ಅಪ್ಪು ತೂಕ ಏನೆಂದು ಎಲ್ಲರಿಗೂ ಗೊತ್ತು, ಅಂಥವರ ಬಗ್ಗೆ ಏನು ಹೇಳೋದು ; ಸುದೀಪ್ ಹೇಳಿದ್ದಿಷ್ಟು

By Infoflick Correspondent

Updated:Saturday, January 15, 2022, 13:35[IST]

ಅಪ್ಪು ತೂಕ ಏನೆಂದು ಎಲ್ಲರಿಗೂ ಗೊತ್ತು, ಅಂಥವರ ಬಗ್ಗೆ ಏನು ಹೇಳೋದು ; ಸುದೀಪ್ ಹೇಳಿದ್ದಿಷ್ಟು

ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಂತಹ ಒಡನಾಟ ಹೊಂದಿದ್ದರು ಎಂಬುದಾಗಿ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಯಾವುದೇ ಸಿನಿಮಾ ಆಗಲಿ, ಒಬ್ಬರಿಗೆ ಒಬ್ಬರು ಸಾತ್ ನೀಡಿಕೊಂಡು ಹಾಗೆ ಅವರ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಾ ಹಾಗೆ ಬೆಂಬಲಿಸುತ್ತ ಎಲ್ಲಾ ವಿಷಯಗಳಲ್ಲಿ ಮುಂದಿರುತ್ತಿದ್ದರು. ಹೌದು ಈ ಬಗ್ಗೆ ಪುನೀತ್ ಅವರು ಬದುಕಿದ್ದಾಗ ಕಿಚ್ಚ ಸುದೀಪ್ ಅವರು ಒಂದು ಸಂದರ್ಶನದಲ್ಲಿ ಕೆಲ ಮಾಹಿತಿ ಬಿಚ್ಚಿಟ್ಟಿದ್ದರು. ಪತ್ರಕರ್ತರು ಸುದೀಪ್ ಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಮಾಡಲು ಮುಂದಾಗಿದ್ದು, ನಿಮ್ಮ ಫ್ಯಾನ್ಸ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಿತ್ತಾಟ ನಡೆಸುತ್ತಾರೆ.

ಕೆಲವೊಂದಿಷ್ಟು ಟ್ರೋಲ್ಗಳು ಕೂಡ ನಡೆಯುತ್ತವೆ. ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಕೇಳಿದ್ದರು. ಆಗ ಕಿಚ್ಚ ಸುದೀಪ್ ನಾವಾಗಲಿ ಅಥವಾ ನೀವು ಮೀಡಿಯಾದವರು ಆಗಲಿ ಎಲ್ಲರೂ ಒಂದನ್ನು ಅರ್ಥಮಾಡಿಕೊಳ್ಳಬೇಕು. ಅಪ್ಪು ತೂಕ ಏನು, ಹಾಗೆ ನಾವೇನು, ಸಿನಿಮಾರಂಗದಲ್ಲಿ ಇರುವ ಕೆಲ ಕಲಾವಿದರು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲೋ ಕುಳಿತುಕೊಂಡು ಮಾತನಾಡುವ ಜನರ ಬಗ್ಗೆ, ಹಾಗೆ ಅವರ ಹಾಕುವ ಪೋಸ್ಟ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅದಕ್ಕೆ ರಿಯಾಕ್ಟ್ ಮಾಡಿದರೆ ನೀವು ಬೆಂಕಿಗೆ ತುಪ್ಪವನ್ನ ಸುರಿದಂತೆ ಆಗುತ್ತದೆ. ಬಹಿರಂಗವಾಗಿ ಇದನ್ನು ನಾನೇ ಮಾಡಿದ್ದೇನೆ ಎಂದು ಯಾರಾದ್ರು ಮುಂದೆ ಬಂದರೆ, ಆಗ ಮಾತನಾಡಿದರೆ ಅದಕ್ಕೆ ಒಂದು ಅರ್ಥ ಇರುತ್ತದೆ.  

ಯಾವುದೋ ಹೆಸರಿನಲ್ಲಿ, ಯಾರ ಬಗ್ಗೆಯೋ, ಅದೇಲ್ಲೋ ಕುಳಿತುಕೊಂಡು ಮಾತನಾಡುತ್ತಾ ಇರುವವರಿಗೆ ನಾವು ಏನು ಹೇಳಲು ಆಗುವುದಿಲ್ಲ. ಸಪೋಸ್ ನೀವು ಯಾವುದಾದರೂ ಒಂದು ಹೆಸರಿನ ಟ್ರೋಲ್ ನ್ನು ಮಾಡುತ್ತಿರಬಹುದು. ಅದು ನನಗೂ ಗೊತ್ತಿಲ್ಲ, ಹಾಗಾಗಿ ನಾವು ತಲೆಕೆಡಿಸಿಕೊಳ್ಳಬಾರದು ಎಂದು ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ಅಂದು ಪುನೀತ್ ಬಗ್ಗೆ ಮಾತನಾಡಿದ್ದರು. ಜೊತೆಗೆ ನನ್ನ ಸಿನಿಮಾ ಪೈಲ್ವಾನ್ ಗೆ ಅವರು ಬಂದು ಬೆಂಬಲ ನೀಡಿದ್ದಾರೆ. ನಾನು ಕೂಡ ಅವರ ಸಿನಿಮಾಗೆ ಹೋಗಿ ಹಾರೈಸಿ ಬಂದಿದ್ದೆನೆ. ನಾವು ಚೆನ್ನಾಗಿ ಒಬ್ಬರಿಗೊಬ್ಬರು ಇದ್ದೇವೆ, ಚೆನ್ನಾಗಿ ಮಾತನಾಡುತ್ತಿದ್ದೇವೆ ಅಂತಹವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂಬುದಾಗಿ ಸುದೀಪ್ ಅಂದು ಪುನೀತ್ ಅವರ ಬಗ್ಗೆ ಮಾತನಾಡಿದ್ದರು...(video credit : cini buzz)