ಚಂದನವನಕ್ಕೆ ಕಂಬ್ಯಾಕ್ ಆದ ಎಕ್ಸ್‌ಕ್ಯೂಸ್‌ ಮಿ’ ಖ್ಯಾತಿಯ ಸುನೀಲ್‌ ರಾವ್‌! ಚಿತ್ರ ಯಾವುದು ಸುನೀಲ್ ಹೇಳಿದ್ದೇನು ?

By Infoflick Correspondent

Updated:Tuesday, June 21, 2022, 08:59[IST]

ಚಂದನವನಕ್ಕೆ ಕಂಬ್ಯಾಕ್ ಆದ ಎಕ್ಸ್‌ಕ್ಯೂಸ್‌ ಮಿ’ ಖ್ಯಾತಿಯ ಸುನೀಲ್‌ ರಾವ್‌! ಚಿತ್ರ ಯಾವುದು ಸುನೀಲ್ ಹೇಳಿದ್ದೇನು ?

ಎಕ್ಸ್‌ಕ್ಯೂಸ್‌ ಮಿ’ ಖ್ಯಾತಿಯ ಸುನೀಲ್‌ ರಾವ್‌ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಬಳಿಕ ಬಣ್ಣದ ಲೋಕದಿಂದ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದರು. ಸುಮಾರು ಒಂದು ದಶಕದ ಬಳಿಕ ಸುನೀಲ್‌ ರಾವ್‌ ಇದೀಗ ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ. 

ಸುನೀಲ್‌ ರಾವ್‌ ನಾಯಕನಾಗಿ ಅಭಿನಯಿಸಿರುವ “ತುರ್ತು ನಿರ್ಗಮನ’ ಇದೇ ಜೂ. 24ರಂದು ತೆರೆ ಕಾಣುತ್ತಿದೆ. ಓರ್ವ ವ್ಯಕ್ತಿಗೆ ತನ್ನ ಜೀವನದ ಕೊನೆಯ ದಿನಗಳನ್ನು ಪುನಃ ಜೀವಿಸಲು ಅವಕಾಶ ಸಿಕ್ಕರೆ ಏನಾಗಲಿದೆ ಎಂಬ ಅತ್ಯಂತ ಆಸಕ್ತಿದಾಯಕ ಕಥಾಹಂದರ ಹೊಂದಿರುವ ತುರ್ತು ನಿರ್ಗಮನದಲ್ಲಿ ಹೇಮಂತ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ.’ ಚಿತ್ರದಲ್ಲಿ ಸುನೀಲ್‌ ರಾವ್‌ ಅವರೊಂದಿಗೆ ಸುಧಾರಾಣಿ, ರಾಜ್‌ ಬಿ. ಶೆಟ್ಟಿ, ಅಚ್ಯುತ ಕುಮಾರ್‌, ಅರುಣಾ ಬಾಲರಾಜ್‌, ಹಿತಾ ಚಂದ್ರಶೇಖರ್‌, ಸಂಯುಕ್ತಾ ಹೆಗ್ಡೆ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇಷ್ಟು ವರ್ಷ ಸಿನಿಮಾ ಮಾಡಲಿಲ್ಲ, ಸಿನಿಮಾದಿಂದ ದೂರವಿದ್ದೆ ಎನ್ನುವ ಭಾವನೆ ಚಿತ್ರರಂಗದಲ್ಲಿ ಮತ್ತು ನನ್ನಲ್ಲಿ ಇದ್ದರೂ, ಈ ಸಿನಿಮಾ ಆ ಎಲ್ಲ ಭಾವನೆಯನ್ನೂ ದೂರ ಮಾಡಲಿದೆ. ನನ್ನ ಮಟ್ಟಿಗೆ “ತುರ್ತು ನಿರ್ಗಮನ’ ಸಿನಿಮಾಕ್ಕಿಂತ ಒಳ್ಳೆಯ ಕಂ ಬ್ಯಾಕ್‌ ಸಿನಿಮಾ ಇನ್ನೊಂದು ಸಿಗೋದಕ್ಕೆ ಸಾಧ್ಯವೇ ಇಲ್ಲ! ಎಂದು ನಟ ಸುನೀಲ್ ಹೇಳಿದ್ದಾರೆ.

