ಆಂಕರ್ ಅನುಶ್ರೀ ಅವರಂತೆಯೇ ದಿನ ದಿನಕ್ಕೂ ಫೇಮಸ್ ಆಗುತ್ತಿದ್ದಾರೆ ಮತ್ತೊಬ್ಬ ನಿರೂಪಕಿ: ಯಾರವರು..?

By Infoflick Correspondent

Updated:Tuesday, September 6, 2022, 15:37[IST]

ಆಂಕರ್ ಅನುಶ್ರೀ ಅವರಂತೆಯೇ ದಿನ ದಿನಕ್ಕೂ ಫೇಮಸ್ ಆಗುತ್ತಿದ್ದಾರೆ ಮತ್ತೊಬ್ಬ ನಿರೂಪಕಿ: ಯಾರವರು..?

ಕನ್ನಡದ ಫೇಮಸ್ ಹಾಗೂ ಏಕೈಕ ಆಂಕರ್ ಅಂದರೆ ಅದು ಅನುಶ್ರೀ. ಹಲವು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಆಂಕರಿಂಗ್ ಮಾಡಿಕೊಂಡು ಜನ ಮನ  ಗೆದ್ದಿರುವ ಅನುಶ್ರೀ ಅವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿದ್ದಾರೆ. ಜೀ ಕನ್ನಡ ವಾಹಿನಿಯ ಪ್ರತಿಯೊಂದು ರಿಯಾಲಿಟಿ ಶೋಗಳಿಗೂ ಅನುಶ್ರೀ ಆಂಕರಿಂಗ್ ಮಾಡುತ್ತಾರೆ. ಇನ್ನು ಅನುಶ್ರೀ ಬಿಟ್ಟರೆ ಕನ್ನಡ ವಾಹಿನಿಗಳಲ್ಲಿ ಆಂಕರಿಂಗ್ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ಮಾಸ್ಟರ್ ಆನಂದ್, ಅನುಪಮಾ ಗೌಡ, ಅಂಕಿತ ಅಮರ್ ಹಾಗೂ ಅಕುಲ್ ಬಾಲಜಿ ಆಂಕರಿಂಗ್ ಮಾಡುತ್ತಾರೆ. 

ಇವರಲ್ಲಿ ಫೇಮಸ್ ಆಂಕರ್ ಎಂದರೆ ಅದು ಅನುಶ್ರೀ ಅವರೇ. ಜೋರಾಗಿ ಕಿರುಚಿಕೊಂಡು ಮಾತನಾಡುತ್ತಾ, ಎಲ್ಲರನ್ನು ನಗಿಸುತ್ತಾರೆ. ಇನ್ನುಇವರಿಗೆ ಸೆಡ್ಡು ಹೊಡೆಯಲು ಈಗ ಮತ್ತೊಬ್ಬರು ಆಂಕರ್ ಬಂದಿದ್ದಾರೆ. ಹೌದು. ಆಂಕರಿಂಗ್ ಗೆ ಇರೋದು ಅನುಶ್ರೀ ಒಬ್ಬರೆ ಎಂದುಕೊಂಡವರಿಗೆ ಶಾಕ್ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಅನುಶ್ರೀ ಅವರು ಆಂಕರಿಂಗ್ ಮಾಡುತ್ತಾರೆ. ಆದರೆ ಬೇರೆ ಬೇರೆ ಕನ್ನಡ ವಾಹಿನಿಯಲ್ಲಿ ಆಂಕರಿಂಗ್ ಗೆ ಪ್ರತಿ ಸಲವೂ ಎಕ್ಸ್ ಪರಿಮೆಂಟ್ ಮಾಡಲಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಂತೂ ಭೂಮಿಕಾ ಶೆಟ್ಟಿ, ಅಂಕಿತಾ ಅಮರ್, ಅನುಪಮಾ ಗೌಡ ಹೀಗೆ ಹಲವು ಕಲಾವಿದರ ಕೈಯಲ್ಲಿ ಆಂಕರಿಂಗ್ ಮಾಡಿಸಲಾಯ್ತು. ಆದರೆ ಇವರ್ಯಾರೂ ಸೆಟ್ ಆಗಲೇ ಇಲ್ಲ. 

ಆದರೆ ಇದೀಗ ಜೀ ಕನ್ನಡದಲ್ಲಿ ಮೂವರು ಆಂಕರ್‌ ಗಳಿದ್ದಾರೆ. ಒಬ್ಬರು ಮಾಸ್ಟರ್‌ ಆನಂದ್‌, ಆಂಕರ್‌ ಅನುಶ್ರೀ ಹಾಗೂ ಶ್ವೇತಾ ಚೆಂಗಪ್ಪಾ. ಸದ್ಯ ಜೋಡಿ ನಂ.1 ಕಾರ್ಯಕ್ರಮವನ್ನು ಶ್ವೇತಾ ಚೆಂಗಪ್ಪಾ ನಡೆಸಿಕೊಡುತ್ತಿದ್ದಾರೆ. ನಿಧಾನವಾಗಿ ಅನುಶ್ರೀಗೆ ಶ್ವೇತಾ ಅವರು ಸೆಡ್ಡು ಹೊಡೆಯುತ್ತಿದ್ದಾರೆ. ದಿನ ದಿನಕ್ಕೂ ತಮ್ಮ ಆಂಕರಿಂಗ್ ಮೂಲಕವೇ ಫೇಮಸ್ ಆಗುತ್ತಿದ್ದಾರೆ. ಡ್ಯಾನ್ಸ್ ಶೋ ಒಂದಕ್ಕೆ ನಿರೂಪಣೆ ಮಾಡುವ ಮೂಲಕ ಆಂಕರಿಂಗ್ ಶುರು ಮಾಡಿದ ಶ್ವೇತಾ ಚೆಂಗಪ್ಪಾ, ಈಗ ನಿರೂಪಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.