ಸುದೀಪ್ ಈ ವ್ಯಕ್ತಿನ ಅವರ ಜೀವ ಇರುವವರೆಗೂ ಮರೆಯೋದಿಲ್ಲವಂತೆ..! ಯಾರ್ ಗೊತ್ತಾ ಆ ವ್ಯಕ್ತಿ..?

Updated: Sunday, May 2, 2021, 07:47 [IST]

ಮೊನ್ನೆಯಷ್ಟೇ ನಟ ಕಿಚ್ಚ ಸುದೀಪ್ ಅವರಿಗೆ ಬೆಳ್ಳಿ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆ ವೇಳೆ  ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಒಬ್ಬ ವ್ಯಕ್ತಿಯನ್ನು  ನೆನೆದು ಹೆಚ್ಚು ಭಾವುಕರಾಗಿ ಅವರ ಬಗ್ಗೆ ಸುದೀಪ್ ಅವರು ಮಾತನಾಡಿದರು. ಮತ್ತು ಈ ವ್ಯಕ್ತಿನ ಅವರ ಜೀವ ಇರುವ ವರೆಗೂ ಮರೆಯೋದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ ಅಷ್ಟಕ್ಕೂ ಸುದೀಪ್ ಅವರು ಹೇಳಿದ್ದೇನು ಗೊತ್ತಾ..?    

ಹೌದು 'ಸಿನಿಮಾಗೆ ಬರುವ ಮುನ್ನ ನಾನು ಸಾಕಷ್ಟು ಬಾಧೆಗಳು ನೋವುಗಳು ಕಷ್ಟಗಳನ್ನು ನೋಡಿದೆ. ಆದರೆ ನನಗೆ ಸಹಾಯ ಮಾಡಿದ್ದು ಮತ್ತು ಬೆನ್ನೆಲುಬಾಗಿ ನಿಂತಿದ್ದು ಒಬ್ಬ ವ್ಯಕ್ತಿ ಮಾತ್ರ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ರಾಕ್ ಲೈನ್ ವೆಂಕಟೇಶ್ ಅವರು. ಹುಚ್ಚ ಸಿನಿಮಾ ಆದಮೇಲೆ ಅವರ ಬಳಿ ನಾನು ಹಣದ ಸಹಾಯವನ್ನು ಕೇಳಿದೆ. ಮಧ್ಯರಾತ್ರಿಯಲ್ಲಿ ನಾನು ರಾಕ್ ಲೈನ್ ವೆಂಕಟೇಶ್ ಅವರಿಗೆ ಕರೆ ಮಾಡಿ ಸ್ವಲ್ಪ ಮಾತಾಡಬೇಕು ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದೆನು. ಆಗ ಅವರೇ ಇಲ್ಲ ನಾನೇ ಬರುತ್ತೇನೆ ಎಂದು ಹೇಳಿದಾಗ,

ಇಲ್ಲ ಇಲ್ಲ ನಾನೇ ಬರುತ್ತೇನೆ ಎಂದು ಅವರ ಮನೆಗೆ ಹೋಗಿ ನನ್ನನ್ನು ತಲೆತಗ್ಗಿಸದೆ ಹಣದ ಸಹಾಯವನ್ನು ಮಾಡಿದರು. ನಮ್ಮ ಮಧ್ಯೆ ಯಾವುದೇ ಜಗಳ ಮನಸ್ತಾಪ ಏನೇ ಆಗಲಿ, ನನಗೆ ಅವರು ದೊಡ್ಡ ಸಹೋದರರು ಇದ್ದ ಹಾಗೆ. ಅವರನ್ನು ನಾನು ನನ್ನ ಕೊನೆ ಉಸಿರು ಇರುವವರೆಗೂ ಮರೆಯುವುದಿಲ್ಲ' ಎಂದು ನಟ ಕಿಚ್ಚ ಸುದೀಪ್ ಅವರು ಮಾತನಾಡಿದರು. ಹೌದು ಅಂದು ಕೋಟಿಗೊಬ್ಬ 3 ಚಿತ್ರ ತಂಡದವರು ಈ ಬೆಳ್ಳಿ ಸಂಭ್ರಮದ ವೇದಿಕೆಯನ್ನ ಆಯೋಜಿಸಿದ್ದರು. ಆ ವೇಳೆ ಈ ಕಾರ್ಯಕ್ರಮ ಮೂಲಕ ಸುದೀಪ್ ತಮ್ಮ ಅನಿಸಿಕೆ ತಿಳಿಸಿದ್ದರು...