Sudeep : ಸುದೀಪ್ ಹಾಗೂ ರಮ್ಯಾ ಯಾವಾಗಲೂ ಜಗಳವಾಡುವುದು ಯಾಕೆ ಗೊತ್ತಾ..?

By Infoflick Correspondent

Updated:Monday, May 2, 2022, 15:00[IST]

Sudeep : ಸುದೀಪ್ ಹಾಗೂ ರಮ್ಯಾ ಯಾವಾಗಲೂ ಜಗಳವಾಡುವುದು ಯಾಕೆ ಗೊತ್ತಾ..?


ಸಿನಿ ಲೋಕದಿಂದ ದೂರ ಉಳಿದಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈಗ ಮತ್ತೆ ಚಂದನವನದತ್ತ ಮುಖ ಮಾಡುತ್ತಿರುವಂತೆ ಕಾಣುತ್ತಿದೆ. ಕಳೆದ ಕೆಲ ವರ್ಷಗಳಿಂದ ಸ್ಯಾಂಡಲ್ ವುಡ್, ಸೋಶಿಯಲ್ ಮೀಡಿಯಾಗಳಿಂದ ನಟಿ ರಮ್ಯಾ ಅವರು ದೂರ ಉಳಿದಿದ್ದರು. ಇದೀಗ ಮತ್ತೆ ಚಂದನವನದ ಕಡೆ ಒಲವು ತೋರಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಮ್ಯಾ ಸ್ಯಾಂಡಲ್ ವುಡ್ ಗೆಳೆಯರ ಜೊತೆ ಮತ್ತೆ ಸ್ನೇಹ ಮುಂದುವರಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ನನ್ನ ಜೀವನದಲ್ಲಿ ಮುಳುಗಿ ಹೋದ ಹಡಗು ಎಂದಿದ್ದ ನಟಿ, ಮಾಜಿ ಸಂಸದೆ ರಮ್ಯಾ. ನಟಿ ರಮ್ಯಾ ಹಲವು ದಿನಗಳ ಬಳಿಕ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಇನ್ನು ರಮ್ಯಾ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಾಗ, ಪುನೀತ್ ರಾಜ್ ಕುಮಾರ್, ಸುದೀಪ್ ಸೆರಿದಂತೆ ಹಲವು ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ರಮ್ಯಾ ಹಾಗೂ ಸುದೀಪ್ ಜೋಡಿ ಸ್ಯಾಂಡಲ್ವುಡ್ನ ಯಶಸ್ವಿ ಸಿನಿ ಜೋಡಿಗಳಲ್ಲಿ ಒಂದು. ರಂಗ ಎಸ್ಎಸ್ಎಲ್ಸಿ, ಕಿಚ್ಚ ಹುಚ್ಚ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ರಮ್ಯಾ ಹಾಗೂ ಸುದೀಪ್ ನಟಿಸಿದ್ದಾರೆ. ಕಿಚ್ಚ ಹುಚ್ಚ ಸಿನಿಮಾದಿಂದಲೇ ಸುದೀಪ್ ಅವರಿಗೆ ಕಿಚ್ಚ ಎಂಬ ಬಿರುದು ಸಿಕ್ಕಿದ್ದು. ರಮ್ಯಾ ಹಾಗೂ ಸೂದೀಪ್ ಸಿನಿಮಾದ ಹಾಡುಗಳು ಪ್ರತಿಯೊಂದೂ ಸೂಪರ್ ಹಿಟ್ ಆಗಿತ್ತು. ಈಗಲೂ ಈ ಹಾಡುಗಳು ಈಗಲೂ ಫೇಮಸ್ ಆಗಿವೆ.  

ಇನ್ನು ಸುದೀಪ್ ನಿರ್ದೇಶನದ ಸಿನಿಮಾಗಳಲ್ಲಿ ನಟಿಸುವುದಕ್ಕೆ  ರಮ್ಯಾ ಅವರಿಗೆ ತುಂಬಾ ಖುಷಿ ಕೊಡುತ್ತದೆಯಂತೆ. ಈ ಬಗ್ಗೆ ಸ್ವತಃ ರಮ್ಯಾ ಅವರೇ ಹಿಂದೆಯೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಹಾಗೆಯೇ ಸುದೀಪ್ ಹಾಗೂ ರಮ್ಯ ಇಬ್ಬರೂ ಕೂತು ಫೇಸ್ ಟು ಫೇಸ್ ಮಾತನಾಡಿದ್ದಾಗ ಇಬ್ಬರೂ ಸೆಟ್ ನಲ್ಲಿ ಯಾವಾಗಲೂ ಜಗಳವಾಡುತ್ತಿದ್ದರು ಎಂದು ಅವರೇ ಹೇಳಿಕೊಂಡಿದ್ದರು ಕೂಡ. ಸುದೀಪ್ ಅವರು ರಮ್ಯಾ ಮೇಲೆ ಉರಿದು ಬೀಳುತ್ತಿದ್ದರಂತೆ. ಯಾಕೆ ಹಾಗೆ ಮಾಡ್ತೀರಾ ನೀವು ಅಂತ ರಮ್ಯಾ ಸುದೀಪ್ ಅವರನ್ನ ಕೇಳಿದರೆ, ನಾನೆಲ್ಲಿ ಮಾಡಿದೆ. ನೀನೇ ತಾನೆ ಅಂತ ಹೇಳಿ ಯಾಮಾರಿಸಿದ್ದಾರೆ.