Kiccha Sudeep : ಶಿವಣ್ಣ ನಾನು ಮಾತಾಡ್ತಾ ಇರಲಿಲ್ಲವೆಂದ ಕಿಚ್ಚ..! ಕಾರಣ ಹುಡುಕುತ್ತಾ ಹೋದ್ರೆ ಇವತ್ತಿಗೂ ಸಿಕ್ಕಿಲ್ಲ ಎಂದಿದ್ದೇಕೆ

By Infoflick Correspondent

Updated:Monday, June 27, 2022, 21:43[IST]

Kiccha Sudeep :  ಶಿವಣ್ಣ ನಾನು ಮಾತಾಡ್ತಾ ಇರಲಿಲ್ಲವೆಂದ ಕಿಚ್ಚ..! ಕಾರಣ ಹುಡುಕುತ್ತಾ ಹೋದ್ರೆ ಇವತ್ತಿಗೂ ಸಿಕ್ಕಿಲ್ಲ ಎಂದಿದ್ದೇಕೆ

ಅನುಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾಗೂ ಕಿಚ್ಚ ಸುದೀಪ್ ಅವರ ಅಭಿನಯದಲ್ಲಿ ಭರ್ಜರಿ ತೆರೆಗೆ ಬರುತ್ತಿರುವ ಫ್ಯಾನ್ ವರ್ಡ್ ಮೂವಿ ವಿಕ್ರಾಂತ್ ರೋಣ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಈಗಾಗಲೆ ತನ್ನ ಟ್ರೈಲರ್ ಬಿಡುಗಡೆ ಮಾಡಿಕೊಂಡಿದೆ. ಯೂಟ್ಯೂಬ್ನಲ್ಲಿ ದಾಖಲೆಗಳನ್ನು ಉಡೀಸ್ ಸಹ ಮಾಡುತ್ತಿದೆ ಎನ್ನಬಹುದು. ಹೌದು ಕಿಚ್ಚ ಸುದೀಪ್ ಅವರ ವಿಕ್ರಾಂತತ್ ರೋಣ ಸಿನಿಮಾ ಮೇಲೆ ಅಭಿಮಾನಿಗಳ ಹೆಚ್ಚು ನಿರೀಕ್ಷೆಯಿದ್ದು, ಇತ್ತೀಚಿಗಷ್ಟೇ ಅದರ ಟ್ರೈಲರ್ ಲಾಂಚ್ ಇವೆಂಟ್ ನಡೆಯಿತು. ಹಾಗೆ ಸಿನಿಮಾ ಜುಲೈ 28 ಕ್ಕೆ ಭರ್ಜರಿಯಾಗಿ ತೆರೆಗೆ ಬರಲಿದೆ. ಅದು ಫ್ಯಾನ್ ವರ್ಡ್ ಮೂವಿ ಆಗಿಯೇ ಬರುತ್ತಿದೆ. ಕನ್ನಡದ ಮತ್ತೊಂದು ಸಿನಿಮಾ ದೊಡ್ಡದಾಗಿ ಸದ್ದು ಮಾಡಲು ಎಲ್ಲಾ ಸಿದ್ಧತೆ ನಡೆಸಿದ್ದು ಕೆಜಿಎಫ್ ಚಾರ್ಲಿ ನಂತರ ಸುದೀಪ್ ಅವರ ವಿಕ್ರಾಂತ್ ರೋಣ ರಾರಾಜಿಸಲು ರೆಡಿಯಾಗಿದೆ ಎಂದು ಹೇಳಬಹುದು.  

ಹೌದು ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್ ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ಅಕುಲ್ ಬಾಲಾಜಿ ಸೃಜನ್ ಲೋಕೇಶ್ ಹಾಗೂ ದೊಡ್ಡ ದೊಡ್ಡ ಕಲಾವಿದರು ಈ ಟ್ರೈಲರ್ ಇವೆಂಟ್ಗೆ ಬಂದಿದ್ದರು. ಆಗ ಶಿವಣ್ಣ, ರವಿಚಂದ್ರನ್ ಎಲ್ಲರೂ ಕೂಡ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಎಕ್ಕಸಕ್ಕ ಹಾಡಿಗೆ ಹೆಜ್ಜೆ ಹಾಕಿದರು. ಶಿವಣ್ಣ ರವಿಚಂದ್ರನ್ ಸಿನಿಮಾದ ಮೇಲೆ ಹಾಗೂ ನಟನ ಮೇಲೆ ಅವರ ಬಗ್ಗೆ ಹೆಚ್ಚು ತಿಳಿದುಕೊಂಡಾಗ ಈ ರೀತಿ ಪ್ರೀತಿ ನೀಡುತ್ತಾರೆ ಎಂದು ವರದಿಗಾರರು ಪ್ರಶ್ನೆ ಮಾಡಿದ್ದಾರೆ ಸುದೀಪ್ ಅವರಿಗೆ. ಆಗ ಸುದೀಪ್ ಅವರು ಹೇಳುತ್ತಾರೆ ಒಂದು ಸ್ನೇಹ ಆಗಲಿ, ಅಥವಾ ಒಂದು ಬಂಧ ಆಗಲಿ, ಒಬ್ಬ ಮನುಷ್ಯನು ಅರ್ಥಮಾಡಿಕೊಳ್ಳಬೇಕು ಅಂದ್ರೆ ಸಾಕಷ್ಟು ಸಮಯ ಬೇಕಾಗುತ್ತದೆ. ನಾವು ಅವರಿಗೆ ಸಮಯ ಕೊಡಬೇಕು,, ಅವರು ನಮಗೆ ಸಮಯವನ್ನ ಕೊಡುತ್ತಾರೆ.

