ಅವರನ್ನ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ಯಾರಿಗೆ..?

By Infoflick Correspondent

Updated:Thursday, March 17, 2022, 12:08[IST]

ಅವರನ್ನ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ಯಾರಿಗೆ..?

ಪುನೀತ್ ರಾಜ್ ಕುಮಾರ್ ಅವರು ಕೊನೆಯುಸಿರೆಳೆದು ನಾಲ್ಕು ತಿಂಗಳಾಗಿದೆ. ಆದರೂ ಅಭಿಮಾನಿಗಳು ಪುನೀತ್ ಅವರ ಸಮಾಧಿ ಬಳಿ ಬಂದು ಆಶೀರ್ವಾದ ಪಡೆಯುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇಡೀ ಕರುನಾಡಿನ ಮನೆ ಮನೆಗಳಲ್ಲಿ ಅಪ್ಪು ಅವರ ಫೋಟೋಗೆ ಪೂಜೆ ಮಾಡಲಾಗುತ್ತಿದೆ. ಅಷ್ಟರಲ್ಲಾಗಲೇ ಅಪ್ಪು ಅವರ ಬಯೋಗ್ರಫಿ ಪುಸ್ತಕ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಕಿಚ್ಚ ಸುದೀಪ್ ಅವರು ಅಪ್ಪು ಅವರ ಬಯೋಗ್ರಫಿ ಪುಸ್ತಕ ನೀನೇ ರಾಜಕುಮಾರ ಬಿಡುಗಡೆ ಮಾಡಿ ಮಾತನಾಡಿದರು..

ಈಗಾಗಲೇ ಡಾ. ವಿಷ್ಣುವರ್ಧನ್, ಡಾ.ಅಂಬರೀಶ್, ಕಿಚ್ಚ ಸುದೀಪ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಬಯೋಗ್ರಫಿಯನ್ನು ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದಿದ್ದರು. ಇದೀಗ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಜೀವನದ ಕುರಿತಾದ ಸಮಗ್ರ ಪುಸ್ತಕ ಬರೆದಿದ್ದಾರೆ. ಈಗಾಗಲೆ ಈ ಪುಸ್ತಕ ಕರ್ನಾಟಕದ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ. ಅಲ್ಲದೇ ಆನ್ ಲೈನ್ ನಲ್ಲೂ ಖರೀದಿಸಬಹುದಾಗಿದೆ. ಅಮೇಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹಲವು ಆನ್ ಲೈನ್ ಸ್ಟೋರ್ ಗಳಲ್ಲಿ ಪುಸ್ತಕ ಲಭ್ಯವಿದೆ. .

ಇದರಲ್ಲಿ ಕೇವಲ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಇಲ್ಲ. ಬದಲಿಗೆ ಕನ್ನಡ ಸಿನಿಮಾ ರಂಗದ ಬೆಳವಣಿಗೆ ಬಗ್ಗೆಯೂ ಹಂತ ಹಂತವಾಗಿ ಹೇಳಲಾಗಿದೆ. ಈ ಪುಸ್ತಕದಲ್ಲಿ ಒಟ್ಟು 264 ಪುಟಗಳಿದ್ದು, ಒಟ್ಟು 34 ಅಧ್ಯಾಯಗಳಿವೆ. ಇನ್ನು ಪುಸ್ತಕದಲ್ಲಿ ಅಪ್ಪು ಅವರ ಬಾಲ್ಯ ಸೇರಿದಂತೆ ಅಪರೂಪದ ಫೋಟೋಗಳನ್ನು ಕೂಡ ಮುದ್ರಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ಬಗೆಗಿನ ಹಲವು ವಿಚಾರಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ ಎಂದು ಶರಣು ಹುಲ್ಲೂರು ಅವರು ಹೇಳಿದ್ದಾರೆ ಇನ್ನು ಪುನೀತ್ ರಾಜ್ ಕುಮಾರ್ ಅವರ ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ ಅವರು ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ  

. ಪುನೀತ್ ರಾಜ್ ಕುಮಾರ್ ಅವರದ್ದು ಪುಸ್ತಕ ಬರೆಯುವಂತಹ ಹಾಗೂ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ವ್ಯಕ್ತಿತ್ವ. ಈ ಕೃತಿ ಅಪ್ಪು ಅವರ ಜೀವನವನ್ನು ತುಂಬಾ ಸೊಗಸಾಗಿ ಹಿಡಿದಿಟ್ಟಿದೆ ಎಂದು ಸುದೀಪ್ ಹೇಳಿದರು. ಬಾದ್ಶಾ ಜೀವನದ ಬಯೋಗ್ರಫಿಯನ್ನು ಅಪ್ಪು ಬಿಡುಗಡೆ ಮಾಡಿದ್ದರು. ಈಗ ಅಪ್ಪು ಅವರ ಬಯೋಗ್ರಫಿ ಪುಸ್ತಕವನ್ನು ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ. (Video credit ; right news )