ಕೆಜಿಎಫ್ ಸಿನಿಮಾ ವಿವಾದದ ಬಗ್ಗೆ ಕೊನೆಗೂ ಎಲ್ಲಾ ಸತ್ಯ ಬಿಚ್ಚಿಟ್ಟ ಸುದೀಪ್..! ಇಲ್ಲಿ ನೋಡಿ
Updated:Monday, April 25, 2022, 22:24[IST]

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗಿದೆ ಎಂದು ಹೇಳಬಹುದು. ಹೌದು ಕೆಜಿಎಫ್ 2 ಬಿಡುಗಡೆ ಆಗುತ್ತಿದ್ದಂತೆ ಸುದೀಪ್ ಅವರ ಒಂದು ರಿಯಾಕ್ಷನ್ ವಿಡಿಯೋ ತುಂಬಾ ವೈರಲ್ ಆಗಿತ್ತು. ಅದನ್ನು ಯಾರು ಮಾಡಿದರೂ, ಯಾಕೆ ಮಾಡಿದ್ದರು. ಅಸಲಿಗೆ ಆ ವಿಡಿಯೋ ಯಾವಾಗಿನದು ಎಂದು ಯಾವ ಮಾಹಿತಿ ಸಿಕ್ಕಿರಲಿಲ್ಲ. ನಂತರದಲ್ಲಿ ಕೆಜಿಎಫ್ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದಾಗಿ ಪ್ರಶ್ನೆ ಮಾಡಿದಲ್ಲಿ ಕಿಚ್ಚ ಸುದೀಪ್ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದು, ಕನ್ನಡಿಗರೇ ಕನ್ನಡಿಗರ ಯಶಸ್ಸನ್ನು ಸಹಿಸುವುದಿಲ್ಲ ಹಾಗೆ ಹೀಗೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಯಾರು ಆಗುವುದಿಲ್ಲ, ಎಲ್ಲರೂ ಹೊಟ್ಟೆಕಿಚ್ಚು ಪಡುತ್ತಾರೆ ಎನ್ನುವ ಮಾತುಗಳು ಕೂಡ ಸೋಶಿಯಲ್ ವಲಯದಲ್ಲಿ ಅಭಿಮಾನಿಗಳ ನಡುವೆ ಕೇಳಿಬಂದಿದ್ದವು. ಅದಕ್ಕೆಲ್ಲ ಉತ್ತರವೆಂಬಂತೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಆಗಲೇ ಉತ್ತರ ನೀಡಿದ್ದು, ಅದು ಗೋವಾ ಫೆಸ್ಟಿವಲ್ ಸಮಯದ ವೇಳೆ ತೆಗೆದ ವಿಡಿಯೋ ಆಗಿತ್ತು. ಅಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಹೆಮ್ಮೆಪಡುವ ವಿಷಯದ ಬಗ್ಗೆ ಮಾತನಾಡಬೇಕಿತ್ತು. ಹಾಗಾಗಿ ಕೆಜಿಎಫ್ ಸಿನಿಮಾ ಬಗ್ಗೆ ಆಗಲಿ,, ಕಿಚ್ಚ ಸುದೀಪ್ ಅವರ ಸಿನಿಮಾನೇ ಆಗಲಿ ಆ ಸಮಯದಲ್ಲಿ ಕೇಳಿದ್ದು ಸರಿಯಲ್ಲ ಎಂಬುದಾಗಿ ಈಗಾಗಲೇ ಅಭಿಮಾನಿಗಳು ಅದನ್ನ ಸಾಬೀತು ಪಡಿಸಿದ್ದು ಇದೀಗ ಕಿಚ್ಚ ಸುದೀಪ್ ಅವರು ಆ ಬಗ್ಗೆ ಸಮರ್ಥನೆ ನೀಡಿದ್ದಾರೆ.
ಹಾಗೆ ಇದನ್ನ ಯಾರಿಗೋ ಕ್ಲಾರಿ ಫಿಕೇಶನ್ ಕೊಡ್ತಾ ಇದಿನಿ ಅಂಥ ಅಂದುಕೊಳ್ಳ ಬೇಡಿ ಎಂದು ಮಾತು ಆರಂಭಿಸಿದ ಸುದೀಪ್ ಹೇಳಿದ್ದೆ ಬೇರೆ. ಜೊತೆಗೆ ನಾನು ಹೆಮ್ಮೆಯಿಂದ ಹೇಳಿಕೊಳ್ಳುವ ನನ್ನ ಅಭಿಮಾನಿಗಳು ಇದ್ದಾರೆ ಎಂದರು ಸುದೀಪ್. ನಾನು ಅಭಿಮಾನಿಗಳನ್ನು ಗಳಿಸಿದ್ದೇನೆ, ನಾನು ಸೈಲೆಂಟ್ ಆಗಿದ್ದರೆ ನನ್ನ ಅಭಿಮಾನಿಗಳು ಅದಕ್ಕೆಲ್ಲ ಉತ್ತರ ನೀಡಿದ್ದಾರೆ. ನಾನು ಯಾವುದಕ್ಕೂ ಸಹ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂಬುದಾಗಿ ಕೆಜಿಎಫ್ ಚಿತ್ರದ ವಿವಾದದ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಅಸಲಿಗೆ ಈ ಪ್ರೀತಿ ಪರಸ್ಪರ ಇದ್ದರೆ ಚೆಂದ ಎಂದಿದ್ದೇಕೆ ಕಿಚ್ಚ ಸುದೀಪ್. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ...
VIDEO CREDIT : KARANTAKA TALK