ಆಗಷ್ಟೇ ಇಬ್ಬರ ನಡುವಿನ ವೈಮನಸ್ಸು, ಅಥವಾ ಅದೇನೋ ತಿಳಿಯದ ಒಂದು ವಿಚಾರ ತಿಳಿಯುತ್ತದೆ. ನಾನೇಕೆ ಇಲ್ಲಿದ್ದೇನೆ ಹಾಗೆ ನಾನು ಅವರನ್ನು ಏಕೆ ಇಷ್ಟಪಡುತ್ತಿದ್ದೇನೆ, ಅಥವಾ ನಾನೇಕೆ ಅವರನ್ನು ದೂಷಣೆ ಮಾಡಬೇಕು ಎಲ್ಲವನ್ನೂ ಕೂಡ ಯೋಚನೆ ಮಾಡುವಂತೆ ಆಗಬೇಕು. ನಾನು ಶಿವಣ್ಣ ಕೂಡ ಅಷ್ಟೇ, ಮೊದಲಿಗೆ ನನ್ನ ಅವರ ನಡುವೆ ಅಷ್ಟಾಗಿ ಮಾತುಗಳಿರಲಿಲ್ಲ. ಅದಕ್ಕೆ ಕಾರಣ ಹುಡುಕಿದರೆ ಇಂದಿಗೂ ಕೂಡ ಉತ್ತರ ಸಿಗುವುದಿಲ್ಲ ಎಂದರು ಸುದೀಪ್. ಅದು ಒಂದೊಂದು ವಿಚಾರಗಳು ಹಾಗಿರುತ್ತವೆ, ಸಮಯಬೇಕು ಪ್ರೀತಿ ನೀಡಲು ಎಂದರು ಸುದೀಪ್. ನಂತರ ರವಿಚಂದ್ರನ್ ಅವರ ಬಗ್ಗೆಯೂ ಕೂಡ ಮಾತನಾಡಿದ್ದು, ರವಿಚಂದ್ರನ್ ಸರ್ ಮತ್ತು ನಾನು ಕೂಡ ಅಷ್ಟಾಗಿ ಆರಂಭದಲ್ಲಿ ಕ್ಲೋಸ್ ಏನು ಇರಲಿಲ್ಲ. ನಾನು ರವಿಚಂದ್ರನ್ ಸರ್ ಒಳಗಿರುವ ಒಬ್ಬ ನಟನನ್ನು ಇಷ್ಟಪಡುತ್ತಿದ್ದೆ. ಆ ಸರ್ ಎನ್ನುವ ಪದದಲ್ಲಿ ನನಗೂ ಫ್ರೀಡಂ ಇದೆ. ಅವರಿಗೂ ಇದೆ.

ರವಿಚಂದ್ರನ್ ಅವರು ಮಾಣಿಕ್ಯ ಆರಂಭ ಆಗುವ ಮುಂಚೆ ಹೆಚ್ಚು ನನ್ನ ಜೊತೆ ಕ್ಲೋಸ್ ಆಗಿದ್ದು, ಅಂದಿನಿಂದ ಹಿಡಿದು ನಾನು ಅವರಿಗೆ ಅನ್ ಕಂಡಿಶನ್ ನಲ್ ಇದ್ದೇನೆ. ಅವರು ಸಹ ಏನೇ ಇದ್ದರೂ ನನಗೆ ಹೀಗೆ ಮಾಡು ಅಂದಲ್ಲಿ, ನಾನು ನನಗಿಷ್ಟ ಇಲ್ಲವೆಂದರೂ ಸಹ ಅವರಿಗಾಗಿ ಮಾಡುತ್ತೇನೆ. ಅದು ಅವರಿಗೂ ಗೊತ್ತು ಎಂಬುದಾಗಿ ರವಿಚಂದ್ರನ್ ಬಗ್ಗೆ ಸುದೀಪ್ ಹೇಳಿದರು. ಹೌದು ಶಿವಣ್ಣ ರವಿಚಂದ್ರನ್ ಅವರ ಜೊತೆಗೆ ಸುದೀಪ್ ಅವರು ಯಾವ ರೀತಿಯ ಅವಿನಾಭಾವ ಸಂಬಂಧ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ ಎಂದು ನಟ ಸುದೀಪ್ ಅವರು ಈ ರೀತಿ ಹೇಳಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ. ಮತ್ತೆ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿ ಧನ್ಯವಾದಗಳು...