Sudeep : ನೃತ್ಯಮಾಡಿ ಮೊದಲ ಬಾರಿ ರೀಲ್ ಮಾಡಿದ ಕಿಚ್ಚ! ಕಾರಣ ಈ ವಿಶೇಷ ನಟಿ .

By Infoflick Correspondent

Updated:Saturday, May 28, 2022, 12:34[IST]

Sudeep : ನೃತ್ಯಮಾಡಿ ಮೊದಲ ಬಾರಿ ರೀಲ್ ಮಾಡಿದ ಕಿಚ್ಚ! ಕಾರಣ ಈ ವಿಶೇಷ  ನಟಿ  .

ವಿಕ್ರಾಂತ್ ರೋಣ ಸಿನಿಮಾದ  ರಾ, ರಾ ರಕ್ಕಮ್ಮ ಹಾಡು ಸಿಕ್ಕಾಪಟ್ಟೆ ಫೆಮಸ್ ಆಗಿದ್ದು ಎಲ್ಲೆಲ್ಲು ಈ ಹಾಡಿನದ್ದೇ ಹವಾ. ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್​ನಿಂದ ಹಿಡಿದು ಸೆಲೆಬ್ರಿಟಿವರೆಗೆ ಈ ಹಾಡಿಗೇ ಎಲ್ಲರೂ ಕುಣಿಯುತ್ತಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ 'ಗಡಂಗ್ ರಕ್ಕಮ್ಮ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಡಿನೊಂದಿಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈಗ ಕಿಚ್ಚ ಸುದೀಪ್ ಸಿನಿಮಾದಲ್ಲಿ ಈ ಹಾಡಿಗೆ ನೃತ್ಯಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಈಗ ವಿಶೇಷವಾಗಿ ಈ ಹಾಡಿಗೆ ನೃತ್ಯ ಮಾಡಿದ್ದಾರೆ ಕಾರಣ ಇದೇ!  ಜಾಕ್ವೆಲಿನ್ ಕೋರಿಕೆಯಂತೆ ಸುದೀಪ್ ಮೊತ್ತಮೊದಲ ಬಾರಿಗೆ ರೀಲ್ಸ್ ಮಾಡಿದ್ದಾರೆ. 'ರಾ ರಾ ರಕ್ಕಮ್ಮ' ಹಾಡಿಗೆ ಕಿಚ್ಚ ಹೆಜ್ಜೆಹಾಕಿರುವುದು ಸದ್ಯ ವೈರಲ್ ಆಗಿದೆ.    

ಕಿಚ್ಚ ಮತ್ತು ಜಾಕ್ಲಿನ್ ಹಾಡಿನ ಯಶಸ್ಸಿಗಾಗಿ ಪರಸ್ಪರ ವಿಡಿಯೋ ಕಾಲ್ ಮಾಡಿದ್ದು ಆಗ ಜಾಕ್ಲಿನ್ ಈ ಹಾಡಿಗೆ ರೀಲ್ ಮಾಡಿ ಎಂದು ಕೇಳಿದ್ದಾರೆ. ಆಗ ಕಿಚ್ಚ ನಾನು ಇಲ್ಲಿಯ ಒರೆಗೂ ರೀಲ್ ಮಾಡಿಲ್ಲ ಆದರೆ ನಿಮಗಾಗಿ ಮೊದಲ ರೀಲ್ ಮಾಡುತ್ತೇನೆ ಆದರೆ ಒಂದು ಷರತ್ತು ನೀವು ಕನ್ನಡದ ಜನತೆಗಾಗಿ ನಾನು ಹೇಳಿದ ಸಾಲನ್ನು ಕನ್ನಡದಲ್ಲಿ ಹೇಳಿದರೆ ಮಾತ್ರ ಎಂದಾಗ ಸಂಸತದಿಂದ ಜಾಕ್ಲಿನ್ ಒಪ್ಪಿಕೊಂಡು ಉದ್ದನೆಯ ಸಾಲನ್ನು ಪುನರುಚ್ಛಾರ ಮಾಡುವುದು ತುಸು ಕಷ್ಟ, ಆದರೂ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಜಾಕ್ವೆಲಿನ್. 

ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದೀನಿ' ಎಂದು ಹೇಳುವಂತೆ ಜಾಕ್ವೆಲಿನ್​ಗೆ ತಿಳಿಸಿದ್ದಾರೆ ಸುದೀಪ್.  ಅಚ್ಚರಿಯೆಂದರೆ ನಟಿ ಸಾಲುಗಳನ್ನು ಯಶಸ್ವಿಯಾಗಿ ನುಡಿದಿದ್ದಾರೆ. ಕೊನೆಗೆ ಸುದೀಪ್ ರೀಲ್ಸ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. 

ಕಿಚ್ಚ ಸುದೀಪ್ ಕೂಡ ಈ ಹಾಡಿಗೆ ವಿಶೇಷವಾಗಿ ಕುಣಿದು ರೀಲ್ ಮಾಡಿದ್ದು, ಅದನ್ನು ಜಾಕ್ಲಿನ್​ ​ ಫರ್ನಾಂಡೀಸ್​ ಅವರಿಗೆ ಅರ್ಪಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಾಕಿರುವ ಕಿಚ್ಚ ಸುದೀಪ್, ಹೇ ಜಾಕಿ ಇದು ನಿಮಗಾಗಿ. ನಿಮ್ಮ ಆಸೆಯನ್ನು ಈಡೇರಿಸಿದ್ದೇನೆ. ಇದು ನನ್ನ ಮೊದಲ ರೀಲ್ಸ್ ಎಂದು ಬರೆದುಕೊಂಡಿದ್ದಾರೆ.