ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆ ಈ ದಿನಾಂಕದಂದು

By Infoflick Correspondent

Updated:Tuesday, June 21, 2022, 14:16[IST]

ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆ ಈ ದಿನಾಂಕದಂದು

ಕಿಚ್ಚ ಸುದೀಪ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ತಂಡ ಭರ್ಜರಿ ಸುದ್ದಿಯೊಂದನ್ನು ಅಭಿಮಾನಿಗಳಿಗೆ ಕೊಟ್ಟಿದೆ. ಚಿತ್ರದ ಟ್ರೈಲರ್ ಗಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ.

ರಾ ರಾ ರಕ್ಕಮ್ಮ'  ಹಾಡಿನ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹೊಸ ಸೆನ್ಸೇಷನ್​ ಸೃಷ್ಟಿಸಿರುವ 'ವಿಕ್ರಾಂತ್ ರೋಣ'  ತಂಡವು ಈ ಬಾರಿ ಟ್ರೈಲರ್ ರಿಲೀಸ್ ಸುದ್ದಿ ನೀಡಿದೆ. ಜುಲೈ 28 ರಂದು ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ಥಿಯೇಟರ್ ನಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ತಿಂಗಳಿಗೂ ಮೊದಲೇ ಟ್ರೈಲರ್ ಪ್ರೇಕ್ಷಕರ ಮುಂದೆ ಬರಲಿದೆ.  

ಇದೀಗ ವಿಡಿಯೋ ತುಣುಕಿನ ಬಿಡುಗಡೆ ಮೂಲಕ ಜೂನ್ 23 ರಂದು ವಿಕ್ರಾಂತ್ ರೋಣನ ಅಸಲಿ ಅವತಾರವನ್ನು ತೋರಿಸುವುದಾಗಿ ಕಿಚ್ಚ ಸುದೀಪ್ ತಿಳಿಸಿದ್ದಾರೆ. ಅದರಂತೆ ಮುಂದಿನ ಗುರುವಾರ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. 

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣರಾಗಿ ಕಾಣಿಸಿಕೊಳ್ಳಲಿದ್ದು, ಸಂಜೀವ್ ಗಂಭೀರ್ ಹೆಸರಿನ ಮತ್ತೊಂದು ಪಾತ್ರದಲ್ಲಿ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ.  ನಾಯಕಿಯಾಗಿ ನಿತಾ ಅಶೋಕ್ , ವಿಭಿನ್ನ ಪಾತ್ರದೊಂದಿಗೆ ರವಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ.