Vishnuvardhan : ವಿಷ್ಣು ಪ್ರೀತಿಸಿದ ಹುಡುಗಿಗೆ ನಾನು ರೋಸ್ ಕೊಟ್ಟಿದ್ದೆ ಎಂದ ಸುಂದರ್ ರಾಜ್..! ನಂತರ ಆಗಿದ್ದೆ ಬೇರೆಯಂತೆ

By Infoflick Correspondent

Updated:Saturday, June 11, 2022, 16:14[IST]

Vishnuvardhan :  ವಿಷ್ಣು ಪ್ರೀತಿಸಿದ ಹುಡುಗಿಗೆ ನಾನು ರೋಸ್ ಕೊಟ್ಟಿದ್ದೆ ಎಂದ ಸುಂದರ್ ರಾಜ್..! ನಂತರ ಆಗಿದ್ದೆ ಬೇರೆಯಂತೆ

ಕನ್ನಡ ಚಿತ್ರರಂಗದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ. ವಿಷ್ಣು ದಾದಾ ಅವರ ಅಭಿಮಾನಿ ಬಳಗ ಅದೆಷ್ಟರ ಮಟ್ಟಿಗೆ ಬಲಿಷ್ಠ ಆಗಿದೆ ಎಂದರೆ ಇಂದಿಗೂ ಕೂಡ ಒಬ್ಬೆ ಒಬ್ಬ ಅಭಿಮಾನಿ ಕೂಡ ಅವರನ್ನು ಬಿಟ್ಟುಕೊಡುವುದಿಲ್ಲ. ಅಷ್ಟರಮಟ್ಟಿಗೆ ವಿಷ್ಣುದಾದಾ ಪ್ರೀತಿ ಅಭಿಮಾನ ಗಳಿಸಿಕೊಂಡಿದ್ದಾರೆ. ಹೌದು ವಿಷ್ಣುವರ್ಧನ್ ಅವರ ಕಾಲೇಜು ದಿನಗಳ ಬಗ್ಗೆ ಇದೀಗ ಒಂದು ಸಂದರ್ಶನದಲ್ಲಿ ಒಂದು ವಿಚಾರ ಬಯಲಾಗಿದೆ. ಚಿತ್ರರಂಗದ ಇನ್ನೊಬ್ಬ ಹಿರಿಯ ನಟ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಾಗೂ ವಿಷ್ಣುವರ್ಧನ್ ಅವರು ಒಳ್ಳೆಯ ಸ್ನೇಹಿತರು. ಕಾಲೇಜು ದಿನಗಳ ಒಂದು ಘಟನೆ ಬಗ್ಗೆ ಇದೀಗ ಸಂದರ್ಶನದಲ್ಲಿ ಮಾಹಿತಿ ಬಿಚ್ಚಿಟ್ಟ ಸುಂದರ್ ರಾಜ್ ಅವರು, ವಿಷ್ಣುವರ್ಧನ್ ಅವರ ಪ್ರೀತಿ ಪ್ರೇಮದ ಸಂವೇದನ ವಿಚಾರವಾಗಿ ಒಂದು ವಿಚಾರವನ್ನು ಹೇಳುತ್ತಾ ಆ ಹುಡುಗಿ ಯಾರೆಂದು ಹೇಳಿಕೊಂಡಿದ್ದಾರೆ.

ಹೌದು ವಿಷ್ಣುವರ್ಧನ್ ಕಾಲೇಜು ದಿನಗಳಲ್ಲಿಯೇ ಫೇಮಸ್ ಆಗಿದ್ದ ನಟ. ಅವರ ಹಿಂಬಾಲಕರು ನಾವೆಲ್ಲ, ಅವನ ಹಿಂದೆ ಇರುತ್ತಿದ್ದೆವು ಎಂದು ಸುಂದರ ರಾಜ್ ಅವರು ಇದೀಗ ಹೇಳಿಕೊಂಡಿದ್ದಾರೆ. ಒಂದು ದಿನ ಕಾಲೇಜು ಬಿಡುತ್ತಿದ್ದಂತೆ ನಟ ಸುಂದರ್ ರಾಜ್ ಅವರ ಕೈಯಿಗೆ ನಟ ವಿಷ್ಣುವರ್ಧನ್ ಅವರು ರೋಜ್ ಕೊಟ್ಟು ಆ ಹುಡುಗಿಗೆ ಇದನ್ನು ಕೊಟ್ಟು ನಾನು ಕೊಟ್ಟೆ ಎಂದು ಹೇಳಲು ಹೇಳಿದ್ದರಂತೆ. ನಂತರ ಸುಂದರರಾಜ ಅವರು ಹೂವನ್ನು ತೆಗೆದುಕೊಂಡು ಹುಡುಗಿ ಬಸ್ಸು ಏರಿದ ತಕ್ಷಣ ತಾವು ಏರಿ ದೂರದವರೆಗೆ ಪ್ರಯಾಣ ಮಾಡಿದ್ದರಂತೆ.

ನಂತರ ಆ ಹುಡುಗಿ ಬಸ್ ಇಳಿದ ಮೇಲೆ ಮೇಲೆ ಸುಂದರ್ ರಾಜ್ ಅವರು ಸಹ ಇಳಿದಿದ್ದು ಅದನ್ನು ಗಮನಿಸಿದ ಆ ಹುಡುಗಿ ನನ್ನನ್ನು ಏಕೆ ಹಿಂಬಾಲಿಸುತ್ತಿದ್ದೀಯ ಎಂದಾಗ ಹೂವನ್ನು ತೋರಿಸಿ, ಇದನ್ನ ವಿಷ್ಣು ಕೊಟ್ಟ, ನಾನು ಕೊಟ್ಟೆ ಎಂದು ಹೇಳಲು ಹೇಳಿದ್ದ ಎಂಬುದಾಗಿ ಹೇಳಿದೆ ಎಂದು ಹೇಳಿಕೊಂಡಿದ್ದಾರೆ.

ಅಸಲಿಗೆ ನಂತರ ಆಗಿದ್ದೇನು.? ವಿಷ್ಣುವರ್ಧನ್ ಕೊಟ್ಟಿದ್ದ ಹೂವನ್ನು ಆ ಹುಡುಗಿ ತೆಗೆದುಕೊಂಡರಾ, ಅಸಲಿಗೆ ಆ ಹುಡುಗಿ ಯಾರು ಎಲ್ಲಿಯವರು ಎಂಬುದಾಗಿ ಪೂರ್ತಿ ಮಾಹಿತಿ ಈ ವಿಡಿಯೋದಲ್ಲಿದೆ ಒಮ್ಮೆ ನೋಡಿ. ಹಾಗೇನೆ ಪೂರ್ತಿ ಮಾಹಿತಿಯ ವಿಡಿಯೋ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು.... ( video credit :  tv9 kannada )