ನನ್ನ ತಾಯಿಯನ್ನ ಹಲವರು ಸೂಳೆ ಎಂದರು ಎಂದ ಜಾಲಪ್ಪ..! ಈ ಮಾತಿಗೆ ಕಣ್ಣೀರು ಹಾಕಿದ ನಟ ಕಿಚ್ಚ: ವಿಡಿಯೋ ನೋಡಿ

Updated: Tuesday, January 19, 2021, 08:57 [IST]

ಇತ್ತೀಚಿಗಷ್ಟೇ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಫಂಕ್ಷನ್ ನಡೆದಿದ್ದು ಕಿರುತೆರೆ ಮೇಲೆ ರಾರಾಜಿಸಿದ ಕೆಲವು ಕಲಾವಿದರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅದೇವೇಳೆ ಕಿಚ್ಚ ಸುದೀಪ್ ಅವರು ಕೂಡ ಬಂದಿದ್ದು, ಈ ಕಲರ್ಸ್ ಕನ್ನಡ ಕಾರ್ಯಕ್ರಮ ಒಂದರ, ಮೂವರು ಸಾಧಕರ ಹೆಸರನ್ನು ಹೆಸರಿಸಿ, ಅವರ ಜೀವನದಲ್ಲಿಯ ಕಷ್ಟಗಳನ್ನು ಸಣ್ಣದಾಗಿ ಪರಿಚಯ ಮಾಡಿಕೊಟ್ಟು, ಕಿಚ್ಚ ಸುದೀಪ್ ಅವರು ಕಾರ್ತಿಕ್ ಜಾಲಪ್ಪ ಮತ್ತು ವರಲಕ್ಷ್ಮಿ ಅವರನ್ನು ವೇದಿಕೆ ಮೇಲೆ ಕರೆದರು.ಹಾಗೇನೇ ಈ ಮೂವರಿಗೆ ತಮ್ಮ ಕಡೆಯಿಂದ ಸಣ್ಣ ಉಡುಗೊರೆಯೊಂದನ್ನು ನೀಡಿ ಅವರಿಗೆ ಮಾತನಾಡಲು ಹೇಳಿದರು.

ಹೌದು ಮಹಾಭಾರತದ ಕಾಮಿಡಿ ನಟ ಜಾಲಪ್ಪ ಕೂಡ ಈ ಮೂವರಲ್ಲಿ ಒಬ್ಬರಾಗಿದ್ದು, ತಮ್ಮ ನಿಜ ಜೀವನದಲ್ಲಿ ನಡೆದ ಒಂದು ಘಟನೆ ಬಗ್ಗೆ ಹೇಳುತ್ತಾ, ' ಗಂಡ ಬಿಟ್ಟು ಹೋಗಿದ್ದಕ್ಕೆ ನನ್ನ ತಾಯಿಯನ್ನು ಹಲವರು ಸೂಳೆ ಎಂದು ಕರೆದರು, ಗಂಡ ಇಲ್ಲದ ಹೆಂಗಸರೆಲ್ಲಾ ಸೂಳೇ ಯಾಗುವುದಿಲ್ಲ, ನನ್ನ ತಾಯಿ ನನ್ನ ಇವತ್ತಿನ ಕೆಲಸದ ಮೂಲಕ ಎಲ್ಲರಿಗೂ ಉತ್ತರ ನೀಡುತ್ತಿದ್ದಿಯಾ ಅಷ್ಟೇ ಸಾಕು ಎನ್ನುತ್ತಾರೆ,  ನನಗೂ ಸಾರ್ಥಕವಾಯ್ತು, ಎನಿಸುತ್ತದೆ' ಎಂದು ತುಂಬಾ ಭಾವುಕರಾಗಿ ವೇದಿಕೆ ಮೇಲೆ ಮಾತನಾಡಿದರು. 

ಇದೆ ವೇಳೆ ಕಿಚ್ಚ ಸುದೀಪ್ ಕೂಡ ಇವರ ಮಾತನ್ನು  ಕೇಳಿ  ಕಣ್ಣೀರು ಹನಿ ಹಾಕಿದರು. ಮತ್ತು ಕಿಚ್ಚ ಸುದೀಪ್ ಅವರ ಈ ಮಾನವೀಯತೆಯ ಗುಣಕ್ಕೆ ಅಭಿಮಾನಿಗಳೆಲ್ಲ ಫಿದಾ ಆಗಿದ್ದು ಈ ಸನ್ನಿವೇಶ ನೋಡಿ ಹ್ಯಾಟ್ಸಾಫ್ ಎನ್ನುತ್ತಿದ್ದಾರೆ ಹಾಗೆ ಕೊನೆಯಲ್ಲಿ ಸುದೀಪ್ ಅವರು ಹೇಳಿದ ಕಣ್ಣೀರು ತುಂಬಾ ಮಹತ್ವದ್ದು, ಯಾರಿಗೆ ಬೇಕು ಅವರಿಗೆ ಮಾತ್ರ ಕಣ್ಣೀರು ಹಾಕಿ, ಎಲ್ಲರಿಗೂ ಬೇಡ ಎಂದರು. ಕಿಚ್ಚನ ಅಭಿಮಾನಿಗಳಿಗೆ ಈ ಮಾತನ್ನ ಕೇಳಿ ಇನ್ನಷ್ಟು ಹೆಮ್ಮೆ ಆಗುತ್ತಿದೆ.