Big Boss OTT : ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್

By Infoflick Correspondent

Updated:Tuesday, September 6, 2022, 09:33[IST]

Big Boss OTT : ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ಎಲ್ಲರದ್ದೂ ಒಂದು ರೀತಿ ನೀತಿಯಾದರೆ ಸೋನು ಗೌಡ ರದ್ದೇ ಒಂದು ರೀತಿ. ಅವರಿಗೆ ಯಾರೂ ಏನೂ ಹೇಳಬಾರದು. ಸೋನು ಗೌಡ ಅವರು ಬಿಟ್ಟರೆ ಮನೆಯಲ್ಲಿ ಮತ್ಯಾರು ಕರೆಕ್ಟ್ ಅಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಬಿಗ್ ಬಾಸ್ ಗೂ ಕೂಢ ಟಾಂಟ್ ಮಾಡುವಂತೆ ಮಾತನಾಡುತ್ತಿರುತ್ತಾರೆ. ಯಾವ ರೂಲ್ಸ್ ಅನ್ನೂ ಸರಿಯಾಗಿ ಫಾಲೋ ಮಾಡುವುದೇ ಇಲ್ಲ. ಅಲ್ಲದೇ ಬಿಗ್ ಬಾಸ್ ತಮಗೆ ಈ ರೂಲ್ಸ್ ಹೇಳಿಲ್ಲ. ಆ ಕೆಲವನ್ನು ಮಾಡಲು ಸೂಚಿಸಿಲ್ಲ ಎಂದೆಲ್ಲಾ ಹೇಳುತ್ತಲೇ ಇರುತ್ತಾರೆ. 

ಇನ್ನು ಸೋನು ಗೌಡ ಮಾತನಾಡುವ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ವಟ ವಟ ಎಂದು ಮಾತನಾಡುತ್ತಲೇ ಇರುತ್ತಾಳೆ. ಸ್ವಲ್ಪ ಕಡಿಮೆ ಮಾತನಾಡು ಎಂದರೂ ಕೂಡ ಸುಮ್ಮನಾಗದ ಸೋನು, ಇನ್ನೂ ಹೆಚ್ಚು ಮಾತನಾಡುತ್ತಾಳೆ. ಅವಳ ಧ್ವನಿ ಹಾಗೂ ಮಾತುಗಳನ್ನು ಕೇಳಲಾಗದೇ, ಎಲ್ಲರೂ ಸೂನುಳಿಂದ ದೂರ ಇರಲು ಬಯಸುತ್ತಾರೆ. ಆಕೆಯನ್ನು ತಿದ್ದಲು ರಾಕೇಶ್ ಪ್ರಯ್ತನಪಟ್ಟರೂ ಅದು ವಿಫಲವಾಗುತ್ತಲೇ ಇದೆ. ಸೋನುಳಿಂದ ಈಗ ಮನೆಯವರೆಲ್ಲರೂ ಬೇಸರಗೊಂಡಿದ್ದಾರೆ. 

ಹೀಗಾಗಿ ಈಗ ಸೋನು ಗೌಡರನ್ನು ನಟ ಕಿಚ್ಚ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ನನಗೆ ಇದು ಹೇಳಿಲ್ಲ, ಅದು ಹೇಳಿಲ್ಲ ಎನ್ನುತ್ತೀರಾ. ಅಲ್ಲದೇ ನಿದ್ದೆಯಾಗಿಲ್ಲ ಎಂದೆಲ್ಲಾ ಬಿಗ್ ಬಾಸ್ ಬಳಿ ಹಾಗೆಲ್ಲಾ ಮಾತನಾಡುತ್ತೀರಲ್ಲ ಎಷ್ಟು ಸರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಇನ್ಮುಂದೆ ನಿಮಗೆ ಯಾರೂ ಏನೂ ಹೇಳುವುದಿಲ್ಲ. ನಿಮಗೆ ಯಾವ ಟಾಸ್ಕ್ ಕೂಡ ಇರುವುದಿಲ್ಲ. ಯಾವ ಆಟವನ್ನೂ ಆಡುವಷ್ಟಿಲ್ಲ. ಅದೆಷ್ಟು ದಿನ ನೀವು ನಿಮ್ಮ ತಪ್ಪನ್ನು ತಿಳಿದುಕೊಳ್ಳದ ಹಾಗೆ ಇರುತ್ತೀರಾ ಎಂದು ನೋಡೋಣ ಅಂತ ಹೇಳಿದ್ದಾರೆ. ಇದರಿಂದ ಸೋನು ಗೌಡ ಈಗ ಏಕಾಂಗಿ ಆಗಿದ್ದಾರೆ.