Swetha Srivastava : ಮಾಲ್ಡಿವ್ಸ್ ಬೀಚ್ ನಲ್ಲಿ ನಶೆ ಏರುವಂತೆ ಡ್ಯಾನ್ಸ್ ಮಾಡಿದ ಶ್ವೇತಾ ಶ್ರೀವಾತ್ಸವ್..! ಫಿದಾ ಆದ ಫ್ಯಾನ್ಸ್

By Infoflick Correspondent

Updated:Wednesday, May 18, 2022, 11:06[IST]

Swetha Srivastava :  ಮಾಲ್ಡಿವ್ಸ್ ಬೀಚ್ ನಲ್ಲಿ ನಶೆ ಏರುವಂತೆ ಡ್ಯಾನ್ಸ್ ಮಾಡಿದ ಶ್ವೇತಾ ಶ್ರೀವಾತ್ಸವ್..! ಫಿದಾ ಆದ ಫ್ಯಾನ್ಸ್

ಕನ್ನಡ ಸಿನಿಮಾರಂಗದ ಖ್ಯಾತ ನಟಿ ಶ್ವೇತಾ ಶ್ರೀವಾತ್ಸವ್ ಅವರ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಮೊದಲ ಬಾರಿ ಬಣ್ಣ ಹಚ್ಚಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಇವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಕಿರುಗೂರಿನ ಗಯ್ಯಾಳಿಗಳು ಚಿತ್ರ. ಹೌದು ಕಿರಗೂರಿನ ಗಯ್ಯಾಳಿಗಳು ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಸಿನಿಮಾದಲ್ಲಿ ಹಳ್ಳಿ ಸೊಗಡಿನ ಪಾತ್ರಗಳು ಎಲ್ಲರನ್ನೂ ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದ್ದವು. ನಟಿ ಶ್ವೇತಾ ಶ್ರೀವಾತ್ಸವ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಬದಲಿಗೆ ಅವರು ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಇದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮಗಳ ಜೊತೆ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡು ತುಂಬಾ ಖುಷಿಯಲ್ಲಿ ತೇಲಾಡುತ್ತಾರೆ.   

ಶ್ವೇತಾ ಶ್ರೀವಾತ್ಸವ್ ಅವರು ಸದಾ ಮಗಳ ಜೊತೆಗೆ ಔಟಿಂಗ್ ಹೋಗುವ ಮತ್ತು ಪ್ರವಾಸ ಕೈಗೊಳ್ಳುವ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಲೆ ಇರುತ್ತಿದ್ದು ಯೋಗದ ವಿಡಿಯೋಗಳನ್ನ ಸಹ ಹಂಚಿಕೊಳ್ಳುತ್ತಾರೆ. ಹಾಗೇನೇ ಹೆಚ್ಚು ವಿಡಿಯೋ ಮೂಲಕ ಅವರ ಅಭಿಮಾನಿಗಳಿಗೆ ತಾವು ಏನು ಮಾಡುತ್ತಿದ್ದಾರೆ ಎಂಬುದಾಗಿ ಹೇಳುತ್ತಲೇ ಇರುತ್ತಾರೆ. ಶ್ವೇತಾ ಶ್ರೀವಾತ್ಸವ್ ಅವರು ಇದೀಗ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೌದು ಅತ್ತ ಮಾಲ್ಡೀವ್ಸ್ ಅಲ್ಲಿ ನಾನಿದ್ದೇನೆ ಎನ್ನುವ ನಿಟ್ಟಿನಲ್ಲಿ ಕ್ಯಾಪ್ಷನ್ ನೀಡಿ ಸಕ್ಕತಾಗಿ ನೃತ್ಯ ಮಾಡಿದ್ದಾರೆ ಶ್ವೇತಾ. ಹಾಗೆ ಬೀಚ್ ದಡದಲ್ಲಿ ನಿಂತು ಡಾನ್ಸ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಳಿಕ ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು, ಅಭಿಮಾನಿಗಳು ಕೂಡ ಖುಷಿ ವ್ಯಕ್ತಪಡಿಸಿ, ವಿಡಿಯೋಗೆ ಮೆಚ್ಚುಗೆ ತಿಳಿಸಿ, ಹೆಚ್ಚು ಶೇರ್ ಕೂಡ ಮಾಡುತ್ತಿದ್ದಾರೆ. ನೀವು ಕೂಡ ನಟಿ ಶ್ವೇತಾ ಶ್ರೀವಾತ್ಸವ್ ಮಾಡಿದ ನೃತ್ಯದ ವಿಡಿಯೋ ನೋಡಿ. ಹಾಗೆ ನಿಮಗೂ ಸಹ ಇಷ್ಟವಾದಲ್ಲಿ ಶೇರ್ ಮಾಡಿ...