Rakshita : ಡಿಕೆಡಿ ಸೆಟ್ ನಲ್ಲಿ ಥೇಟ್ ನಟಿ ರಕ್ಷಿತಾ ಪ್ರೇಮ್ ಅವರಂತೆಯೇ ನಟಿಸಿದ ಸೂರಜ್..! ಬಿದ್ದು ಬಿದ್ದು ನಗಿಸಿದ ವಿಡಿಯೋ ಇಲ್ಲಿದೆ

By Infoflick Correspondent

Updated:Saturday, June 11, 2022, 15:01[IST]

Rakshita : ಡಿಕೆಡಿ ಸೆಟ್ ನಲ್ಲಿ ಥೇಟ್ ನಟಿ ರಕ್ಷಿತಾ ಪ್ರೇಮ್ ಅವರಂತೆಯೇ ನಟಿಸಿದ ಸೂರಜ್..! ಬಿದ್ದು ಬಿದ್ದು ನಗಿಸಿದ ವಿಡಿಯೋ ಇಲ್ಲಿದೆ

ಕಳೆದವಾರ ಜೀ ಕನ್ನಡದ ಎರಡು ಕ್ಯಾತ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ ಸೀಸನ್ 4 ಮತ್ತು ಡಿಕೆಡಿ ಕಾರ್ಯಕ್ರಮ ಮಹಾಸಂಗಮದ ಕಾರ್ಯಕ್ರಮ ನೆರವೇರಿತು. ಪ್ರತಿ ಸೀಸನ್ ಗಳಲ್ಲಿ ಈ ರೀತಿ ಎರಡು ಕಾರ್ಯಕ್ರಮಗಳನ್ನು ಒಟ್ಟಿಗೆ ಸೇರಿಸಿ ಮಹಾಸಂಗಮ ಶೋ ಮಾಡುವುದು ಜೀ ಕನ್ನಡಕ್ಕೆ ಹೊಸದೇನಲ್ಲ. ಕಳೆದವಾರ ನಟ ಶಿವಣ್ಣ, ರವಿಚಂದ್ರನ್, ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್, ರಚಿತಾ ರಾಮ್ ಅವರ ಸಮ್ಮುಖದಲ್ಲಿ ನಿರೂಪಕರಾದ ಅನುಶ್ರೀ ಮತ್ತು ಮಾಸ್ಟರ್ ಆನಂದ್ ಅವರೊಟ್ಟಿಗೆ ಜೊತೆಗೆ ಎರಡು ಕಾರ್ಯಕ್ರಮದ ಎಲ್ಲಾ ಕಂಟೆಸ್ಟೆಂಟ್ ಗಳು ಕಾಣಿಸಿಕೊಂಡಿದ್ದರು. ಮಹಾಸಂಗಮ ಶೋ ಭರ್ಜರಿಯಾಗಿ ನೆರವೇರಿತು ಎನ್ನಬಹುದು.

ಆಗ ಪ್ರತಿ ಸೀಸನ್ ಗಳಲ್ಲಿ ಕಂಟೆಸ್ಟೆಂಟ್ ಗಳು ಕೆಲ ಜಡ್ಜಸ್ ಗಳ ಸ್ಪೂಫ್ ವಿಡಿಯೋಗಳನ್ನು ಮಾಡುತ್ತಾರೆ. ಈ ಡಿಕೆಡಿ ವೇದಿಕೆಯಲ್ಲಿ ನಟಿ ರಕ್ಷಿತಾ ಪ್ರೇಮ್ ಅವರು ಯಾವ ರೀತಿ ಸೆಟ್ಟಿಗೆ ಬರುತ್ತಾರೆ, ಹೇಗೆ ಅವರ ಚಟುವಟಿಕೆಗಳು ಇರುತ್ತವೆ, ಜೊತೆಗೆ ಅವರು ಯಾವ ರೀತಿ ಮಾಡುತ್ತಾರೆ ಎಂಬುದಾಗಿ ನಟನೆ ಮೂಲಕ ತೋರಿಸುವ ಸಾಹಸಕ್ಕೆ ಕೈಹಾಕುತ್ತಾರೆ. ಈ ಬಾರಿ ಮಹಾಸಂಗಮದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸೂರಜ್ ಅವರು ನಟಿ ರಕ್ಷಿತಾ ಪ್ರೇಮ್ ಅವರ ಹಾಗೆ ನಟನೆ ಮಾಡಿದ್ದರು. ನಿರೂಪಕಿ ಅನುಶ್ರೀ ಅವರ ಹಾಗೇ ನಿರೂಪಣೆ ಮಾಡಿದ ಡುಪ್ಲಿಕೇಟ್ ಅನುಶ್ರೀ ವಾಣಿಯವರು ಸಹ ಚೆನ್ನಾಗಿ ಅಭಿನಯ ಮಾಡಿದರು. ಹಾಗೆ ಇನ್ನು ಸಾಕಷ್ಟು ಕಲಾವಿದರು ಸ್ಪೂಫ್ ವಿಡಿಯೋದಲ್ಲಿ ಕಾಣಿಸಿಕೊಂಡರು ಎನ್ನಬಹುದು.   

ಆದರೆ ಎಲ್ಲರೂ ಹೆಚ್ಚು ನಕ್ಕಿದ್ದು ಮಾತ್ರ ರಕ್ಷಿತಾ ಡೂಪ್ಲಿಕೇಟ್ ಪಾತ್ರ ಮಾಡಿದ ಕಾಮಿಡಿ ನಟ ಸೂರಜ್ ಅವರ ನಟನೆಗೆ ಎಂದು ಹೇಳಬಹುದು. ಅವರ ಅಭಿನಯ ಎಷ್ಟರಮಟ್ಟಿಗೆ ಅದ್ಭುತವಾಗಿತ್ತು ಎಂದರೆ, ಇಲ್ಲಿದೆ ನೋಡಿ ಅದೇ ವಿಡಿಯೋ. ನಿಮಗೂ ಸಹ ರಕ್ಷಿತ ಅವರ ಹಾಗೇನೇ ಸೂರಜ್ ನಟನೆ ಮಾಡಿದರು ಎಂದೆನಿಸಿದಲ್ಲಿ ವಿಡಿಯೋಗೆ ಒಂದು ಮೆಚ್ಚುಗೆ ತಿಳಿಸಿ. ವಿಡಿಯೋ ಶೇರ್ ಮಾಡಿ ಧನ್ಯವಾದಗಳು...