Sudeep : ಬಿಗ್ ಬಾಸ್ ಕನ್ನಡ ಒಟಿಟಿ ಹೋಸ್ಟ್ ಮಾಡಲು ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತಾ..?

By Infoflick Correspondent

Updated:Wednesday, August 17, 2022, 19:38[IST]

Sudeep : ಬಿಗ್ ಬಾಸ್ ಕನ್ನಡ ಒಟಿಟಿ ಹೋಸ್ಟ್ ಮಾಡಲು ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತಾ..?

ಬಿಗ್ ಬಾಸ್ ಕನ್ನಡ ಒಟಿಟಿ ಶುರುವಾಗಿ ವಾರ ಕಳೆದಿದೆ. ಕನ್ನಡದ ಬಿಗ್ ಬಾಸ್ ಹೋಸ್ಟ್ ಮಾಡಲು ಕಿಚ್ಚ ಸುದೀಪ್ ಪಡೆದ ಸಂಭಾವನೆ ಬಗ್ಗೆ ಕೇಳಿದರೆ ಶಾಕ್ ಆಗುತ್ತೀರಿ. ಬಿಗ್ ಬಾಸ್ ಅತ್ಯಂತ ಹೆಚ್ಚು ವಿವಾದಗಳಿಗೆ ತುತ್ತಾಗುವ ರಿಯಾಲಿಟಿ ಶೋ. ಬಿಗ್ ಬಾಸ್ ಮನೆ ಇರೋದು ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ. ಇಲ್ಲಿ ಪ್ರತಿಬಾರಿ ಶೋ ಆರಂಭವಾಗುವ ಮುನ್ನ ಸೆಟ್ ಹಾಕಲಾಗುತ್ತೆ. ಇನ್ನು ಯಾವುದಾದರೂ ಟಾಸ್ಕ್ ನೀಡುವ ಮುನ್ನವೂ ಸ್ಫರ್ಧಿಗಳನ್ನು ಬೆಡ್ ರೂಮ್ ಗೆ ಕಳಿಸಿ ಕಪ್ಪು ಸ್ಕ್ರೀನ್ ಎಳೆಯಲಾಗುತ್ತೆ. ಬಳಿಕ ಟಾಸ್ಕ್ ಗೆ ಬೇಕಾಗಿರುವುದನ್ನು ಅರೇಂಜ್ ಮಾಡಿ ಟಾಸ್ಕ್ ನೀಡಲಾಗುತ್ತೆ.

ಇನ್ನು ಕಿಚ್ಚ ಸುದೀಪ್ ಶೋ ನಡೆಸಿಕೊಡುವ ಸ್ಟೇಜ್ ಗೂ ಬಿಗ್ ಬಾಸ್ ಮನೆಗೂ ಬರೋಬ್ಬರಿ ಅರ್ಧ ಕಿಲೋ ಮೀಟರ್ ಅಂತರವಿದೆ. ಪ್ರತಿಯೊಬ್ಬ ಸ್ಫರ್ಧಿಯೂ ಸ್ಟೇಜ್ ನಿಂದ ಸೀದಾ ಮನೆಗೆ ಎಂಟ್ರಿಕೊಟ್ಟ ಹಾಗೆ ಅನಿಸಿದರೂ ಅದು ಸುಳ್ಳು. ಸ್ಟೇಜ್ ನಿಂದ ಹೊರ ಬಂದ ಮೇಲೆ ಫೋಟೋ ಶೂಟ್ ನಡೆಸಲಾಗುತ್ತೆ. ಬಳಿಕ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಎರಡು ಕಿಲೋ ಮೀಟರ್ ಸುತ್ತಾಡಿಸಿ ಬಿಗ್ ಬಾಸ್ ಮನೆ ಬಾಗಿಲಿಗೆ ಕರೆದುಕೊಂಡು ಬಂದು ಬಿಡಲಾಗುತ್ತೆ. 

ಇವೆಲ್ಲದರೊಂದಿಗೆ ಬಿಗ್ ಬಾಸ್ ಶೋ ನ ಪ್ರತಿಯೊಂದು ನಿರ್ಧಾರಗಳನ್ನು ಪರಮೇಶ್ವರ್ ಗುಂಡ್ಕಲ್ ತೆಗೆದುಕೊಳ್ತಾರೆ. ಟಾಸ್ಕ್ ಗಳ  ಸ್ಕ್ರಿಪ್ಟ್ ಅನ್ನು ಅರ್ಧ ದಿನದಲ್ಲಿ ಬರೆದು, ಶೂಟಿಂಗ್ ಮಾಡಿ ಮುಗಿಸಲಾಗುತ್ತೆ. ಇನ್ನು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮವನ್ನು ಶನಿವಾರ ಮಧ್ಯಾಹ್ನದ ೊಳಗೆ ಶೂಟ್ ಮಾಡಿ ರಾತ್ರಿಯೊಳಗೆ ಎಡಿಟ್ ಮಾಡಲಾಗುತ್ತೆ.     

ಇನ್ನು ಕ್ಯಾಮರಾ ಬಗ್ಗೆ ಹೇಳೋದಾದರೆ, ಪ್ರತಿಯೊಂದು ಕ್ಯಾಮರಾಗಳ ಹಿಂದೆಯೂ ಒಬ್ಬೊಬ್ಬ ಕ್ಯಾಮರಾಮೆನ್ ಇರುತ್ತಾರೆ. ಮನೆಯಲ್ಲಿ ನಡೆಯುವ ಚಟುವಟಿಕೆಗಳು ಅಲ್ಲಲ್ಲೆ ಆನ್ ಲೈನ್ ಎಡಿಟಿಂಗ್ ಆಗುತ್ತೆ. ಹೀಗಾಗಿ ಪ್ರತಿ ದಿನದ ಎಪಿಸೋಡ್ ಕೂಡ ಅವತ್ತೇ ಪ್ರಸಾರವಾಗುತ್ತೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ವೀಕ್ಲಿ ಪೇಮೆಂಟ್ ಇರುತ್ತೆ. ಆದರೆ, ಬಿಗ್ ಬಾಸ್ ವಿನ್ನರ್ ಗೆ ಸಂಭಾವನೆ ನೀಡುವುದಿಲ್ಲ ಬದಲಾಗಿ ದೊಡ್ಡ ಮೊತ್ತದ ಮಾತ್ರ ನೀಡಲಾಗುತ್ತೆ. ಇನ್ನು ಬಿಗ್ ಬಾಸ್ ನಲ್ಲಿ ನಿರೂಪಣೆ ಮಾಡುವುದಕ್ಕಾಗಿ ಕಿಚ್ಚ ಸುದೀಪ್ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಒಂದು ಸೀಸನ್ ಗೆ ಬರೋಬ್ಬರಿ 5 ಕೋಟಿ ರೂಪಾಯಿಯನ್ನು ಪಡೆದಿದ್ದಾರಂತೆ. ಹಾಗಂತ ಎಲ್ಲೆಡೆ ಸುದ್ದಿಯಾಗಿದೆ.