ಅಪ್ಪು ಬದಲು ಕನ್ನಡದ ಕೋಟ್ಯಾಧಿಪತಿ ಸೀಸನ್ 5 ನಡೆಸಿಕೊಡಲಿದ್ದಾರೆ ಈ ನಟ..

By Infoflick Correspondent

Updated:Tuesday, April 19, 2022, 11:39[IST]

ಅಪ್ಪು ಬದಲು ಕನ್ನಡದ ಕೋಟ್ಯಾಧಿಪತಿ ಸೀಸನ್ 5 ನಡೆಸಿಕೊಡಲಿದ್ದಾರೆ ಈ ನಟ..

ದಿ. ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಕಂಟೆಸ್ಟೆಂಟ್ ಗಳು ಭಾಗವಹಿಸಿ ಪುನೀತ್ ರಾಜ್ ಕುಮಾರ್ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಕನ್ನಡದ ಕೋಟ್ಯಾಧಿಪತಿಯಲ್ಲಿ ಗೆದ್ದವರಿಗೆ ಹಣದ ಚೆಕ್ ನೀಡಿ ಅಭಿನಂದಿಸುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೋಡ್ಯಾಧಿಪತಿ ರಿಯಾಲಿಟಿ ಶೋ ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದರು. 

ಸ್ಟಾರ್ ಸುವರ್ಣದಲ್ಲಿ ಆರಂಭವಾದ ಕನ್ನಡದ ಕೋಟ್ಯಾಧಿಪತಿ ಶೋ ಅನ್ನು ಮೊದಲಿನಿಂದಲೂ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಡುತ್ತಿದ್ದರು. ಮೊದಲು ಮೂರು ಶೋಗಳು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿತ್ತು. ಇನ್ನು ನಾಲ್ಕನೇ ಸೀಸನ್ ಮಾತ್ರ ಕಲರ್ಸ್ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಪ್ರಸಾರವಾಗಿತ್ತು. ಸದ್ಯಕ್ಕೆ ಇದೇ ಕೊನೆಯ ಸೀಸನ್ ಆಗಿದ್ದು, ಇದೀಗ ಸೀಸನ್ 5 ಅನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಆದರೆ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಅನ್ನು ಯಾರು ನಡೆಸಿಕೊಡುತ್ತಾರೆ ಎಂಬ ಪ್ರಶ್ನೆ ಎದ್ದಿದೆ.  

ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದ ಮೇಲೆ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ನಡೆಸಲು ಮತ್ತೊಬ್ಬ ನಟರಿದ್ದಾರೆ ಎನ್ನಲಾಗಿದೆ. ಅದು ಯಾರು ಅಂತ ಯೋಚಿಸ್ತಿದ್ದೀರಾ..? ಗೆಸ್ ಮಾಡಿ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರಬಹುದಾ..? ಇಲ್ಲ ರಾಕಿಂಗ್ ಸ್ಟಾರ್ ಯಶ್ ನಡೆಸಿಕೊಡಬಹುದಾ.? ಬಹುಷಃ ಕನ್ನಡದ ಕೋಟ್ಯಾಧಿಪತಿಯನ್ನು ಎವರ್ ಗ್ರೀನ್ ಹೀರೋ ರಮೇಶ್ ನಡೆಸಿಕೊಡಬಹುದು ಎಂದು ನೀವೆಲ್ಲಾ ಗೆಸ್ ಮಾಡಿರುತ್ತೀರಾ ಅಲ್ವಾ.. ನೋ ಚಾನ್ಸ್ ಈ ಬಾರಿಯ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಅನ್ನು ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತವಾಗಿಲ್ಲ.