Sudeep : ವಾವ್ ನಿನ್ನೆಯ ಉಪ್ಪಿ ಚಿತ್ರದ ಮಹೂರ್ತದಲ್ಲಿ ಕಿಚ್ಚ ಸುದೀಪ್ ಹೇಳಿದ್ದ ಕೇಳಿ..! ನಿಜ ಗ್ರೇಟ್ ಅನ್ಸುತ್ತೆ

By Infoflick Correspondent

Updated:Sunday, June 5, 2022, 18:31[IST]

Sudeep :  ವಾವ್ ನಿನ್ನೆಯ ಉಪ್ಪಿ ಚಿತ್ರದ ಮಹೂರ್ತದಲ್ಲಿ ಕಿಚ್ಚ ಸುದೀಪ್ ಹೇಳಿದ್ದ ಕೇಳಿ..! ನಿಜ ಗ್ರೇಟ್ ಅನ್ಸುತ್ತೆ

ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ನಟ ಉಪೇಂದ್ರ ಅವರು ಇದೀಗ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಹೌದು ನಿನ್ನೆಯಷ್ಟೇ ಉಪೇಂದ್ರ ಅವರ ಹೊಸ ಚಿತ್ರದ ಮುಹೂರ್ತ ಕೂಡ ಬೆಂಗಳೂರಿನ ಬಂಡಿ ಮಾರ್ಕಾಳಮ್ಮ ದೇವಸ್ಥಾನದಲ್ಲಿ ತುಂಬಾ ಸರಳವಾಗಿ ನಡೆಯಿತು. ಆ ಮಹೂರ್ತ ಕಾರ್ಯಕ್ಕೆ ನಟ ಶಿವಣ್ಣ, ಕಿಚ್ಚ ಸುದೀಪ್, ಡಾಲಿ , ವಶಿಷ್ಠ ಹಾಗೆ ಚಿತ್ರದ ನಿರ್ದೇಶಕ ನಟ ಉಪೇಂದ್ರ ಅವರ ಜೊತೆ ಇಡೀ ಚಿತ್ರತಂಡ ಕಾಣಿಸಿಕೊಂಡಿತ್ತು. ನಟ ಉಪೇಂದ್ರ ಅವರು ಮತ್ತೆ ಬಹಳ ವರ್ಷಗಳ ಬಳಿಕ ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ಕೈಚಳಕ ತೋರಿಸುವುದಕ್ಕೆ ಮುಂದಾಗಿದ್ದಾರೆ. ಅತ್ತ ಕಬ್ಜ ಸಿನಿಮಾ ಈಗಾಗಲೇ ಕೊನೆ ಹಂತಕ್ಕೆ ಬಂದಿದ್ದು ಈಗಾಗಲೇ ಬಿಡುಗಡೆಗೆ ಸಜ್ಜಾಗಿದೆ. ಅದರ ಖುಷಿ ಜೊತೆ ಇನ್ನೊಂದು ಕಡೆ ಇದೀಗ ಯುಐ ಎಂಬ ಸಿಂಬಲ್ ಮೂಲಕ ಉಪೇಂದ್ರ ಅವರು ಪ್ರೇಕ್ಷಕರ ತಲೆಗೆ ಮತ್ತೆ ಹುಳ ಬಿಟ್ಟಿದ್ದಾರೆ ಎಂದು ಹೇಳಬಹುದು. 

