Anushree : ಅನುಶ್ರೀ ಮಾಡುತ್ತಿದ್ದ ನಿರೂಪಣೆಯನ್ನ ಶ್ವೇತಾ ಚೆಂಗಪ್ಪ ಮುಂದುವರೆಸಲಿದ್ದಾರಂತೆ..! ಎಲ್ಲಿ ಗೊತ್ತಾ

By Infoflick Correspondent

Updated:Saturday, June 18, 2022, 11:38[IST]

Anushree : ಅನುಶ್ರೀ ಮಾಡುತ್ತಿದ್ದ ನಿರೂಪಣೆಯನ್ನ ಶ್ವೇತಾ ಚೆಂಗಪ್ಪ ಮುಂದುವರೆಸಲಿದ್ದಾರಂತೆ..! ಎಲ್ಲಿ ಗೊತ್ತಾ

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಪೈಪೋಟಿ ವಿಚಾರಗಳು ನಡೆಯುತ್ತಲೇ ಇರುತ್ತವೆ. ಮನರಂಜನೆ ಕಾರ್ಯಕ್ರಮಗಳ ನಿರೂಪಣೆ ಕುರಿತಾಗಿ ಅಥವಾ ಕಾರ್ಯಕ್ರಮದಲ್ಲಿ ನಟನೆ ಕುರಿತಾಗಿ ಹೆಚ್ಚು ಬದಲಾವಣೆ ಆಗುತ್ತಲೇ ಇರುತ್ತವೆ. ಹೌದು  ಜನರನ್ನು ವಾರಂತ್ಯಕ್ಕೆ ರಂಜಿಸಲು ಕನ್ನಡದ ಕಿರುತೆರೆಯ ಚಾನೆಲ್ ಗಳು ಹೆಚ್ಚು ಶೋಗಳನ್ನು ಕಿರುತೆರೆಗೆ ತೆರೆಗೆ ತರಲು ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸಲು ನಾನಾರೀತಿ ಪ್ರಯತ್ನ ಪಟ್ಟು ದೊಡ್ಡದಾಗಿಯೇ ಬರುತ್ತಾರೆ. ಹೌದು ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ನಿರೂಪಕರು ಹಾಗೂ ನಿರೂಪಕಿಯರು ಇದ್ದಾರೆ. ಅವರದೇ ಆದ ಮಾತಿನ ಶೈಲಿ ಮೂಲಕ ಜನರ ನಿರೀಕ್ಷೆ ಮತ್ತು ಅವರನ್ನು ನಗೆಯಲ್ಲಿ ತೇಲಾಡುವಂತೆ ಮಾತನಾಡುತ್ತಾ, ಅವರಿಗೆ ಪ್ರೀತಿ ನೀಡುತ್ತಾ ಅವರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆ ಸಾಲಿನಲ್ಲಿ ಬರುವ ನಟಿ ಹಾಗೂ ನಿರೂಪಕಿ ಎಂದರೆ ಅದು ಹೆಚ್ಚು ಅನುಶ್ರೀ ಅವರ ಹೆಸರೆ ಈಗೀಗ ಹೆಚ್ಚು ಕೇಳಿ ಬರುತ್ತಿದೆ. ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಶ್ವೇತ ಚಂಗಪ್ಪ ಹಾಗೆ ಇತ್ತೀಚಿನ ದಿನಗಳಲ್ಲಿ ನಟಿ ಅನುಪಮ ಗೌಡ ಅವರ ಹೆಸರು ಕೂಡ ಕೇಳಿ ಬಂದಿದೆ ಎನ್ನಬಹುದು. ಹೌದು ಇವರೆಲ್ಲರೂ ನಿರೂಪಣೆಯ ಲೋಕದಲ್ಲಿ ದೊಡ್ಡದಾಗಿಯೇ ಸಾಧನೆ ಮಾಡಿದ್ದಾರೆ. ಇತ್ತೀಚಿಗಷ್ಟೇ ಜೀ ಕನ್ನಡದಲ್ಲಿ ಜೋಡಿ ನಂಬರ್ ಒಂದು ಕಾರ್ಯಕ್ರಮ ಆರಂಭವಾಗಿದೆ. ಈ ಶೋಗೆ ನೆನಪಿರಲಿ ಪ್ರೇಮ್ ಹಾಗೂ ಮಾಳವಿಕಾ ಜಡ್ಜಸ್ ಆಗಿದ್ದಾರೆ. ಹಾಗೂ ಕನ್ನಡದ ಕೆಲ ಸ್ಟಾರ್ ಜೋಡಿಗಳ ನಡುವೆ ಕೆಲವು ಟಾಸ್ಕ್ ಗಳ ಮೂಲಕ ಈ ಶೋ ನಡೆಯಲಿದೆ. ಪ್ರಮೋದಲ್ಲಿ ನಿರೂಪಕಿ ಅನುಶ್ರೀಯವರು ಕಾಣಿಸಿಕೊಂಡಿದ್ದರು.

ಬಳಿಕ ಇವರೇ ಈ ಕಾರ್ಯಕ್ರಮದ ನಿರೂಪಣೆಯನ್ನು ಕೂಡ ಮಾಡಲಿದ್ದಾರೆನೋ ಎಂಬಂತೆ ಕಂಡಿದ್ದರು. ಆದರೆ ಇದೀಗ ಅದು ಬದಲಾಗಿದೆ. ಹೌದು ನಟಿ ಅನುಶ್ರೀಯ ಜಾಗವನ್ನು ಮಜಾ ಟಾಕೀಸ್ ಖ್ಯಾತಿಯ ರಾಣಿ, ಕಿರುತೆರೆ ಸೀರಿಯಲ್ ಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಶ್ವೇತ ಚಂಗಪ್ಪ ಅವರು ನಿರೂಪಕಿಯಾಗಿ ಬರಲಿದ್ದಾರಂತೆ. ಈ ಮೂಲಕ ಶ್ವೇತ ಚಂಗಪ್ಪ ಅವರು ಮತ್ತೆ ತಮ್ಮ ನಿರೂಪಣೆಯನ್ನು ಈಗ  ಆರಂಭ ಮಾಡಿದ್ದು, ಅವರ ಅಭಿಮಾನಿಗಳಿಗೆ ಈ ಸುದ್ದಿಯು ಖುಷಿ ತಂದಿದೆಯಂತೆ. ಅಸಲಿಗೆ ಈ ಕಾರ್ಯಕ್ರಮ ಮೂಲಕ ಮತ್ತೆ ನಿರೂಪಕಿಆಗಿರುವ ವಿಚಾರವಾಗಿ ಶ್ವೇತಾ ಚೆಂಗಪ್ಪ ಅವರು ಹೇಳಿದ್ದೇನು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಹಾಗೆ ನೀವು ಕೂಡ ಜೋಡಿ ನಂಬರ್ ಒಂದು ವೇದಿಕೆಯಲ್ಲಿ ನಿರೂಪಕಿಯಾಗಿ ಶ್ವೇತ ಚಂಗಪ್ಪ ಅವರನ್ನೇ ನೋಡುವುದು ಇಷ್ಟ ಎಂದಾದರೆ ಅನಿಸಿಕೆ ತಿಳಿಸಿ ಮತ್ತು ವಿಡಿಯೋವನ್ನು ತಪ್ಪದೇ ಕೊನೆಯವರೆಗೂ ನೋಡಿ ಧನ್ಯವಾದಗಳು...( video credit : kannada zone )