Sudeep : ಡಿಕೆಡಿ ವೇದಿಕೆಯಲ್ಲಿ ಅಪ್ಪುರನ್ನ ಸ್ಮರಿಸಿದ ಕಿಚ್ಚ್ ಸುದೀಪ್..! ಪ್ರೀತಿಯಿಂದ ಹೇಳಿದ ಹಾಡು ಇದೆ ನೋಡಿ..!

By Infoflick Correspondent

Updated:Monday, July 4, 2022, 22:06[IST]

Sudeep :  ಡಿಕೆಡಿ ವೇದಿಕೆಯಲ್ಲಿ ಅಪ್ಪುರನ್ನ ಸ್ಮರಿಸಿದ ಕಿಚ್ಚ್ ಸುದೀಪ್..!  ಪ್ರೀತಿಯಿಂದ ಹೇಳಿದ ಹಾಡು ಇದೆ ನೋಡಿ..!

ಕನ್ನಡ ಸಿನಿರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆ ದೈಹಿಕವಾಗಿ ಇಲ್ಲ ವಾಗಿದ್ದಾರೆ. ಹೌದು ಅದು ದೈಹಿಕವಾಗಿ ಮಾತ್ರ ಎನ್ನಬಹುದು. ಆದರೆ ಅಪ್ಪು ಅವರ ನೆನಪು ಬಾರದೆ ಇರುವ ದಿನ ಯಾವುದು ಇಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳ ಮನಸ್ಸಿನಲ್ಲಿ ಇಂದು ಅಜರಾಮರ ಆಗಿ ಉಳಿದಿದ್ದು, ಎಲ್ಲರ ಹೃದಯದಲ್ಲಿ ದೇವರ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಪರಮಾತ್ಮ ಇದೀಗ ಅಭಿಮಾನಿಗಳ ಮತ್ತು ಕನ್ನಡಿಗರ ಪಾಲಿಗೆ ದೇವರಾಗಿದ್ದಾರೆ. ನಟ ಪುನೀತ್ ಅವರ ಆ ನಗು ಮುಖ ಈಗಲೂ ಕಣ್ಣು ಮುಂದೆ ಬರುತ್ತದೆ. ಅಂತಹ ನಿಷ್ಕಲ್ಮಶ ನಗು ಅವರದ್ದು ಆಗಿತ್ತು. ಆ ದೇವರಿಗೆ ಆ ನಿಷ್ಕಲ್ಮಶ ಮನಸ್ಸು, ನಗುವಿನ ಒಡೆಯನ ನೋಡಿ ಹೊಟ್ಟೆ ಕಿಚ್ಚು ಬಂದಿತ್ತೋ ಗೊತ್ತಿಲ್ಲ, ಅವರನ್ನು ಬಹುಬೇಗ ನಮ್ಮಿಂದ ಕಿತ್ತುಕೊಂಡು ಅಭಿಮಾನಿಗಳಿಗೆ ನೋವ ನೀಡಿಬಿಟ್ಟ.    

ಹೌದು ಶಿವಣ್ಣ ಹಾಗೂ ಇಡೀ ಕನ್ನಡ ಚಿತ್ರರಂಗದ ಹೆಚ್ಚು ನಟರು ಅಪ್ಪು ಅವರ ಅಗಲಿಕೆಯ ನೋವಿನಲ್ಲಿದ್ದಾರೆ. ಡಿ ಕೆ ಡಿ ವೇದಿಕೆಯಲ್ಲಿ ಈ ಬಾರಿ ಅಪ್ಪು ಅವರದ್ದೇ ಹೆಸರು ಹೆಚ್ಚು ಓಡಾಡುತ್ತಿದೆ. ಹಾಗೆ ಅವರೇ ಇರುವ ಪ್ರತಿಮೆಯನ್ನು ಈ ಬಾರಿ ಗೆಲ್ಲುವ ಒಂದು ಜೋಡಿಗೆ ನೀಡಲಿದ್ದಾರೆ. ಅಪ್ಪು ಅವರ ಟ್ರೋಫಿ ವಿಜೇತರ ಮನೆ ಸೇರಲಿದ್ದು ಅಪ್ಪು ಅವರು ಆ ಮನೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಹೀಗಿರುವಾಗ ನಟ ಕಿಚ್ಚ ಸುದೀಪ್ ಅವರು ನಿನ್ನೆ ವಾರದ ಎಪಿಸೋಡ್ ನಲ್ಲಿ ಡಿ ಕೆ ಡಿ ವೇದಿಕೆ ಏರಿದ್ದರು. ಅವರ ಸಿನಿಮಾ ಪ್ರಮೋಷನ್ ಮಾಡಲು ಬಂದಿದ್ದು, ಅಲ್ಲಿ ಮಕ್ಕಳ ಡ್ಯಾನ್ಸ್ ನೋಡಿ ಬೆರಗಾದರು. ಹಾಗೇನೇ ಅಪ್ಪು ಅವರ ಫೋಟೋ ಎದುರುಗಡೆ ಬರುತ್ತಿದ್ದಂತೆ, ಅವರ ಮತ್ತು ಅಪ್ಪು ಅವರ ಒಡನಾಟದ ಕೆಲ ವಿಚಾರಗಳನ್ನು ಹಂಚಿಕೊಂಡರು ಕಿಚ್ಚ.

ಅಪ್ಪು ಸಣ್ಣ ವಯಸ್ಸಿನಲ್ಲಿದ್ದಾಗ ಹಾಡಿದ್ದ ಬಾನ ದಾರಿಯಲ್ಲಿ ಎನ್ನುವ ಹಾಡನ್ನು ಸ್ಮರಿಸಿ, ಅದೆಷ್ಟರ ಮಟ್ಟಿಗೆ ಈ ಹಾಡು ಅವರನ್ನು ಅವರಿಸಿತ್ತು ಎಂದು ಹೇಳಿಕೊಂಡರು. ಆ ವೇಳೆ ಅದೆಷ್ಟು ಆವರಿಸಿಕೊಂಡಿತ್ತು ಎಂದು ಮಾತನಾಡಿ, ಅಪ್ಪು ಇಲ್ಲವಾದ ಬಳಿಕ ಈಗ ಎಷ್ಟು ಈ ಹಾಡು ನನ್ನನ್ನು ಕಾಡುತ್ತಿದೆ ಎಂಬುದಾಗಿಯೂ ಸುದೀಪ್ ಅವರು ಪುನೀತ್ ಅವರ ಬಗ್ಗೆ ಮಾತನಾಡಿ ನೆನಪಿಸಿಕೊಂಡರು. ಹೌದು ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಎನ್ನುವ ಹಾಡು ಅಪ್ಪು ಅವರಿಗೆ ಅಚ್ಚುಮೆಚ್ಚು. ಸುದೀಪ್ ಅವರು ಈ ಹಾಡು ಹಾಡಿ ಅವರನ್ನ ಸ್ಮರಿಸಿಕೊಂಡಿದ್ದು ನಿಜಕ್ಕೂ ಮತ್ತೆ ಅಪ್ಪು ಅವರ ನೆನಪು ಮಾಡಿಸಿತು ಎಂದು ಹೇಳಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...