ಹಾಗೆ ಪೋಸ್ಟರ್ ಕೂಡ ರಿಲೀಸ್ ಮಾಡಿರುವ ಚಿತ್ರತಂಡ ಕುದುರೆಯಲ್ಲಿ ಮನುಷ್ಯನ ನೋಟ, ಅದರಲ್ಲಿ ಕಾಣುವ ಕೆಲವು ಗುರುತುಗಳು ಸಿನಿಮಾ ಪ್ರೇಕ್ಷಕರ ಕುತೂಹಲವನ್ನ ಹೆಚ್ಚಾಗುವಂತೆ ಮಾಡಿವೆ. ಹೌದು ನಿನ್ನೆ ಉಪೇಂದ್ರ ಅವರ ಹೊಸ ಸಿನಿಮಾದ ಮುಹೂರ್ತದಲ್ಲಿ ನಟ ಕಿಚ್ಚ ಸುದೀಪ್ ಅವರು ಚಿತ್ರತಂಡಕ್ಕೆ ಮತ್ತು ಉಪೇಂದ್ರ ಅವರಿಗೆ ಹೇಳಿದ ಮಾತುಗಳು ಕೇಳಿದರೆ ಒಂದು ಕ್ಷಣ ಹೆಮ್ಮೆ ಎನಿಸುತ್ತದೆ.. ಸುದೀಪ್ ಅವರು ಹೇಳಿದ ಹಾಗೆ, ನಾನು ಉಪ್ಪಿ ಸಾರ್ ಅವರ ಈ ಹೊಸ ಚಿತ್ರದ ಮುಹೂರ್ತಕ್ಕೆ ಬಂದಿರುವುದು ಒಬ್ಬ ನಟನಾಗಿ ಅಲ್ಲ, ಬದಲಿಗೆ ನಟ ಉಪ್ಪಿ ಸರ್ ಅವರ ಅಭಿಮಾನಿಯಾಗಿ ಬಂದಿದ್ದೇನೆ. ಈ ಪೋಸ್ಟರ್ ತುಂಬಾ ಚೆನ್ನಾಗಿದೆ, ಕುದುರೆಯ ಪೋಸ್ಟರ್ ನೋಡುತ್ತಿದ್ದರೆ ಕುದುರೆ ರೇಸ್ ಮತ್ತೆ ಆರಂಭವಾದಂತಿದೆ. ಈ ಚಿತ್ರತಂಡಕ್ಕೆ ಮತ್ತು ಶ್ರೀಕಾಂತ ಜೊತೆಗೆ ಲಹರಿ ಮ್ಯೂಸಿಕ್ ಗೆ ಧನ್ಯವಾದಗಳು.   

ಹಾಗೆ ಎವಿ ತಂಡಕ್ಕೂ ಧನ್ಯವಾದ ಎಂದರು ಸುದೀಪ್. ಮತ್ತೆ ಮಾತು ಮುಂದುವರಿಸಿದ ಸುದೀಪ್, ಬಹಳ ವರ್ಷಗಳ ಬಳಿಕ ಉಪ್ಪಿ ಸರ್ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ನಾವು ತುಂಬಾ ಕಾತರದಿಂದ ಕಾಯುತ್ತಿದ್ದೇವೆ. ಇಡೀ ಚಿತ್ರತಂಡಕ್ಕೆ, ಹಾಗೆ ನನ್ನನ್ನು ಈ ಹೊಸ ಸಿನಿಮಾ ಮಹೂರ್ತ ಕಾರ್ಯಕ್ಕೆ ಕರೆದಿದ್ದಕ್ಕೆ ಧನ್ಯವಾದಗಳು ಎಂದರು. ಹಾಗೆ ಬಹುಬೇಗನೆ ಸಿನಿಮಾ ಮಾಡಿ ಸರ್, ನಾವು ನಿಮ್ಮ ಸಿನಿಮಾಗೆ ಹೆಚ್ಚು ಕಾಯುತ್ತಿದ್ದೇವೆ ಎಂದು ಧನ್ಯವಾದ ಹೇಳಿದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ಕಮೆಂಟ್ ಮಾಡಿ. ಉಪೇಂದ್ರ ಅವರ ಈ ಮೂರು ನಾಮದ ಸಿಂಬಲ್ ಹೆಸರಿನ ಮೂಲಕ ಮತ್ತೆ ಚಿತ್ರದ ನಿರ್ದೇಶನ ಆರಂಭಿಸಿರುವ ನಟ ಉಪೇಂದ್ರ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ. ಹಾಗೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...(video credit : top kannada tv )