Sudeep : ಪುನೀತ್ ರಾಜ್ ಕುಮಾರ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು..?

By Infoflick Correspondent

Updated:Friday, April 29, 2022, 13:13[IST]

Sudeep : ಪುನೀತ್ ರಾಜ್ ಕುಮಾರ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು..?

ಪುನೀತ್ ರಾಜ್ ಕುಮಾರ್ ಅವರು ಕೊನೆಯುಸಿರೆಳೆದು 6 ತಿಂಗಳಾಗಿದೆ. ಆದರೂ ಅಭಿಮಾನಿಗಳು ಪುನೀತ್ ಅವರ ಸಮಾಧಿ ಬಳಿ ಬಂದು ಆಶೀರ್ವಾದ ಪಡೆಯುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇಡೀ ಕರುನಾಡಿನ ಮನೆ ಮನೆಗಳಲ್ಲಿ ಅಪ್ಪು ಅವರ ಫೋಟೋಗೆ ಪೂಜೆ ಮಾಡಲಾಗುತ್ತಿದೆ. ಅಷ್ಟರಲ್ಲಾಗಲೇ ಅಪ್ಪು ಅವರ ಬಯೋಗ್ರಫಿ ಪುಸ್ತಕ ಬಿಡುಗಡೆಯಾಗಿದೆ. ಇದೀಗ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಜೀವನದ ಕುರಿತಾದ ಸಮಗ್ರ ಪುಸ್ತಕ ಬರೆದಿದ್ದಾರೆ. ಈಗಾಗಲೆ ಈ ಪುಸ್ತಕ ಕರ್ನಾಟಕದ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ. ಇದನ್ನು ಕಿಚ್ ಸುದೀಪ್ ಅವರು ಬಿಡುಗಡೆ ಕೂಡ ಮಾಡಿದ್ದರು.  

ಇನ್ನು ಪುನೀತ್ ರಾಜ್ ಕುಮಾರ್ ಅವರನ್ನು ಕಿಚ್ಚ ಸುದೀಪ್ ಅವರು ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ಇದೀಗ ಮತ್ತೆ ಅಪ್ಪು ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮಗಳಲ್ಲಿ ಮಾತನಾಡಿರುವ ಕಿಚ್ಚ ಸುದೀಪ್ ಅವರು ಪುನೀತ್ ರಾಜ್ ಕುಮಾರ್ ಅವರ ಗುಣಗಳನ್ನು ಹಾಡಿ ಹೊಗಳಿದ್ದಾರೆ. ಯಾರು ಏನೇ ಮಾಡಿದರೂ ಪುನೀತ್ ಅವರ ಹತ್ತಿರವೂ ಬರುವುದಕ್ಕಾಗೊಲ್ಲ. ಅಷ್ಟು ಒಳ್ಳೋಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಬಗ್ಗೆ ಏನು ಹೇಳಿದರೂ ಕಡಿಮೆಯೇ ಎಂದಿದ್ದಾರೆ. 

 

ಅಪ್ಪು ಬಗ್ಗೆ ಮಾತಾಡ್ಬೇಕು ಅಂದ್ರೆ ಅದು ಬಹಳ ಒಳ್ಳೇದೇ ಆಗಿರ್ಬೇಕು. ಅವರ ಬಗ್ಗೆ ನಾವು ಬೇರೇನೇ ಮಾತನಾಡುವುದಕ್ಕೆ ಹೋದರೂ ಅದು ತಪ್ಪಾಗುತ್ತದೆ. ಅವರು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಹಲವರ ಕಷ್ಟಗಳಿಗೆ ಸಹಾಯ ಮಾಡಿದ್ದಾರೆ. ಆವತ್ತು ಅವರು ಅಷ್ಟು ಮಾಡಿದ್ದಕ್ಕೆ ಅನಿಸುತ್ತೆ. ಇವತ್ತು ಅವರನ್ನು ನಿತ್ಯ ನೆನೆದು ಇಷ್ಟೋಂದು ಜನ ಅಭಿಮಾನಿಗಳು ಕಣ್ಣೀರು ಇಡುತ್ತಿರುವುದು. ನಾವು ನಮ್ಮ ತಂದೆ-ತಾಯಿ ಹೇಳಿಕೊಟ್ಟಂತೆ ನಡೆದುಕೊಳ್ಳುತ್ತಿದ್ದೇವೆ. ನಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಸಹಾಯ ಮಾಡುತ್ತೇವೆ ಎಂದು ಹೇಳಿದರು.