Ramya : ಮೋಹಕ ತಾರೆ ರಮ್ಯಾ ಜೊತೆ ನಟಿಸುತ್ತಿದ್ದಾರಂತೆ ನಟ ಸುನಿಲ್ ರಾವ್..

By Infoflick Correspondent

Updated:Tuesday, May 31, 2022, 12:49[IST]

Ramya :  ಮೋಹಕ ತಾರೆ ರಮ್ಯಾ ಜೊತೆ ನಟಿಸುತ್ತಿದ್ದಾರಂತೆ ನಟ ಸುನಿಲ್ ರಾವ್..


ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸುನಿಲ್ ರಾವ್ ಅವರಿಗೆ ಎಕ್ಸ್ಕ್ಯೂಸ್ ಮಿ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಸಿಕ್ಕಿತು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ ಇವರು, ಹಿನ್ನೆಲೆ ಗಾಯಕರು ಹಾಗೂ ಗೀತ ಸಾಹಿತಿಯೂ ಹೌದು. ಇನ್ನು ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲೂ ನಟಿಸಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕಿ ಮತ್ತು ಸುಗಮ ಸಂಗೀತಗಾರ್ತಿ ಬಿಕೆ ಸುಮಿತ್ರಾ ಅವರ ಪುತ್ರ. ಇವರ ಸಹೋದರಿ ಸೌಮ್ಯ ರಾವ್. ಇವರೂ ಕೂಡ ದಕ್ಷಿಣ ಭಾರತದ ಸಕ್ರಿಯ ಹಿನ್ನೆಲೆ ಗಾಯಕಿ. 

ಇನ್ನು ಸುನಿಲ್ ರಾವ್ ಅವರು ಸೀತಾರಾಂ ಅವರ ಮನ್ವಂತರ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜನನಿ, ಪುನರ್ಜನ್ಮ, ಚದುರಂಗ, ಭಗೀರಥಿ ಸೀರಿಯಲ್ ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲನಟನಾಗಿ ಕೆಂಡದ ಮಳೆ, ಏಳು ಸುತ್ತಿನ ಕೋಟೆ ಸೆರಿದಂತೆ ಕೆಲ ಚಿತ್ರಗಳಲಲ್ಲಿ ನಟಿಸಿದ ಇವರು ಬಾಲಿವುಡ್ ನ ಫ್ರೀಕ್ರಿ ಚಕ್ರ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಫ್ರೀಕಿ ಚಕ್ರ, ಪ್ರೀತಿ ಪ್ರೇಮ ಪ್ರಣಯ, ಎಕ್ಸ್ಕ್ಯೂಸ್ ಮಿ,ಚಪ್ಪಾಳೆ, ಮಸಾಲಾ ಹಾಗೂ ಪ್ರೇಮಿಸಂ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  

ಸುನಿಲ್ ರಾವ್ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, 2018 ರಲ್ಲಿ ಜೆ.ಪಿ.ನಗರದಲ್ಲಿ ಗೆಳತಿ ಶ್ರೇಯಾ ಐಯ್ಯರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೇ 2019 ರಂದು ಸುನಿಲ್ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದರು. ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಸುನೀಲ್ ರಾವ್ ಕಳೆದ ವರ್ಷ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಗ ಅಥರ್ವ್ ರಾವ್ ನೊಂದಿಗಿರುವ ಪೋಟೋಗಳನ್ನು ಶೇರ್ ಮಾಡಿದ್ದರು. 

ಈಗ ಮತ್ತೆ ಬಣ್ಣದ ಲೋಕಕ್ಕೆ ರಿ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಲೂಸ್ ಕನೆಕ್ಷನ್ ಎಂಬ ವೆಬ್ ಸೀರೀಸ್ ನಲ್ಲಿ ಮಿಂಚಿದ್ದು, ಈ ವೆಬ್ ಸಿರೀಸ್ ಅಮೆಜಾನ್ ಪ್ರೈಮ್ ನಲ್ಲಿದೆ. ಇನ್ನು ಇದೀಗ ತುರ್ತು ನಿರ್ಗಮನ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ. ಹೀಗಿರುವಾಗ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ  ಸುನಿಲ್ ರಾವ್ ಅವರು ಮಾತನಾಡಿ, ರಮ್ಯಾ ಅವರ ಜೊತೆಗೆ ಮತ್ತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಅಂತಹ ಆಫರ್ ಸಿಕ್ಕರೆ ಇಬ್ಬರೂ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುವುದು ಗ್ಯಾರೆಂಟಿ.