Sudeep : ಹಿಂದಿ ಪತ್ರಕರ್ತರು ಅಂದು ಅವಮಾನಸುತ್ತಿದ್ದರೂ ಕಿಚ್ಚ ಸುದೀಪ್ ಸುಮ್ಮನಿರಲು ಕಾರಣವೇನು ಗೊತ್ತಾ..?

By Infoflick Correspondent

Updated:Saturday, April 30, 2022, 15:30[IST]

Sudeep : ಹಿಂದಿ ಪತ್ರಕರ್ತರು ಅಂದು ಅವಮಾನಸುತ್ತಿದ್ದರೂ ಕಿಚ್ಚ ಸುದೀಪ್ ಸುಮ್ಮನಿರಲು ಕಾರಣವೇನು ಗೊತ್ತಾ..?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕರ್ನಾಟಕ ಮಾತ್ರವಲ್ಲದೇ, ಬಾಲಿವುಡ್ ನಲ್ಲೂ ಫೇಮಸ್ ನಟ. ತಮ್ಮ ನಟನೆ ಹಾಗೂ ಧ್ವನಿಯಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಕಿಚ್ಚ ಸುದೀಪ್ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಾಗ ಅವರ ಸಿನಿ ಪಯಣ ಅಷ್ಟೇನು ಸುಲಭವಾಗಿರಲಿಲ್ಲ. ಯಾಕೆಂದರೆ, ಯಾರೇ ಹೊಸ ಪ್ರತಿಭೆಗಳು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಎಂದರೂ ಅವರಿಗೆ ಕೂತು ಮಣೆ ಹಾಕುವವರು ಇರಲು ಸಾಧ್ಯವಿಲ್ಲ. ಸ್ವಂತ ಶ್ರಮದಿಂದ ಮೇಲೆ ಬಂದವರೇ ಪ್ರತಿಯೊಬ್ಬರೂ. 

ಕಿಚ್ಚ ಸುದೀಪ್ ಅವರು ಕೂಡ ಕಷ್ಟ ಪಟ್ಟು, ಸಿನಿಮಾ ರಂಗದಲ್ಲಿ ಇಂದು ಈ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಂದೂ ಫೂಂಕ್ ಚಿತ್ರದಲ್ಲಿ ಸುದೀಪ್ ಇರಲಿದ್ದಾರೆ ಎಂದು ಘೊಷಿಸಿದಾಗ ಬಾಲಿವುಡ್ ನಟರು ಆಡಿಕೊಂಡಿದ್ದರು. 6 ಅಡಿ ಉದ್ದದ, ಕಡ್ಡಿಯಂತಿರುವವನೂ ಒಬ್ಬ ಹೀರೋನಂತೆ. ಹೋಗಿ ಹೋಗಿ ಅವನನ್ನು ಫೂಂಕ್ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾ ತೋಪೇ. ನಮ್ಮ ಮುಂಬೈ ಬೀದಿ ಬೀದಿಗಳಲ್ಲಿ ಅವನಂತವರು ಸಿಗುತ್ತಾರೆ. ಗ್ಯಾರೇಜ್ ಗಳಲ್ಲಿ ಪಂಕ್ಚರ್ ಹಾಕುವವನಂತೆ ಇದ್ದಾನೆ. ಅವನನ್ನು ಫೂಂಕ್ ಚಿತ್ರಕ್ಕೆ ಹೀರೋ ಮಾಡಿದ್ದಾರೆ ಎಂದು ಆಡಿಕೊಂಡಿದ್ದರು   

ಇದನ್ನೇ ನೇರವಾಗಿ ಹಿಂದ ಪತ್ರಕರ್ತರು ಬರೆದಿದ್ದರು. ಈ ಚಿತ್ರದ ಬಳಿಕ ಮತ್ತೆ ರಣ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆಗೂ ಕಿಚ್ಚ ಸುದೀಪ್ ಅವರು ನಟಿಸಿದ್ದರು. ಆಗಲೂ ಸುದೀಪ್ ಅವರನ್ನು ಹೀಗೆ ಅವಮಾನಿಸಲಾಗಿತ್ತು. ಆದರೆ ಸುದೀಪ್ ಅವರ ಕಂಠಕ್ಕೆ ಹಾಗೂ ಅಭಿನಯವನ್ನು ಸ್ವತಃ ಅಮಿತಾಬ್ ಬಚ್ಚನ್ ಅವರೇ ಮೆಚ್ಚಿಕೊಂಡಿದ್ದರು.  ನಂತರ ರಕ್ತಚರಿತ್ರ ಚಿತ್ರದಲ್ಲೂ ಇತರೆ ಬಾಲಿವುಡ್ ನಟರ ಜೊತೆಗೆ ಸುದೀಪ್ ಅವರು ನಟಿಸಿದ್ದರು. ಆಗಲೂ ಅವಮಾನಿಸಲಾಗಿತ್ತು. ಇಷ್ಟೆಲ್ಲಾ ಅವಮಾನವಾಗಿದ್ದರೂ ಸುದೀಪರ್ ಅವರು ಒಂದೂ ಮಾತನಾಡದೇ ಸುಮ್ಮನಿದ್ದರು. ಅವರ ತಾಳ್ಮೆಯ ಅವರ ಬದುಕಿನಲ್ಲಿ ಈ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ. ಇದೀಗ ಅಜಯ್ ದೇವಗನ್ ಅವರು ಭಾಷೆಯ ವಿಚಾರವಾಗಿ ಸುದೀಪ್ ಅವರನ್ನು ಗುರಿ ಮಾಡಿದ್ದರು. ಆದರೆ ಎಲ್ಲರೂ ಸುದೀಪ್ ಪರ ನಿಂತಿದ್ದು ಹೆಮ್ಮೆಯ ವಿಚಾರವೇ ಸರಿ.