Sudha Rani : ಮಗಳ ಸಂತೋಷವೇ ನನ್ನ ಸಂತೋಷ ಎನ್ನುವ ಸುಧಾರಾಣಿ ಮಗಳ ಜೊತೆ ಡ್ಯಾನ್ಸ್..! ವಿಡಿಯೋ ವೈರಲ್
Updated:Tuesday, June 14, 2022, 10:00[IST]

ಕನ್ನಡ ಚಿತ್ರರಂಗದ ಚಂದನದಗೊಂಬೆ ನಟಿ ಸುಧಾರಾಣಿ ಅವರು ಕನ್ನಡ ದಿಗ್ಗಜ ನಟರ ಜೊತೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. 90ರ ದಶಕದಲ್ಲಿ ನಟಿ ಸುಧಾರಾಣಿ ಅವರ ಚಿತ್ರಗಳು ಎಲ್ಲವೂ ಬೊಂಬಾಟ್ ಹಿಟ್ ಎಂದು ಹೇಳಬಹುದು. ನಟಿ ಸುಧಾರಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಹೆಚ್ಚು ಸಕ್ರಿಯ ಆಗಿದ್ದು ಮಗಳ ಜೊತೆ ಇದೀಗ ಮಾಡಿರುವ ಒಂದು ನೃತ್ಯ ಬಾರಿ ವೈರಲ್ ಆಗುತ್ತಿದೆಯಂತೆ. ಕೆಲದಿನಗಳ ಹಿಂದೆ ಲೀಲಾವತಿಯವರ ಮನೆಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಶೃತಿ, ಮಾಳವಿಕಾ, ಅವರೊಟ್ಟಿಗೆ ನಟಿ ಸುಧಾರಣಿ ಅವರು ಕಾಣಿಸಿಕೊಂಡಿದ್ದರು ಅವರ ಮನೆಯಲ್ಲಿ ಊಟ ಸೇವಿಸಿ, ನಟಿ ಲೀಲಾವತಿ ಅಮ್ಮನ ಆರೋಗ್ಯ ವಿಚಾರಿಸಿ ಬಂದಿದ್ದರು. ಸುಧಾರಾಣಿ ಅವರು ಬಹಳ ದಿನಗಳ ಬಳಿಕ ಕಾಣಿಸಿಕೊಂಡಿದ್ದ ಆ ವಿಡಿಯೋ ಸಹ ಹೆಚ್ಚು ವೈರಲ್ ಆಗಿತ್ತು ಎನ್ನಬಹುದು.
ಹೌದು ನಟ ಶಿವರಾಜಕುಮಾರ್ ಅವರ ಜೊತೆ ತೆರೆಯ ಹಂಚಿಕೊಂಡಿರುವ ನಟಿ ಸುಧಾರಾಣಿ ಅವರು ನಟ ರವಿಚಂದ್ರನ್ ಅವರ ಜೊತೆಯೂ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಹೆಚ್ಚಾಗಿ ಸುಧಾರಾಣಿ ಅವರ ಕುಟುಂಬದ ಬಗ್ಗೆ ಯಾವ ಮಾಹಿತಿಯೂ ಬಂದಿಲ್ಲ. ಬದಲಿಗೆ ಈಗ ಅವರ ಮಗಳ ಜೊತೆ ಕಾಣಿಸಿದ್ದಾರೆ. ಹೌದು ಆಗಾಗ ಮಗಳ ಜೊತೆ ಕಾರ್ಯಕ್ರಮದ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುಧಾರಾಣಿಯವರು ತುಂಬಾ ಜಾಲಿಯಾಗಿ ಸಂತೋಷದಲ್ಲಿದ್ದಾರೆ. ಮಗಳೊಂದಿಗೆ ಕಾಣಿಸಿಕೊಳ್ಳುವ ಸುಧಾರಾಣಿ ಅವರು ಈಗ ಮಾಡಿರುವ ನೃತ್ಯದ ಪರಿ ಹೇಗಿದೆ ಗೊತ್ತಾ..? ನೆಟ್ಟಿಗರು ಕೂಡ ಡ್ಯಾನ್ಸ್ ಗೆ ಫಿದಾ ಆಗಿದ್ದು, ಅಭಿಮಾನಿಗಳು ಕೂಡ ಸಕ್ಕತ್ ಆಗಿ ಡ್ಯಾನ್ಸ್ ಮಾಡುತ್ತೀರಾ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ.
ಹಾಗೆ ಇವರು ಮಗಳು ಸಹ ಯಾವುದರಲ್ಲೂ ಕಡಿಮೆ ಇಲ್ಲ ಎನ್ನಬಹುದು. ಮಗಕು ಯಾವ ರೀತಿಯ ಡಾನ್ಸ್ ಗಳನ್ನು ಕಲಿತಿದ್ದಾರೆ ಗೊತ್ತಾ.? ಇಲ್ಲಿದೆ ನೋಡಿ ಆ ಅಸಲಿ ವಿಡಿಯೋ. ವಿಡಿಯೋ ಪೂರ್ತಿ ನೋಡಿದ ಬಳಿಕ ಇಷ್ಟವಾದಲ್ಲಿ ಶೇರ್ ಮಾಡಿ, ಮತ್ತು ಈ ಡಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ಕಮೆಂಟ್ ಮಾಡಿ ಧನ್ಯವಾದಗಳು... ( video credit : chandana vana )