನ್ ಗೌಡ. ಹುಡುಗನ ಸಣ್ಣ ವಯಸ್ಸಿಗೆ ಎರಡು ಕಿಡ್ನಿ ವೈಫಲ್ಯ ಕಂಡಿದೆ. ಕನ್ನಡ ಸಿನಿಮಾರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಈ ವ್ರುತನ್ ಗೌಡ. ಈತ ಬಹುತೇಕ ನಟ ದರ್ಶನ್ ಅವರ ಎಲ್ಲಾ ಸಿನಿಮಾಗಳನ್ನು ವೀಕ್ಷಣೆ ಮಾಡಿದ್ದಾನಂತೆ. ಹಾಗೆ ಅವರನ್ನು ಭೇಟಿ ಆಗಬೇಕು ಎಂಬುದಾಗಿ ಸಾಕಷ್ಟು ಬಾರಿ ಹರಸಾಹಸ ಪಟ್ಟರು ಅದು ನೆರವೇರಲಿಲ್ಲ. 

ಆದರೆ ಈ ಆರೋಗ್ಯ ಸಮಸ್ಯೆಯೂ ಎದುರಾದ ಮೇಲೆ ಕೆಲವರಿಂದ ನಟ ಡಿ ಬಾಸ್ ಅವರನ್ನು ಈ ಪುಟ್ಟ ಬಾಲಕ ಭೇಟಿಯಾಗಿದ್ದಾನೆ. ಜೊತೆಗೆ ಇವರ ತಂದೆ ತಾಯಿ ಕೂಡ ಭೇಟಿಯಾಗಿದ್ದಾರೆ. ಅಂದು ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಈತನ ಚಿಕಿತ್ಸೆಗೆ ಎಂಬತ್ತರಿಂದ 90 ಸಾವಿರ ರೂಪಾಯಿ ಹಣ ತಿಂಗಳಿಗೆ ಬೇಕು ಎಂದು ವೈದ್ಯರು ಹೇಳಿದ್ದರಂತೆ. ಈತನ ತಂದೆ ತಾಯಿ ಅಷ್ಟು ಹಣ ಹೊಂದಿಸಬೇಕೆತ್ತಂತೆ, ಕಿಡ್ನಿ ಚಿಕಿತ್ಸೆಗೆ ತಿಂಗಳಿಗೆ 90 ಸಾವಿರ ಹಣ ಇವರ ತಂದೆ ತಾಯಿ ಎಲ್ಲಿಂದ ತರಬೇಕು, ಆಗ ಇವರ ವಿಷಯ ಅದ್ಹೇಗೋ ಕಿಚ್ಚ ಸುದೀಪ್ ಟ್ರಸ್ಟ್ ಮುಖಾಂತರ ಕಿಚ್ಚ ಸುದೀಪ್ ಅವರಿಗೆ ಮುಟ್ಟಿದೆ. ನಟ ಕಿಚ್ಚ ಸುದೀಪ್ ಅವರು ದರ್ಶನ್ ಅಭಿಮಾನಿ ಆಗಿರುವ ಈ ವೃತನ್ ಗೌಡ ಆರೋಗ್ಯ ಚಿಕಿತ್ಸೆಗೆ ನಾನು ಹಣಬರಿಸುತ್ತೇನೆ.   

ಈತನ ಆರೋಗ್ಯ ಕರ್ಚನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮುಂದೆ ಬಂದು ಸಹಾಯ ಮಾಡಿದ್ದಾರಂತೆ ಕಿಚ್ಚ ಸುದೀಪ್. ಹೌದು ಸುದೀಪ್ ಅವರು ಮಾಡಿದ ಸಹಾಯ ನೆನೆದ ಈ ಬಾಲಕನ ತಂದೆ ತಾಯಿ ನಮ್ಮ ಮಗ ದರ್ಶನ್ ಅವರ ದೊಡ್ಡ ಫ್ಯಾನ್ ಆದರೂ ಕೂಡ, ಸುದೀಪ್ ಅವರು ನಮ್ಮ ಮಗನಿಗೆ ಚಿಕಿತ್ಸೆಯ ಹಣವನ್ನು ನೀಡುವುದಾಗಿ ಸಹಾಯ ಹಸ್ತ ನೀಡಿ ಭರವಸೆ ಮಾತುಗಳನ್ನು ಆಡಿದ್ದಾರೆ. ನಾವು ಅವರಿಗೆ ಎಂದು ಚಿರಋಣಿ , ಯಾರದ್ದೇ ಪ್ಯಾನ್ ಇರಲಿ, ಪುಟ್ಟ ಬಾಲಕನ ಜೀವ ಮುಖ್ಯ ಎಂದು ಸುದೀಪ್ ಅವರು ಮಾಡಿರುವ ಸಹಾಯಕ್ಕೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ ವೃತನ್ ತಂದೆ ತಾಯಿ. ಇಲ್ಲಿವೆ ನೋಡಿ ಆ ವಿಡಿಯೋ. ಪ್ರತಿಯೊಬ್ಬ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಈ ವಿಡಿಯೋವನ್ನು ನೋಡಲೇಬೇಕು. ಹಾಗೆ ಈ ಮಾಹಿತಿಯ ಬಗ್ಗೆಯೂ ಕೂಡ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು. ( video credit : third eye )..