ಎಕ್ಸ್‌ಕ್ಯೂಸ್‌ ಮಿ’ ಸಿನಿಮಾದಲ್ಲಿ ತುಂಬ ಜೋಶ್‌ ಆಗಿರುವ, ಎನರ್ಜಿಟಿಕ್‌ ಆಗಿರುವಂಥ ಪಾತ್ರವಿತ್ತು. ಆದ್ರೆ ಈ ಸಿನಿಮಾದಲ್ಲಿ ಅದಕ್ಕೆ ಸಂಪೂರ್ಣ ತದ್ವಿರುದ್ದ ಇರುವಂಥ ಪಾತ್ರ. ಸದಾ ಸೋಂಬೇರಿಯಾಗಿರುವ, ಆಲಸ್ಯವನ್ನೇ ಹೊದ್ದು ಮಲಗಿರುವಂಥ, ತುಂಬ ಉಡಾಫೆಯಾಗಿರುವಂಥ, ಜೀವನದಲ್ಲಿ ಗೊತ್ತು -ಗುರಿಯಿಲ್ಲದ, ಆದ್ರೆ ತನ್ನನ್ನು ತಾನು ತುಂಬ ಶ್ರೇಷ್ಟ ಎಂಬ ಭ್ರಮೆಯಲ್ಲಿರುವಂಥ ವಿಕ್ರಂ ಎಂಬ ಹುಡುಗನ ಪಾತ್ರ ನನ್ನದು. ಇಂಥ ಹುಡುಗನೊಬ್ಬನಿಗೆ ಇದ್ದಕ್ಕಿದ್ದಂತೆ ಲೈಫ್ನ ಎಂಡ್‌ ಸ್ಟೇಜ್‌ ಬಂದಾಗ ಹೇಗೆ ರಿಯಾಕ್ಟ್ ಮಾಡುತ್ತಾನೆ ಅನ್ನೋದು ಸಿನಿಮಾ. ಅದು ಹೇಗೆ ಅನ್ನೋ ಸಸ್ಪೆನ್ಸ್‌ನ ಸ್ಕ್ರೀನ್‌ ಮೇಲೆ ನೋಡಬೇಕು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟಿದ್ದಾರೆ ಸುನೀಲ್‌.

"ಏಕತಾನತೆ ಕಾಡುತ್ತಿದೆ ಎಂಬ ಕಾರಣಕ್ಕೆ ಸಣ್ಣ ಬ್ರೇಕ್ ತೆಗೆದುಕೊಳ್ಳಲು ಬಯಸಿದ್ದೆ. ಬಹಳಷ್ಟು ಹಿಂದೆಯೇ ಮತ್ತೆ ವಾಪಸ್ಸಾಗುವುದಕ್ಕೆ ಯತ್ನಿಸಿದ್ದೆ. ಆದರೆ 6-7 ವರ್ಷಗಳು ವಿಳಂಬವಾಯಿತು. ಅಂತಿಮವಾಗಿ 12 ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದೇನೆ. ಈ ನಡುವೆ ಲೂಸ್ ಕನೆಕ್ಷನ್ ಎಂಬ ವೆಬ್ ಸೀರೀಸ್ ಮಾಡಿದ್ದೆ. ತಾವು ಕಂಡಂತೆ ಸಿನಿಮಾ ರಂಗದಲ್ಲಿ ಈ 12 ವರ್ಷಗಳಲ್ಲಿ ಆಗಿರುವ ಬದಲಾವಣೆ ಎಂದರೆ ಅದು ಫಿಲ್ಮ್ ಕ್ಯಾಮರಾದಿಂದ ಡಿಜಿಟಲ್ ಕ್ಯಾಮರಾ ಎನ್ನುತ್ತಾರೆ ಸುನಿಲ್.