ಕೊರೊನಾ ಮಹಾಮಾರಿಗೆ ಬಲಿಯಾದ ಮಹಾನ್ ವ್ಯಕ್ತಿ: ವೀರಪ್ಪನ್ ಲೇಖನಗಳನ್ನ ಬರೆದು ಫೇಮಸ್ ಆಗಿದ್ದವರು ಇನ್ನಿಲ್ಲ..

Updated: Friday, June 11, 2021, 19:09 [IST]

ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದ ಸುರೇಶ್ಚಂದ್ರ ಅವರು ಇಂದು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯೆಜಿಸಿದ್ದಾರೆ. ಸುರೇಶ್ಚಂದ್ರ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ಇನ್ನು ಸುರೇಶ್ಷಂದ್ರ ಅವರಿಗೆ ಬರಹ, ಚಿತ್ರ ಕಥೆ, ನಾಟಕ ಹಾಗೂ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. 2019 ರಲ್ಲಿ ಸಂಜೆವಾಣಿ ಪತ್ರಿಕೆಯ ಸಂಪಾದಕ ಹುದ್ದೆಯಿಂದ ನಿವೃತ್ತಿ ಪಡೆದಿದ್ದರು. ಸಂಜೆವಾಣಿ ಪತ್ರಿಕೆ ಆರಂಭವಾದಾಗಿನಿಂದಲೂ ಸುರೇಶ್ಚಂದ್ರ ಅವರು ಸೇವೆ ಸಲ್ಲಿಸಿದ್ದರು. ಸುರೇಶ್ಚಂದ್ರ ಅವರು ಬರೆಯುತ್ತಿದ್ದ ದಂತಚೋರ ವಿರಪ್ಪನ್ ಲೇಖನಗಳು ತುಂಬಾ ಫೇಮಸ್ ಆಗಿದ್ದವು. ವೀರಪ್ಪನ್ ಹುಟ್ಟು, ಅವನ ಬದುಕು ಹಾಗೂ ಕಾಡಿನಲ್ಲಿ ಕದಿಯುತ್ತಿದ್ದ ದಂತ, ಶ್ರೀಗಂಧಗಳ ಬಗ್ಗೆ ಬರೆಯುತ್ತಿದ್ದರು.    

ಇನ್ನು ಚೆಲುವಿನ ಚಿತ್ತಾರ, ಉಗ್ರಂ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ಇಂದು ಅವರ ಊರಾದ ಮಧುಗಿರಿಯ ಲಿಂಗೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಅವರ ನಿಧನಕ್ಕೆ ಚಿತ್ರರಂಗ, ಪತ್ರಿಕೋದ್ಯಮದ ಹಲವರು ಸಂತಾಪ ಸೂಚಿಸಿದ್ದಾರೆ.